Site icon Vistara News

Student Abuse: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

Student Abuse


ಕಾಲೇಜಿನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂಬ ನಿಯಮವಿದ್ದರೂ (Student Abuse) ಕೂಡ ಕೆಲವೊಂದು ವಿದ್ಯಾರ್ಥಿಗಳು ಮೊಬೈಲ್ ಪೋನ್ ಅನ್ನು ಶಿಕ್ಷಕರ ಕಣ್ಣು ತಪ್ಪಿಸಿ ಬಳಸುತ್ತಾರೆ. ವಿದ್ಯಾರ್ಥಿಗಳ ಈ ತಪ್ಪಿನಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಿಕ್ಷಕಿ(School Teacher)ಯೊಬ್ಬರು ಮೊಬೈಲ್ ಫೋನ್ ಹುಡುಕಲು ಹತ್ತನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿ ಟೀಕೆಗೆ ಒಳಗಾಗಿದ್ದಾರೆ. ಈ ಬಗ್ಗೆ ತನಿಖೆ ನಡೆದಿದ್ದು, ಇದು ಶಿಕ್ಷಕಿಯ ವರ್ಗಾವಣೆಗೆ ಕಾರಣವಾಗಿದೆ.

ವರದಿ ಪ್ರಕಾರ, ಈ ಘಟನೆ ಸರ್ಕಾರಿ ಶಾರದಾ ಬಾಲಕಿಯರ ಹೈಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಶುಕ್ರವಾರ ನಡೆದಿದ್ದು, ಅಲ್ಲಿನ ಶಿಕ್ಷಕಿ ಜಯಾ ಪನ್ವಾರ್ ತರಗತಿಯಲ್ಲಿ ಮೊಬೈಲ್ ಪೋನ್ ರಿಂಗ್ ಆಗಿದ್ದಕ್ಕೆ ಅನುಮಾನಗೊಂಡ 5 ವಿದ್ಯಾರ್ಥಿಗಳನ್ನು ಶೌಚಾಲಯಕ್ಕೆ ಕರೆದೊಯ್ದು ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ. ಅಲ್ಲದೇ ಈ ವೇಳೆ ವಿರೋಧಿಸಿದ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಮಲ್ಹಾರ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ವಿದ್ಯಾರ್ಥಿಗಳಿಗೆ ತಮ್ಮ ಒಳ ಉಡುಪುಗಳನ್ನು ಸಹ ತೆಗೆದು ಹಾಕಲು ಹೇಳಿದ್ದಾರೆ. ಒಬ್ಬ ವಿದ್ಯಾರ್ಥಿನಿ ಋತುಸ್ರಾವದ ಸಮಸ್ಯೆ ಇದ್ದ ಕಾರಣ ತನ್ನ ಬಟ್ಟೆಗಳನ್ನು ತೆಗೆಯಲು ನಿರಾಕರಿಸಿದಳು. ಆದರೆ ಶಿಕ್ಷಕರು ಅವಳ ಮಾತಿಗೆ ಕಿವಿಗೊಡದೆ ಅವಳ ಪ್ಯಾಡ್ ಅನ್ನು ಸಹ ತೆಗೆದು ಪರಿಶೀಲಿಸಿದರು ಎಂದು ತಿಳಿಸಿದ್ದಾರೆ.

“ನಾನು ನನ್ನ ಋತುಚಕ್ರದ ಸಮಯದಲ್ಲಿ ನನ್ನ ಬಟ್ಟೆಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ಶಿಕ್ಷಕಿ ಜಯಾ ಪನ್ವಾರ್ ಮೇಡಂಗೆ ಹಲವಾರು ಬಾರಿ ಹೇಳಿದೆ. ಆದರೆ ನಾನು ನನ್ನ ಸಲ್ವಾರ್ ತೆಗೆಯದಿದ್ದರೆ, ತಾನೇ ಅದನ್ನು ತೆಗೆಯುತ್ತೇನೆ ಎಂದು ನನಗೆ ಬೆದರಿಕೆ ಹಾಕಿದರು. ಇದನ್ನು ಹೇಳುತ್ತಿರುವಾಗ, ಮೇಡಮ್ ನನ್ನ ಸಲ್ವಾರ್ ಅನ್ನು ಕೆಳಕ್ಕೆ ಎಳೆದರು. ಜಯಾ ಮೇಡಂ ನನ್ನ ಒಳ ಉಡುಪುಗಳನ್ನು ತೆಗೆಯುವಂತೆ ಮಾಡಿದರು. ಮೇಡಂ ನಾನು ನನ್ನ ಋತುಚಕ್ರದಲ್ಲಿದ್ದೇನೆ ಎಂದು ನಾನು ಅವರಿಗೆ ಪರಿಪರಿಯಾಗಿ ಹೇಳಿದೆ. ಆದರೆ ಮೇಡಮ್ ನನ್ನನ್ನು ಪರೀಕ್ಷಿಸಲು ನನ್ನ ಪ್ಯಾಡ್ ತೆಗೆಯುವಂತೆ ಹೇಳಿದರು ಎಂದು ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು ದುಃಖದಿಂದ ಹೇಳಿದ್ದಾಳೆ.

ಇದನ್ನೂ ಓದಿ: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

ಶುಕ್ರವಾರ ನಡೆದ ಘಟನೆಯ ನಂತರ, ಆಡಳಿತ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿತು ಮತ್ತು ಆರೋಪಿ ಶಿಕ್ಷಕಿಯನ್ನು ಶಾಲೆಯಿಂದ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಕಿಯ ವಿರುದ್ಧದ ಪೊಲೀಸ್ ದೂರಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

Exit mobile version