ಬೀಜಿಂಗ್: ಈಗಿನ ಕಾಲದಲ್ಲಿ ಮದುವೆಯ ವಯಸ್ಸಿಗೆ ಬಂದ ಯುವಕರಿಗೆ ಮದುವೆಯಾಗಲು ಹುಡುಗಿಯರು ಸಿಗುವುದೇ ಕಷ್ಟವಾಗಿದೆ. ಹುಡುಗಿ ಸಿಗದೆ ಈಗಲೂ ಅನೇಕ ಹುಡುಗರು ಬ್ರಹ್ಮಚಾರಿಗಳಾಗಿ ಜೀವನ ನಡೆಸುತ್ತಿದ್ದಾರೆ. ಅಂತಹದರಲ್ಲಿ ವಯಸ್ಸಾದ ವೃದ್ಧರನ್ನು ಹುಡುಗಿಯರನ್ನು ಮದುವೆಯಾಗುವುದನ್ನು ನೋಡಿದರೆ ಯುವಕರು ಬಾಯಿ ಬಾಯಿ ಬಡಿದುಕೊಳ್ಳುವುದಂತೂ ಖಂಡಿತ. ಅಂತಹದೊಂದು ಘಟನೆ ಇದೀಗ ಚೀನಾದಲ್ಲಿ ನಡೆದಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Viral News) ಆಗಿದೆ.
23ರ ಹರೆಯದ ಯುವತಿಯೊಬ್ಬಳು 80 ವರ್ಷ ವೃದ್ಧರೊಬ್ಬರನ್ನು ಮದುವೆಯಾಗಿರುವುದು ಚೀನಾದ ಹೆಬೈ ಪ್ರಾಂತ್ಯದಲ್ಲಿ ನಡೆದಿದೆ. ವೃದ್ಧಾಶ್ರಮದಲ್ಲಿ ಆಶ್ರಯ ಪಡೆದುಕೊಂಡಿದ್ದ ಚೀನಾದ 80 ವರ್ಷ ವ್ಯಕ್ತಿ ಶ್ರೀಲಿ ಹಾಗೂ ಅದೇ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಕ್ಸಿಯಾಫಾಂಗ್ ಎಂಬ ಯುವತಿಯ ನಡುವೆ ಸ್ನೇಹ ಬೆಳೆದಿದೆ. ನಂತರ ಅದು ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರೆ. ಆದರೆ ಆಕೆಯ ಮನೆಯವರಿಗೆ ಈ ಮದುವೆ ಇಷ್ಟವಿಲ್ಲದಿದ್ದ ಕಾರಣ ತನ್ನ ಹೆತ್ತವರ ಸಂಬಂಧ ಮುರಿದುಕೊಂಡು ಆಕೆ ಶ್ರೀಲಿಯನ್ನು ಮದುವೆಯಾಗಿದ್ದಾಳೆ. ಕ್ಸಿಯಾನ್ ಫಾಂಗ್ ಮತ್ತು ಲೀ ತಮ್ಮ ಕುಟುಂಬವನ್ನು ನಡೆಸಲು ಲೀಯ ಪಿಂಚಣಿ ಹಣವನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ ಎಂದು ಹೇಳಲಾಗಿದೆ.
ವೃದ್ಧ ಶ್ರೀಲಿ ಅವರ ಪ್ರಬುದ್ಧತೆ, ಸ್ಥಿರತೆ ಮತ್ತು ಬುದ್ಧಿವಂತಿಕೆಯನ್ನು ಕಂಡು ಮೆಚ್ಚಿದ ಹುಡುಗಿ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ ಎಂಬುದು ವರದಿಯಿಂದ ತಿಳಿದು ಬಂದಿದೆ. ಇತ್ತೀಚೆಗೆ ಈ ಜೋಡಿ ಸರಳವಾಗಿ ವಿವಾಹವಾಗಿದ್ದರು. ಆದರೆ ಈ ವಿವಾಹಕ್ಕೆ ಆಕೆಯ ಮನೆಯವರು ಹಾಗೂ ಕುಟುಂಬಸ್ಥರು ಯಾರೂ ಇರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಈ ದಂಪತಿಯ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ಸಂಚಲನ ಮೂಡಿದೆ. ಇದರಲ್ಲಿ ದಂಪತಿ ಪ್ರಣಯದ ಭಾವದಲ್ಲಿ ಕ್ಯಾಮೆರಾಗೆ ಪೋಸ್ ಕೊಡುವುದನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಅನೇಕರು ಈ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ.
ಕೆಲವು ಬಳಕೆದಾರರು ಹುಡುಗಿ ವೃದ್ಧನ ಹಣಕ್ಕಾಗಿ ಆತನನ್ನು ಮದುವೆಯಾಗಿದ್ದಾಳೆ ಎಂದು ಕಾಮೆಂಟ್ ಮಾಡಿದ್ದರೆ ಕೆಲವರು ಅವಳ ಧೈರ್ಯ ಮತ್ತು ಆತನ ಮೇಲಿನ ಪ್ರೀತಿಯನ್ನು ಹೊಗಳಿದ್ದಾರೆ.
ಇದನ್ನೂ ಓದಿ: Accident Case: ಕಾರು ಡಿಕ್ಕಿ ರಭಸಕ್ಕೆ ಹತ್ತಾರು ಅಡಿ ದೂರ ಹಾರಿ ಬಿದ್ದ ಮಹಿಳೆ; ಭಯಾನಕ ವಿಡಿಯೊ
ವಯಸ್ಸಾದ ವೃದ್ಧ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆಯಾದ ಘಟನೆ ಇದೇ ಮೊದಲಲ್ಲ. ಇಂತಹ ಹಲವು ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತದೆ. ಇದಕ್ಕಿಂತ ಮೊದಲು ಮಧ್ಯಪ್ರದೇಶದಲ್ಲಿ 80 ವರ್ಷದ ವೃದ್ಧ 34 ವರ್ಷದ ಮಹಿಳೆಯನ್ನು ಮದುವೆಯಾದ ಘಟನೆ ನಡೆದಿದೆ. ಇನ್ ಸ್ಟಾಗ್ರಾಂನಲ್ಲಿ ವೃದ್ಧ ಪೋಸ್ಟ್ ಮಾಡುತ್ತಿದ್ದ ಆತನ ತಮಾಷೆಯ ವಿಡಿಯೊ ನೋಡಿ ಮಹಿಳೆ ಆಕರ್ಷಿತಳಾಗಿ ಆತನನ್ನು ಸಂಪರ್ಕಿಸಿ ನಂತರ ಮದುವೆಯಾಗಿದ್ದಳು. ಈ ತರಹದ ಹಲವಾರು ಘಟನೆಗಳು ಆಗಾಗ ನಡೆಯುತ್ತಿರುತ್ತದೆ.