Site icon Vistara News

Unusual Story: 15 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ! ಜೈಲು ಶಿಕ್ಷೆ

Unusual Story

ಗುರು ಹಾಗೂ ಶಿಷ್ಯರ ಸಂಬಂಧ ಎಂಬುವುದು ಪೋಷಕರು-ಮಕ್ಕಳ ಸಂಬಂಧದಂತೆ ಬಹಳ ಪವಿತ್ರವಾದ ಸಂಬಂಧ ಎನ್ನುವುದು ಜನಜನಿತ. ತಾಯಿ ತಂದೆ ಜೀವ, ಜೀವನ ನೀಡಿದರೆ, ಗುರು ಜೀವನದ ಗುರಿಯನ್ನು ತೋರಿಸುತ್ತಾರೆ. ಗುರಿ ಮುಟ್ಟಲು ಸಹಾಯ ಮಾಡುತ್ತಾರೆ. ಅಂತಹ ಗುರುವು ತನ್ನ ಶಿಷ್ಯನನ್ನು ಲೈಂಗಿಕ ಸಂಬಂಧ(Unusual Story)ಕ್ಕೆ ಬಳಸಿಕೊಂಡರೆ ಹೇಗೆ? ಇದೀಗ ಅಂತಹದೊಂದು ಘಟನೆ ಅಮೆರಿಕದಲ್ಲಿ ಬೆಳಕಿಗೆ ಬಂದಿದೆ.

ಶಿಕ್ಷಕಿಯೊಬ್ಬಳು 15 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿ ಗರ್ಭ ಧರಿಸಿದ್ದಕ್ಕೆ ಇದೀಗ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಈ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಈ ಕಾಮುಕ ಶಿಕ್ಷಕಿಯ ಹೆಸರು ಕ್ಯಾಥರೀನ್ ಹಾರ್ಪರ್. ಈಕೆ ಟೆಕ್ಸಾಸ್‌ನ ರೋನೋಕ್‌ನ ಟಿಡ್ ವೆಲ್ ಮಿಡಲ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಇವಳು ಅಲ್ಲಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸುತ್ತಿದ್ದಳು ಹಾಗೂ ಟೆನಿಸ್ ತರಬೇತುದಾರಳಾಗಿದ್ದಳು. ಅಲ್ಲಿ ಆಕೆ 2016ರಲ್ಲಿ ತನ್ನ 15 ವರ್ಷದ ವಿದ್ಯಾರ್ಥಿಯನ್ನು ಭೇಟಿ ಮಾಡಿ ಆತನ ಜೊತೆಗೆ ಮೊಬೈಲ್‌ನಲ್ಲಿ ನಗ್ನ ಪೋಟೊಗಳನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಪರಸ್ಪರ ಪ್ರಚೋದನಾಕಾರಿ ಸಂದೇಶಗಳನ್ನು ಕಳುಹಿಸಿದ್ದಳು. ನಂತರ ಕೆಲವು ತಿಂಗಳುಗಳ ಕಾಲ ಬಾಲಕನ ಮನೆಗೆ ತೆರಳಿ ಲೈಂಗಿಕ ಸಂಬಂಧ ಬೆಳೆಸಿಸದ್ದಳು.

ಇದನ್ನೂ ಓದಿ: Tirupathi Laddu: ತಿರುಪತಿ ಲಡ್ಡು, ವಿಶೇಷ ದರ್ಶನ ದರದ ಬಗ್ಗೆ ಟಿಟಿಡಿ ಸ್ಪಷ್ಟನೆ

ಈ ವಿಚಾರ ಟಿಡ್ ವೆಲ್ ಮಿಡಲ್ ಸ್ಕೂಲ್ ನ ಅಧಿಕಾರಿಗಳಿಗೆ ತಿಳಿದು ಅವರು ಪೊಲೀಸರಿಗೆ ಸುಳಿವು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮಾಡಿ 2017ರಲ್ಲಿ ಆಕೆಯನ್ನು ಬಂಧಿಸಿದ್ದಾರೆ. ಆದರೆ ಆ ವೇಳೆ ಆಕೆ ಎಂಟು ತಿಂಗಳ ಗರ್ಭಿಣಿ ಎಂಬುದಾಗಿ ತಿಳಿದುಬಂದಿದೆ. ಮಗುವಿನ ತಂದೆ ಆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೇ ಎನ್ನಲಾಗುತ್ತಿದೆ. ವಿಚಾರಣೆಯ ಸಮಯದಲ್ಲಿ ಕ್ಯಾಥರೀನ್ ಹಾರ್ಪರ್ ವಿದ್ಯಾರ್ಥಿ ಜೊತೆಗೆ ದೈಹಿಕ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹಾಗೇ ಈ ಬಗ್ಗೆ ಅಪ್ರಾಪ್ತ ವಿದ್ಯಾರ್ಥಿಯ ಬಳಿ ಪ್ರಶ್ನಿಸಿದಾಗ ಆತ ಕೂಡ ಶಿಕ್ಷಕಿಯ ಜೊತೆಗೆ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಾಗಾಗಿ ಈ ಪ್ರಕರಣದ ಬಗ್ಗೆ ಜೂನ್ 20ರಂದು ಅಂತಿಮ ವಿಚಾರಣೆ ನಡೆಸಿದ ನ್ಯಾಯಾಲಯ, ಆಕೆಯನ್ನು ಬಂಧಿಸಿದ 7 ವರ್ಷಗಳ ನಂತರ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Exit mobile version