Site icon Vistara News

Top 10 Motar Bike: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕ್‌ಗಳಿವು

Top 10 Motar Bike

ಮಾರುಕಟ್ಟೆಗೆ ಪ್ರತಿವರ್ಷ ಹೊಸ ಹೊಸ ವಿಧದ ಮೋಟಾರು ಬೈಕ್(Motar Bike)ಗಳು ಬರುತ್ತವೆ. ಬೈಕ್ ಶೋರೂಂಗೆ ಹೋದರೆ ಯಾವ ಬೈಕ್ ಖರೀದಿಸುವುದು, ಯಾವುದನ್ನು ಬಿಡುವುದು ಎಂಬ ಗೊಂದಲ ಯುವಕರಲ್ಲಿ ಉಂಟಾಗುತ್ತದೆ. ಅಂತಹ ನ್ಯೂ ಮಾಡೆಲ್ ಬೈಕ್‌ಗಳು ಒಂದರ ಮೇಲೆ ಒಂದು ಸ್ಪರ್ಧೆಯಲ್ಲಿ ನಿಂತಿರುತ್ತವೆ. ಹಾಗಾಗಿ ಬೈಕ್ ಕೊಳ್ಳಲು ಬಯಸುವ ಬೈಕ್ ಪ್ರಿಯರಿಗೆ 2024ರಲ್ಲಿ ಸ್ಪರ್ಧೆಯಲ್ಲಿರುವ ಟಾಪ್ 10 ಮೋಟಾರ್ ಸೈಕಲ್ ಗಳ ವಿವರ ನೀಡುತ್ತಿದ್ದೇವೆ.

2024ರಲ್ಲಿ ಕಾರುಗಳು ತಮ್ಮ ಮಾರಾಟದಲ್ಲಿ ಕುಸಿತ ಕಂಡರೂ ದ್ವಿಚಕ್ರ ವಾಹನಗಳು ಮಾತ್ರ ಮಾರುಕಟ್ಟೆಯಲ್ಲಿ ಶೇ.1.59ರಷ್ಟು ಬೆಳವಣಿಯನ್ನು ಕಂಡಿವೆ. ಅದರಲ್ಲಿ 10 ಮೋಟಾರ್ ಸೈಕಲ್‌ಗಳ ಮಾರಾಟವು ಒಟ್ಟು 8.45 ಲಕ್ಷ ಯುನಿಟ್‌ಗಳನ್ನು ತಲುಪಿದೆ ಎನ್ನಲಾಗಿದೆ. ಹಾಗಾಗಿ ಈ ಬಾರಿ ಅಗ್ರಸ್ಥಾನದಲ್ಲಿರುವ ಮೋಟಾರ್ ಸೈಕಲ್ ಗಳ ವಿವರ ಇಲ್ಲಿದೆ.

1. ಹೀರೊ

ಹೀರೊ ಮೊಟೊಕಾರ್ಪ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮೋಟಾರ್ ಸೈಕಲ್ ಆಗಿದೆ. ಹೀರೊ ಸ್ಪ್ಲೆಂಡರ್ ಮೇ 2024ರಲ್ಲಿ 3,04,663 ಯುನಿಟ್‌ಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 37,863 ಯುನಿಟ್‌ಗಳಷ್ಟು ಕಡಿಮೆ ಮಾರಾಟವಾಗಿದೆ. ಹಾಗಾಗಿ ಕಂಪನಿಯು ಮಾರಾಟದಲ್ಲಿ ಶೇಕಡಾ 11.05ರಷ್ಟು ಕುಸಿತವನ್ನು ಕಂಡಿದೆ. ಮೇ 2024ರಲ್ಲಿ 36.03 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.
ಸ್ಪ್ಲೆಂಡರ್ ಹೊರತುಪಡಿಸಿ ದ್ವಿಚಕ್ರ ವಾಹನಗಳಾದ ಹೆಚ್‌ಎಫ್ ಡಿಲಕ್ಸ್ ಮತ್ತು ಪ್ಯಾಶನ್ ಕ್ರಮವಾಗಿ 4 ಮತ್ತು 10ನೇ ಸ್ಥಾನದಲ್ಲಿದೆ. ಹೀರೊ ಹೆಚ್ ಎಫ್ ಡಿಲಕ್ಸ್ ಮೇ 2024ರಲ್ಲಿ 87,143 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 21,957 ಯುನಿಟ್ ಗಳಷ್ಟು ಕಡಿಮೆ ಮಾರಾಟವಾಗಿದೆ. ಹಾಗಾಗಿ ಕಂಪೆನಿಯು ಮಾರಾಟದಲ್ಲಿ ಶೇಕಡಾ-20.13ರಷ್ಟು ಕುಸಿತವನ್ನು ಕಂಡಿದೆ. ಹಾಗೇ ಹೀರೋ ಫ್ಯಾಶನ್ ಮೇ 2024ರಲ್ಲಿ 22,327 ಯುನಿಟ್ ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ವರ್ಷದ ಮಾರಾಟಕ್ಕಿಂತ 507.04 ಪ್ರತಿಶತದಷ್ಟು ಬೆಳೆವಣಿಗೆಯನ್ನು ಕಂಡಿದೆ. ಹೀರೊ ಹೆಚ್ ಎಫ್ ಡಿಲಕ್ಸ್ ಮತ್ತು ಪ್ಯಾಶನ್ ಮೇ 2024ರಲ್ಲಿ ಕ್ರಮವಾಗಿ 10.31 ಶೇಕಡಾ ಮತ್ತು 2.64 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿವೆ.

1. ಹೋಂಡಾ

ಜಪಾನಿನ ವಾಹನ ತಯಾರಕ ಕಂಪನಿಯಾದ ಹೋಂಡಾ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೋಂಡಾ ಶೈನ್ ಮೇ 2024ರಲ್ಲಿ 1,49,054 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ 45,355 ಯುನಿಟ್‌ಗಳಷ್ಟು ಹೆಚ್ಚು ಮಾರಾಟ ಮಾಡಿ 43.74 ಪ್ರತಿಶತದಷ್ಟು ಬೆಳೆವಣಿಗೆಯನ್ನು ಹೊಂದಿದೆ ಮತ್ತು 17.63 ಶೇ. ಮಾರುಕಟ್ಟೆ ಪಾಲನ್ನು ಹೊಂದಿದೆ.
ಹಾಗೆಯೇ ಹೋಂಡಾ ಯುನಿಕಾರ್ನ್ ಮೇ 2024ರಲ್ಲಿ 24,740 ಯುನಿಟ್ ಗಳನ್ನು ಮಾರಾಟ ಮಾಡುವುದರೊಂದಿಗೆ 8ನೇ ಸ್ಥಾನದಲ್ಲಿದೆ ಹಾಗೂ ಈ ವರ್ಷ 2.93 ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದಿದೆ.

3. ಬಜಾಜ್

ಬಜಾಜ್ ಪಲ್ಸರ್ ಮೇ 2024ರಲ್ಲಿ 1,28,480 ಯುನಿಟ್ ಗಳನ್ನು ಮಾರಾಟ ಮಾಡುವ ಮೂಲಕ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ 77 ಯುನಿಟ್ ಗಳಷ್ಟು ಹೆಚ್ಚು ಮಾರಾಟ ಮಾಡಿ 0.06ರಷ್ಟು ಬೆಳವಣಿಗೆಯನ್ನು ಹೊಂದಿದೆ. ಮತ್ತು ಮೇ 2024ರಲ್ಲಿ 15.19 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ ಮೇ 2024ರಲ್ಲಿ 30,239 ಯುನಿಟ್ ಗಳನ್ನು ಮಾರಾಟ ಮಾಡಿ 7ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ -11,915ರಷ್ಟು ಕಡಿಮೆ ಮಾರಾಟ ಮಾಡಿ -28.27 ಪ್ರತಿಶತದಷ್ಟು ಕುಸಿತ ಕಂಡಿದೆ. ಇದು ಮೇ 2024ರಲ್ಲಿ 3.58 ಶೇಕಡಾ ಮಾಡುಕಟ್ಟೆಯ ಪಾಲನ್ನು ಹೊಂದಿದೆ.

4. ಟಿವಿಎಸ್

ಮೇ 2024ರಲ್ಲಿ ಟಿವಿಎಸ್ ಅಪಾಚೆ ಮತ್ತು ಟಿವಿಎಸ್ ರೈಡರ್ ಎರಡನ್ನೂ ಒಳಗೊಂಡಂತೆ ಶೇಕಡಾ 8.89 ಮಾರುಕಟ್ಟೆ ಪಾಲನ್ನು ಹೊಂದಿದೆ. ಅಪಾಚೆ ಕಳೆದ ವರ್ಷದ 41,955 ಯುನಿಟ್ ಗಳಿಗೆ ಹೋಲಿಸಿದರೆ 2024ರಲ್ಲಿ 37,906 ಯುನಿಟ್ ಗಳನ್ನು ಮಾರಾಟ ಮಾಡಿದೆ. ಹಾಗಾಗಿ ಈ ಬೈಕ್ ಮಾರಾಟದಲ್ಲಿ ಶೇಕಡಾ 9.65ರಷ್ಟು ಕುಸಿತ ಕಂಡಿದೆ. ಟಿವಿಎಸ್ ರೈಡರ್ ಕಳೆದ ವರ್ಷದ 34,440 ಯುನಿಟ್ ಗೆ ಹೋಲಿಸಿದರೆ ಮೇ 2024ರಲ್ಲಿ 37,249 ಯುನಿಟ್ ಗಳನ್ನು ಮಾರಾಟ ಮಾಡಿದೆ. ಹಾಗಾಗಿ ಈ ಬೈಕ್ ಶೇಕಡಾ 8.16ರಷ್ಟು ಬೆಳವಣಿಗೆಯನ್ನು ಕಂಡಿದೆ. ಅಪಾಚೆ ಮತ್ತು ರೈಡರ್ ಇವೆರಡು ಬೈಕ್ ಗಳ ಮಾರುಕಟ್ಟೆ ಪಾಲು ಕ್ರಮವಾಗಿ 4.48 ಮತ್ತು 4.41 ಶೇಕಡಾ ಆಗಿದೆ.

ಇದನ್ನೂ ಓದಿ: Viral Video : ಇನ್‌ಸ್ಟಾಗ್ರಾಂ ರೀಲ್ಸ್ ಕ್ರೇಜ್‌; ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡಿದ ಹುಡುಗಿ!

5. ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಆರ್ ಇ ಕ್ಲಾಸಿಕ್ 350 ಮೇ 2024ರಲ್ಲಿ 23,779 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2,571 ಯುನಿಟ್‌ಗಳಷ್ಟು ಕಡಿಮೆ ಮಾರಾಟ ಮಾಡಿ 9.76 ಶೇಕಡಾ ಕುಸಿತವನ್ನು ಕಂಡಿದೆ. ಹಾಗಾಗಿ ಮೇ 2024ರಲ್ಲಿ 2.81 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ.

Exit mobile version