Site icon Vistara News

ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ; ಭಾರತ, ಚೀನಾ ವಿರುದ್ಧ ಟ್ರಂಪ್ ಆಕ್ರೋಶ

ವಾಷಿಂಗ್ಟನ್: ಅಮೆರಿಕದಲ್ಲಿ ಸುಲಭವಾಗಿ ಜನ್ಮಸಿದ್ಧ ಪೌರತ್ವ ಹಕ್ಕು ಪಡೆಯುತ್ತಿದ್ದು ಅಮೆರಿಕನ್ನರ ಉದ್ಯೋಗದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
ಭಾರತ ಮತ್ತು ಚೀನಾ ವಿರುದ್ಧ ಜನಾಂಗೀಯ ನಿಂದನೆ ಇರುವ ಪತ್ರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮದೇ ಒಡೆತನದ ಸಾಮಾಜಿಕ ಜಾಲತಾಣ ಟ್ರುತ್‌ನಲ್ಲಿ ಮರು ಪೋಸ್ಟ್ ಮಾಡಿದ್ದಾರೆ.
ಭಾರತೀಯರು ಮತ್ತು ಚೀನೀ ವಲಸಿಗರನ್ನು ‘ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು’ ಎಂದೂ ಆಪಾದಿಸಿದ್ದಾರೆ.
ಏಷ್ಯಾದ ಎರಡು ದೇಶಗಳಾದ ಚೀನಾ ಮತ್ತು ಭಾರತ ದೇಶಗಳಿಂದ ಅಮೆರಿಕಕ್ಕೆ ಆಗಮಿಸುವ ಜನರು ಇಲ್ಲಿಯೇ ಮಗುವನ್ನು ಹೆರುತ್ತಾರೆ. ಆಗ ಮಗು ಸಹಜವಾಗಿಯೇ ಜನ್ಮಸಿದ್ಧ ಪೌರತ್ವ ಪಡೆಯುತ್ತದೆ. ನಂತರ ಚೀನಾ, ಭಾರತ ಮತ್ತು ಇತರ ‘ನರಕಕೂಪ’ಗಳಿಂದ ಸಂಪೂರ್ಣ ಕುಟುಂಬವನ್ನು ಇಲ್ಲಿಗೆ ಕರೆತಂದು ನೆಲೆಸುತ್ತಾರೆ ಎಂದು ಟ್ರಂಪ್ ಆಪಾದಿಸಿದ್ದಾರೆ.
ತಮ್ಮ ಪೋಸ್ಟ್‌ ನಲ್ಲಿ ಅವರು ಭಾರತೀಯರು ಮತ್ತು ಚೀನೀ ವಲಸಿಗರನ್ನು ‘ಲ್ಯಾಪ್‌ಟಾಪ್ ಹೊಂದಿರುವ ದರೋಡೆಕೋರರು’ ಮತ್ತು ‘ನಮ್ಮ ಧ್ವಜದ ಮೇಲೆ ಕಾಲಿಟ್ಟಿರುವವರು’ ಎಂದೂ ಟೀಕಿಸಿದ್ದಾರೆ. ಎಲ್ಲ ಮಾಫಿಯಾಗಳು ಒಟ್ಟಾಗಿ ಸೇರಿ ಮಾಡಿದ ಹಾನಿಗಿಂತಲೂ ಹೆಚ್ಚಾಗಿ ಈ ಎರಡೂ ದೇಶಗಳ ಜನತೆ ಹೆಚ್ಚಿನ ಹಾನಿ ಉಂಟು ಮಾಡಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅವರು. ನಮ್ಮನ್ನು ದೋಚಿ ನಮ್ಮನ್ನೇ ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಂಡಿದ್ದಾರೆ. ನಮ್ಮ ಧ್ವಜದ ಮೇಲೆ ಹೆಜ್ಜೆ ಹಾಕಿದ್ದಾರೆ ಎಂದೂ ಕಿಡಿ ಕಾರಿದ್ದಾರೆ.
ಅಮೆರಿಕದ ಬಹುತೇಕ ಎಲ್ಲ ಆಂತರಿಕ ಕಾರ್ಯವಿಧಾನಗಳನ್ನು ಭಾರತೀಯರು ಮತ್ತು ಚೀನಿಯರಿಗೆ ಅನುಕೂಲವಾಗುವಂತೆ ಸ್ಥಾಪಿಸಲಾಗಿದೆ. ಹಾಗಾಗಿ, ನೀವು ಇಲ್ಲಿ ಕೆಲಸ ಮಾಡಲು ಭಾರತ ಅಥವಾ ಚೀನಾದಿಂದ ಬಂದಿರಬೇಕು. 9 ತಿಂಗಳ ಗರ್ಭಿಣಿಯರು ಇಲ್ಲಿಗೆ ಬಂದು ಮಗುವನ್ನು ಹೆರುವ ಮೂಲಕ ಆ ಮಗು ಸಹಜವಾಗಿ ನೆಲದ ಕಾನೂನಿನಂತೆ ಜನ್ಮಸಿದ್ಧ ಪೌರತ್ವ ಪಡೆಯುವುದನ್ನು ಹೇಗೆ ಸಮರ್ಥಿಸಲು ಸಾಧ್ಯ ಎಂದಿದು ಟ್ರಂಪ್‌ ಪ್ರಶ್ನಿಸಿದ್ದಾರೆ.
ಅಮೆರಿಕದ ಸಂವಿಧಾನವು ಅತ್ಯಂತ ಹಳೆಯದಾಗಿದೆ. ಹೆರಿಗೆ ಪ್ರವಾಸದಿಂದಾಗಿ ಸದ್ಯದ ಅಮೆರಿಕದ ವ್ಯವಸ್ಥೆ ಹಾಳಾಗುತ್ತಿದೆ. ನಮ್ಮ ದೇಶದ ಸಂವಿಧಾನವನ್ನು ವೈಮಾನಿಕ ಪ್ರಯಾಣ, ಟಿವಿ, ಇಂಟರ್‌ನೆಟ್, ರೇಡಿಯೊ ಬರುವುದಕ್ಕೂ ಮುನ್ನ ರಚಿಸಲಾಗಿದೆ ಎಂದು ಹೇಳಿದ್ದಾರೆ.

Exit mobile version