Site icon Vistara News

Shravan 2024: ನಾಳೆಯಿಂದ ಶ್ರಾವಣ ಮಾಸ ಆರಂಭ; ಶುಭ ಕಾರ್ಯಗಳನ್ನು ಮಾಡಲು ಈ ತಿಂಗಳು ಸೂಕ್ತ ಏಕೆ?

Shravan 2024


ಬೆಂಗಳೂರು: ಹಿಂದೂ ಪಂಚಾಂಗದಲ್ಲಿ ಬರುವ 12 ಮಾಸಗಳಲ್ಲಿ ಶ್ರಾವಣ ಮಾಸ (Shravan 2024) ಐದನೇ ಮಾಸವಾಗಿದೆ. ಎಲ್ಲಾ ಮಾಸಗಳು ಹುಣ್ಣಿಮೆಯ ದಿನ ಪ್ರಾರಂಭವಾಗುತ್ತದೆ ಮತ್ತು ಆ ದಿನ ಬರುವ ನಕ್ಷತ್ರದ ಹೆಸರಿನಿಂದ ಆ ಮಾಸವನ್ನು ಕರೆಯಲಾಗುತ್ತದೆ. ಅದರಂತೆ ಈ ಮಾಸ ಪ್ರಾರಂಭವಾಗುವ ಹುಣ್ಣಿಮೆಯ ದಿನ ಶ್ರವಣ ನಕ್ಷತ್ರ ಬಂದ ಕಾರಣ ಈ ಮಾಸಕ್ಕೆ ಶ್ರಾವಣ ಮಾಸ ಎಂದು ಕರೆಯುತ್ತಾರೆ. ಈ ಮಾಸ ಹಿಂದೂಗಳಿಗೆ ಬಹಳ ಶ್ರೇಷ್ಠವಾದ ಹಾಗೂ ವಿಶೇಷವಾದ ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವ, ಪಾರ್ವತಿ, ಲಕ್ಷ್ಮಿ, ವಿಷ್ಣು ಸೇರಿದಂತೆ ಅನೇಕ ದೇವಾನುದೇವತೆಗಳ ಪೂಜೆ ಮಾಡುತ್ತಾರೆ. ಹಾಗೇ ಮದುವೆ, ಮುಂಜಿಯಂತಹ ಶುಭ ಕಾರ್ಯಗಳನ್ನು ಈ ಮಾಸದಲ್ಲಿ ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್‌ನಲ್ಲಿ 2024ರಲ್ಲಿ ಶ್ರಾವಣ ಮಾಸ ಆಗಸ್ಟ್ 5ರ ಸೋಮವಾರದಂದು ಪ್ರಾರಂಭವಾಗಿ ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಕೊನೆಗೊಳ್ಳುತ್ತದೆ. ಹಾಗಾಗಿ ಈ ಮಾಸದ ವಿಶೇಷತೆ ಏನು ಮತ್ತು ಶುಭ ಕಾರ್ಯಗಳನ್ನು ಮಾಡಲು ಈ ಮಾಸ ಸೂಕ್ತ ಏಕೆ ಎಂಬುದನ್ನು ತಿಳಿಯೋಣ.

Shravanmasa 2024

ಶ್ರಾವಣ ಮಾಸದ ವಿಶೇಷತೆ:

ಶ್ರಾವಣ ಮಾಸ ಧಾರ್ಮಿಕ ಕಾರ್ಯಗಳಿಗೆ ಬಹಳ ಉತ್ತಮವಾದ ಮಾಸವಾಗಿದೆ. ಈ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಈ ಮಾಸದಲ್ಲಿಯೇ ಹೆಚ್ಚು ಮಾಡುತ್ತಾರೆ. ಅಲ್ಲದೇ ಯಾವುದೇ ಶುಭ ಕಾರ್ಯಗಳನ್ನು ಮಾಡಲು ಹಾಗೂ ಹೊಸ ಕೆಲಸಗಳನ್ನು ಆರಂಭಿಸಲು ಈ ಮಾಸ ಬಹಳ ಪ್ರಶಸ್ತವಾಗಿದೆ.

ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳು ಒಂದರ ನಂತರ ಒಂದು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಮಾಸದ ಪ್ರತಿದಿನವೂ ಹಬ್ಬವೇ ಇರುತ್ತದೆ. ಹಾಗಾಗಿ ಶ್ರಾವಣ ಮಾಸದ ಎಲ್ಲಾ ದಿನಗಳು ಬಹಳ ಶುಭವೇ ಆಗಿರುತ್ತದೆ. ಆದಕಾರಣ ಈ ಶುಭ ದಿನಗಳಲ್ಲಿ ಶುಭ ಕಾರ್ಯ ಮಾಡಿದರೆ ಅದಕ್ಕೆ ಬಹಳ ಉತ್ತಮವಾದ ಫಲ ಶೀಘ್ರದಲ್ಲಿಯೇ ಸಿಗುತ್ತದೆ ಎಂಬ ನಂಬಿಕೆ ಇದೆ.

ಅಲ್ಲದೇ ಈ ಮಾಸದಲ್ಲಿ ಪ್ರಕೃತಿಯಲ್ಲಿನ ಗಿಡಮರಗಳು ಚಿಗುರೊಡೆದು ಹಚ್ಚಹಸಿರಾಗಿ, ಹೂಗಳನ್ನು ಬಿಟ್ಟು ಬಣ್ಣಗಳಿಂದ ಕಂಗೊಳಿಸುತ್ತಾ ಸಂತಸದಿಂದ ಇರುತ್ತದೆಯಂತೆ. ಹಾಗೇ ಪ್ರಾಣಿ ಪಕ್ಷಿಗಳು ಕೂಡ ಉಲ್ಲಾಸದಿಂದ ಇರುತ್ತದೆಯಂತೆ. ಇದನ್ನು ಕಂಡು ದೈವಾನುದೇವತೆಗಳು ಕೂಡ ಸಂಭ್ರಮ ಪಡುತ್ತಾರಂತೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಿದರೂ ದೇವರು ಬಹಳ ಬೇಗನೇ ಪ್ರಸನ್ನರಾಗಿ ಅನುಗ್ರಹ ನೀಡುತ್ತಾರೆ ಎನ್ನಲಾಗುತ್ತದೆ.

Shravanmasa 2024

ಶ್ರಾವಣ ಮಾಸದಲ್ಲಿ ಬರುವ ಹಬ್ಬಗಳು :

ಇದನ್ನೂ ಓದಿ:ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!
ಒಟ್ಟಾರೆ ಈ ಎಲ್ಲಾ ಶುಭ ದಿನಗಳು ಮತ್ತು ಹಬ್ಬಗಳಿಂದ ಶ್ರಾವಣ ಮಾಸ ತುಂಬಾ ವಿಶೇಷವಾದ ಹಾಗೂ ಪವಿತ್ರವಾದ ಮಾಸವಾಗಿದೆ. ಹಾಗಾಗಿ ಇಂತಹ ಶುಭಕರವಾದ ಶ್ರಾವಣ ಮಾಸವನ್ನು ಎಲ್ಲರೂ ಸಂತೋಷದಿಂದ ಸ್ವಾಗತಿಸಿ. ಹಾಗೇ ಈ ಮಾಸದಲ್ಲಿ ಎಲ್ಲರೂ ಶ್ರದ್ಧೆ, ಭಕ್ತಿಯಿಂದ ದೇವರ ಆರಾಧನೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.

Exit mobile version