Site icon Vistara News

Viral News: ವಿವಾಹಿತ ಮಹಿಳೆ ಮನೆಯ ಟ್ರಂಕ್‌ನೊಳಗೆ ಸಿಕ್ಕಿಬಿದ್ದ ಪ್ರೇಮಿ! ಮುಂದೇನಾಯ್ತು? ವಿಡಿಯೊ ನೋಡಿ!

Viral News

ಉತ್ತರ ಪ್ರದೇಶದ ಅಜಂಗಢದಲ್ಲಿ ವಿವಾಹಿತ ಮಹಿಳೆಯೊಬ್ಬಳ ಮನೆಯಲ್ಲಿರುವ ಟ್ರಂಕ್‌ನೊಳಗೆ ಅಡಗಿ ಕುಳಿತಿದ್ದ ಯುವಕನೊಬ್ಬನಿಗೆ ಆಕೆಯ ಕುಟುಂಬಸ್ಥರು ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ವೈರಲ್ (viral News) ಆಗಿದೆ.

ಟ್ರಂಕ್‌ನೊಳಗೆ ಯುವಕನಿರುವುದು ತಿಳಿದ ಆಕೆಯ ಕುಟುಂಬಸ್ಥರು ಆತನನ್ನು ತೀವ್ರವಾಗಿ ಥಳಿಸಿದ್ದಾರೆ. ವಿಡಿಯೊದಲ್ಲಿ ಆತನ ಮೇಲೆ ಕುಂಟುಬಸ್ಥರು ಬಿದಿರಿನ ಕೋಲಿನಿಂದ ಹಲ್ಲೆ ಮಾಡಿ ಬೆದರಿಸುತ್ತಿದ್ದು, ಅದಕ್ಕೆ ಆತ ಕ್ಷಮೆಯಾಚಿಸುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯುವಕ ಟ್ರಂಕ್‌ನಿಂದ ಹೊರಬರಲು ಅವಕಾಶ ಹುಡುಕುತ್ತಿರುವಾಗ ಮಹಿಳೆಯ ಕುಟುಂಬಸ್ಥರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಹಾಗಾಗಿ ಎಲ್ಲರೂ ಸೇರಿ ಆತನನ್ನು ಟ್ರಂಕ್‌ನಿಂದ ಹೊರಗೆಳೆದು ಹಲವು ಬಾರಿ ಕಪಾಳ ಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ. ಕುಟುಂಬಸ್ಥರು ಆತನನ್ನು ಕಳ್ಳನೆಂದು ಭಾವಿಸಿದ್ದರು. ಆದರೆ ಆತ ತಾನು ಕಳ್ಳನಲ್ಲ ಏನಾದರೂ ತಿನ್ನಲು ಬಂದಿರುವುದಾಗಿ ತಿಳಿಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಮಹಿಳೆಯ ಕುಟುಂಬಸ್ಥರು ಮಾಡಿರುವುದಾಗಿ ಕಂಡುಬಂದಿದೆ.

ಇದನ್ನೂ ಓದಿ: Mobile Addiction: ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ತಪ್ಪಿಸಬೇಕೆ? ಈ 5 ಸಲಹೆ ಅನುಸರಿಸಿ

ಯುವಕ ವಿವಾಹಿತ ಮಹಿಳೆಯ ಪ್ರೇಮಿ, ಆಕೆಯ ಕುಟುಂಬದವರಿಂದ ತಪ್ಪಿಸಿಕೊಳ್ಳಲು ಟ್ರಂಕ್‌ನಲ್ಲಿ ಅಡಗಿ ಕುಳಿತಿದ್ದ ಎನ್ನಲಾಗಿದೆ. ಈ ಘಟನೆ ಅಜಂಗಢದ ದೇವಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಕುಟುಂಬದವರ ಕೈಯಿಂದ ರಕ್ಷಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿಚಾರಣೆಯ ವೇಳೆ ತನ್ನ ಕುಟುಂಬದವರು ಎಚ್ಚರಗೊಂಡಿದ್ದಕ್ಕೆ ಟ್ರಂಕ್‌ನಲ್ಲಿ ಅಡಗಿಕೊಳ್ಳುವಂತೆ ಆ ಗೆಳತಿಯೇ ಸಲಹೆ ನೀಡಿರುವುದಾಗಿ ವ್ಯಕ್ತಿ ತಿಳಿಸಿದ್ದಾನೆ ಎನ್ನಲಾಗಿದೆ!

Exit mobile version