Site icon Vistara News

Street Girlfriends: 115 ರೂ.ಗೆ ಚುಂಬನ, 11 ರೂ.ಗೆ ಬಿಸಿ ಅಪ್ಪುಗೆಯ ಸುಖ; ಸ್ಟ್ರೀಟ್‌ ಗರ್ಲ್‌ಫ್ರೆಂಡ್ ಟ್ರೆಂಡ್‌!

Viral News


ಕೆಲವು ಜನರ ಪರಿಸ್ಥಿತಿ ಹೇಗಿರುತ್ತದೆ ಅಂದರೆ ಜೀವನ ನಡೆಸಲು ಒಂದು ದಿನದ ಊಟಕ್ಕೂ ಪರದಾಡಬೇಕಾಗುತ್ತದೆ. ತಮ್ಮ ಜೊತೆಗೆ ತಮ್ಮ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡರ ಕತೆ ಇನ್ನೂ ಶೋಚನೀಯವಾಗಿದೆ. ಹಾಗಾಗಿ ಚೀನಾದಲ್ಲಿ ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುವ ಒತ್ತಡ ಚೀನಾದ ಯುವತಿಯರಿಗೆ ಹೆಚ್ಚಾಗಿದ್ದ ಪರಿಣಾಮ ಅವರು ಬೀದಿಯಲ್ಲಿ ಹೋಗುವ ದಾರಿಹೋಕರ ಜೊತೆ ಭಾವನಾತ್ಮಕ ಸಂಪರ್ಕಗಳನ್ನು ಬೆಳೆಸುವ ವ್ಯಾಪಾರ ಮಾಡುತ್ತಿದ್ದಾರೆ. ಹುಡುಗಿಯರು ಹಣಕ್ಕಾಗಿ ಇಂತಹ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Street Girlfriends) ಆಗಿದೆ.

Viral News

ಚೀನಾದ ಯುವತಿಯರು ಹಣಕ್ಕಾಗಿ ಮುತ್ತು ಕೊಡುವುದು, ಅಪ್ಪಿಕೊಳ್ಳುವುದು, ಒಟ್ಟಿಗೆ ಸಿನಿಮಾ ನೋಡುವುದು, ಮನೆಗೆಲಸಕ್ಕೆ ಸಹಾಯ ಮಾಡುವುದು, ಒಟ್ಟಿಗೆ ಮದ್ಯಪಾನ ಮಾಡುವುದು ಮುಂತಾದವುಗಳ ಮೂಲಕ ಯುವಕರನ್ನು ಆಕರ್ಷಿಸುತ್ತಿದ್ದಾರೆ. ಆದರೆ ಇದರಲ್ಲಿ ಮಹಿಳೆಯರು ಯಾವುದೇ ರೀತಿಯ ದೈಹಿಕ ಸಂಬಂಧ ಹೊಂದುವುದಿಲ್ಲ ಎಂಬುದಾಗಿ ಖಡಕ್‌ ಹಾಕಿ ತಿಳಿಸುತ್ತಿದ್ದಾರೆ. ಬೀದಿಗಳಲ್ಲಿ ಕುಳಿತ ಯುವತಿಯರು ಒಂದು ಬೋರ್ಡ್‌ನಲ್ಲಿ ದರಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ಅದರ ಜೊತೆಗೆ ‘ನೋ ಸೆಕ್ಸ್’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಇವರದೇನಿದ್ದರೂ ʼಸ್ಪರ್ಶ ಸುಖʼದ ವ್ಯವಹಾರ ಮಾತ್ರ!

Viral News

ಇತ್ತೀಚೆಗೆ, ಖ್ಯಾತ ಇಂಟರ್ನೆಟ್ ಬಳಕೆದಾರರು ಶೆನ್ಜೆನ್‍ನ ಗದ್ದಲದ ಬೀದಿಗಳಲ್ಲಿ ಯುವತಿಯರ ಈ ರೀತಿಯ ವ್ಯಾಪಾರವನ್ನು ನೋಡಿದ್ದಾರೆ. ಯುವತಿಯರು ಹಣಕ್ಕಾಗಿ ಬೀದಿಯಲ್ಲಿ ಅಪ್ಪುಗೆ, ಚುಂಬನ ಮುಂತಾದವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿದ್ದು, ಚರ್ಚೆಗೆ ಕಾರಣವಾಗಿದೆ. ಶೆನ್ಜೆನ್‍ನ ಸುರಂಗಮಾರ್ಗ ನಿಲ್ದಾಣದ ಪಕ್ಕದಲ್ಲಿ, ಯುವತಿಯೊಬ್ಬಳು “ಅಪ್ಪುಗೆಗೆ ಒಂದು ಯುವಾನ್ (14 ಯುಎಸ್ ಸೆಂಟ್ಸ್), ಚುಂಬನಕ್ಕಾಗಿ 10 ಯುವಾನ್, ಒಟ್ಟಿಗೆ ಚಲನಚಿತ್ರವನ್ನು ವೀಕ್ಷಿಸಲು 15 ಯುವಾನ್, ಮನೆಕೆಲಸಗಳಲ್ಲಿ ಸಹಾಯ ಮಾಡಲು 20 ಯುವಾನ್ (ಯುಎಸ್ $ 2.8), ನಿಮ್ಮೊಂದಿಗೆ ಕುಡಿಯಲು ಗಂಟೆಗೆ 40 ಯುವಾನ್” ಎಂಬ ಫಲಕದೊಂದಿಗೆ ಸ್ಟಾಲ್ ಅನ್ನು ಹಾಕಿದ್ದಾಳೆ. ಆಕೆಯ ಜೊತೆಗೆ ಇತರ ಇಬ್ಬರು ಮಹಿಳೆಯರು ಈ ಫಲಕದೊಂದಿಗೆ ಪಾದಚಾರಿಗಳು ನಡೆದಾಡುವ ಬೀದಿ ಚೌಕದಲ್ಲಿ ಮಳಿಗೆಗಳನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅವರು ದಿನಕ್ಕೆ 100 ಯುವಾನ್ ಗಳಿಸಬಹುದು ಎಂದು ವರದಿಯಾಗಿದೆ. 1 ಯುವಾನ್‌ ಅಂದರೆ 11.55 ರೂಪಾಯಿ.

Viral News

ಸ್ಟ್ರೀಟ್ ಗರ್ಲ್‌ಫ್ರೆಂಡ್‌ ಸೋಶಿಯಲ್ ಮೀಡಿಯಾದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಇದರಿಂದ ಈ ಹುಡುಗಿಯರು ವಾರಾಂತ್ಯದಲ್ಲಿ ಸಮಯವನ್ನು ಕಳೆಯಬಹುದು ಮತ್ತು ಅನೇಕ ಆಸಕ್ತಿದಾಯಕ ಜನರನ್ನು ಭೇಟಿಯಾಗಬಹುದು. ನಾನು ಅವರೊಂದಿಗೆ ಚಾಟ್ ಮಾಡಲು ಪ್ರಯತ್ನಿಸಲು ಇಷ್ಟಪಡುತ್ತೇನೆ” ಎಂದು ಒಬ್ಬರು ಬರೆದಿದ್ದಾರೆ.

“ಸ್ಟ್ರೀಟ್ ಗರ್ಲ್‌ಫ್ರೆಂಡ್ ಚಟುವಟಿಕೆಯು ಗ್ರಾಹಕರು ಮತ್ತು ಹುಡುಗಿಯರಿಬ್ಬರಿಗೂ ಸ್ವಯಂಪ್ರೇರಿತವಾಗಿದೆ. ಅಲ್ಲದೆ, ಒತ್ತಡವನ್ನು ನಿವಾರಿಸಲು ಮತ್ತು ಸಾಮಾಜಿಕವಾಗಿ ಬೆರೆಯಲು ಇದನ್ನು ಒಂದು ಮಾರ್ಗವೆಂದು ಪರಿಗಣಿಸಬಹುದು” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಆದರೆ ಇನ್ನೊಬ್ಬರು “ಮಹಿಳೆಯರ ಒಡನಾಟಕ್ಕೆ ಬೆಲೆ ತೆರುವುದು ಅಗೌರವ ಮತ್ತು ಅವರ ಘನತೆಯನ್ನು ದುರ್ಬಲಗೊಳಿಸುತ್ತದೆ.” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

“ಇದು ಕಾನೂನುಬಾಹಿರವಾಗಿರಬಹುದು. ಹುಡುಗಿಯರು ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು” ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. ಈ ಬಗ್ಗೆ ವಕೀಲರೊಬ್ಬರು ಪೋಸ್ಟ್ ಮಾಡಿ, “ಸ್ಟ್ರೀಟ್ ಗರ್ಲ್‍ಫ್ರೆಂಡ್’ ಸೇವೆಯು ಪ್ರಸ್ತುತ ಅಸ್ತಿತ್ವದಲ್ಲಿರುವ ಕಾನೂನುಗಳ ಚೌಕಟ್ಟಿನ ಹೊರಗೆ ಕಾರ್ಯನಿರ್ವಹಿಸುತ್ತದೆ ಮತ್ತು ಇದು ವೇಶ್ಯಾವಾಟಿಕೆ ಅಥವಾ ಲೈಂಗಿಕ ಸೇವಾ ವಹಿವಾಟುಗಳಾಗಿ ರೂಪಾಂತರಗೊಳ್ಳುವ ಅಪಾಯವನ್ನು ಹೊಂದಿದೆ ಎಂಬುದಾಗಿ ತಿಳಿಸಿದ್ದಾರೆ.

Exit mobile version