Site icon Vistara News

Sexual Harassment: ಎಲ್ಲಾ ತಂದೆಯರೂ ಹೀಗೇ ಮಾಡುತ್ತಾರೆ ಎನ್ನುತ್ತ ಮಗಳನ್ನೇ ಗರ್ಭಿಣಿ ಮಾಡಿದ್ದ ನೀಚ ತಂದೆಗೆ 101 ವರ್ಷ ಶಿಕ್ಷೆ!

Sexual Harassment

ತಂದೆ ತಮ್ಮ ಹೆಣ್ಣುಮಕ್ಕಳ ರಕ್ಷಕನಾಗಿರುತ್ತಾನೆ. ಆದರೆ ಈ ರಕ್ಷಕನೇ ಭಕ್ಷಕನಾದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವವರು ಯಾರು? ಕೆಲವು ತಂದೆಯರು ತಮ್ಮ ಹೆಣ್ಣು ಮಕ್ಕಳನ್ನು ನೀಚರಿಂದ ಕಾಪಾಡಲು ತಮ್ಮ ಪ್ರಾಣವನ್ನೇ ಕೊಡುತ್ತಾರೆ. ಆದರೆ ಕೆಲವರು ತಮ್ಮ ಹೆಣ್ಣು ಮಕ್ಕಳನ್ನೇ ಕಾಮದಾಟಕ್ಕೆ(Sexual Harassment) ಬಳಸಿಕೊಳ್ಳುತ್ತಾರೆ. ಅಂತಹ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಆಕೆಯ ತಂದೆಯೇ ಆರು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೇರಳದಲ್ಲಿ ನಡೆದಿದ್ದು, ಕೋರ್ಟ್ ಆತನಿಗೆ ತಕ್ಕ ಶಿಕ್ಷೆ ವಿಧಿಸಿದೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ, ಇದು ವೈರಲ್ ಆಗಿದ್ದು ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.  ನೀಚ ತಂದೆಯ ಕೃತ್ಯದ ವಿರುದ್ಧ ಜನರು ಕಿಡಿಕಾರಿದ್ದಾರೆ. ಇದೀಗ ಈ ಪಾಪಿ ತಂದೆಗೆ ಕೋರ್ಟ್‌ ಕಠಿಣ ಶಿಕ್ಷೆ ವಿಧಿಸಿದೆ.

ಆರೋಪಿ ಮುಹಮ್ಮದ್ ಎಚ್ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ. ಈತ ತನ್ನ 10 ವರ್ಷದ ಮಗಳಿಗೆ ʼಎಲ್ಲಾ ತಂದೆಯರು ತಮ್ಮ ಹೆಣ್ಣು ಮಕ್ಕಳಿಗೆ ಈ ರೀತಿ ಮಾಡುತ್ತಾರೆʼ ಎಂದು ಹೇಳುವ ಮೂಲಕ ಆಕೆಯನ್ನು ಆರು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ತಂದೆ ಮಗಳ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಇದರ ಪರಿಣಾಮವಾಗಿ ಬಾಲಕಿ 16ನೇ ವಯಸ್ಸಿಗೆ ಗರ್ಭಿಣಿಯಾಗಿದ್ದಾಳೆ. ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಈ ವಿಚಾರ ಬಯಲಿಗೆ ಬಂದಿತ್ತು.

ಈ ಬಗ್ಗೆ ಮಗಳು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಮಕ್ಕಳ ರಕ್ಷಣೆ ಕಾಯ್ದೆ, 2012 (ಪೋಕ್ಸೊ ಕಾಯ್ದೆ), ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಬಾಲನ್ಯಾಯ ಕಾಯ್ದೆ (ಜೆಜೆ ಕಾಯ್ದೆ) ಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ಇದನ್ನೂ ಓದಿ: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

ಡಿಎನ್‍ಎ ಪರೀಕ್ಷೆಯಲ್ಲಿ ಸತ್ಯಾಂಶ ತಿಳಿದುಬಂದಿದೆ. ಹಾಗಾಗಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ ಕೇರಳ ನ್ಯಾಯಾಲಯವು ಮುಹಮ್ಮದ್‍ಗೆ ಜೀವಾವಧಿ ಶಿಕ್ಷೆಯೊಂದಿಗೆ 101 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಂದರೆ ಹಲವು ಪ್ರತ್ಯೇಕ ಶಿಕ್ಷೆ ಸೇರಿ 101 ವರ್ಷ ಶಿಕ್ಷೆಯಾಗುತ್ತದೆ. ಈ ಶಿಕ್ಷೆಯನ್ನು ಜೀವಿತಾವಧಿಯಲ್ಲಿ ಒಟ್ಟಿಗೇ ಅನುಭವಿಸಬೇಕಾಗುತ್ತೆ.

Exit mobile version