Site icon Vistara News

Viral News: ಚಾಲಕನ ಹೆಸರು ʼಯಮರಾಜʼ ಎನ್ನುವುದು ಗೊತ್ತಾಗುತ್ತಲೇ ಕ್ಯಾಬ್ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ ಗ್ರಾಹಕ!

Viral News

ಇತ್ತೀಚಿನ ದಿನಗಳಲ್ಲಿ ಸಿಟಿಯಲ್ಲಿ ವಾಸಿಸುವ ಜನರು ಆಟೊಗಳಿಗಿಂತ ಹೆಚ್ಚು ಕ್ಯಾಬ್‌ಗಳನ್ನು ಬುಕ್ ಮಾಡಿಕೊಂಡು ಹೋಗುತ್ತಾರೆ. ಇದು ತುಂಬಾ ಸುಲಭ ಮತ್ತು ಕಡಿಮೆ ದರಗಳಲ್ಲಿ ನೀವು ಯಾವುದೇ ಭಯವಿಲ್ಲದೆ ನಿಮಗಿಷ್ಟ ಬಂದ ಕಡೆ ಹೋಗಬಹುದು. ಅಲ್ಲದೇ ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಕಂಪನಿಗಳು ತಮ್ಮ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ರೈವರ್ ಹೆಸರುಗಳು ಮತ್ತು ಸ್ಥಳಗಳ ಬಗ್ಗೆ ಮೊದಲೇ ಮಾಹಿತಿ ನೀಡುತ್ತವೆ. ಹಾಗೇ ಇದರಲ್ಲಿ ಗ್ರಾಹಕರು ತಮ್ಮ ಬುಕಿಂಗ್ ಅನ್ನು ರದ್ದುಗೊಳಿಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ಆದರೆ ಈ ಸುರಕ್ಷತೆಯ ಸೌಲಭ್ಯಗಳು ಈಗ ಕ್ಯಾಬ್ ಕಂಪನಿಗಳಿಗೆ ಸಮಸ್ಯೆಯನ್ನುಂಟುಮಾಡಿದೆ. ಯಾಕೆಂದರೆ ಕ್ಯಾಬ್ ಡ್ರೈವರ್ ಹೆಸರು ತಿಳಿದು ವ್ಯಕ್ತಿಯೊಬ್ಬ ಬುಕ್ಕಿಂಗ್ ಅನ್ನು ರದ್ದು ಮಾಡಿದ್ದು, ಈ ತಮಾಷೆಯ ಕಾರಣದಿಂದ ಈ ಸುದ್ದಿ ಸಖತ್ ವೈರಲ್ (Viral News) ಆಗಿದೆ.

ಈ ವೈರಲ್ ಪೋಸ್ಟ್ ಅನ್ನು @timepassstruggler ಎಂಬ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಓಲಾದಿಂದ ಬಂದ ಸಂದೇಶದ ಸ್ಕ್ರೀನ್‍ಶಾಟ್ ಆಗಿದೆ. ಅದರಲ್ಲಿ “ಯಮರಾಜ ಆಗಮಿಸಿದ್ದಾರೆ ಮತ್ತು ನಿಮ್ಮ ಸ್ಥಳದಲ್ಲಿ ಕಾಯುತ್ತಿದ್ದಾರೆ” ಎಂದು ಬರೆಯಲಾಗಿತ್ತು. ಈ ಬಗ್ಗೆ ನೀಡಿದ ವಿವರಣೆಯಲ್ಲಿ ಕರ್ನಾಟಕದಲ್ಲಿ ಯಾರೋ ಒಬ್ಬರು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಚಾಲಕನ ಹೆಸರು ʼಯಮರಾಜʼ ಎಂದು ನೋಡಿದ ನಂತರ ಅದನ್ನು ರದ್ದುಗೊಳಿಸಿದರು ಎನ್ನಲಾಗಿದೆ.

ಹಿಂದೂ ಧರ್ಮದ ಪ್ರಕಾರ, ಯಮರಾಜನು ಸಾವಿನ ದೇವರು. ಆತ ಬಂದಿದ್ದಾನೆ ಎಂದರೆ ಸಾವು ನಮ್ಮ ಹತ್ತಿರದಲ್ಲಿದೆ ಎಂಬ ನಂಬಿಕೆ ನಮ್ಮಲಿದೆ. ಆದ್ದರಿಂದ, ಯಮರಾಜ ಆಗಮಿಸಿದ್ದಾರೆ ಮತ್ತು ನಿಮ್ಮ ಸ್ಥಳದಲ್ಲಿ ಕಾಯುತ್ತಿದ್ದಾರೆ ಎಂದು ಬರೆದ ಮೆಸೇಜ್ ನೋಡಿ ಗ್ರಾಹಕರು ಹೆದರಿ ಕ್ಯಾಬ್ ಬುಕ್ಕಿಂಗ್ ಅನ್ನು ರದ್ದುಗೊಳಿಸಿದ್ದಾರೆ ಎಂದು ತಿಳಿಸುವ ಮೂಲಕ ಆಶ್ವರ್ಯವನ್ನುಂಟು ಮಾಡಿದ್ದಾರೆ.

ಇದನ್ನೂ ಓದಿ: ಭೋಲೆ ಬಾಬಾ ಇರುತ್ತಿದ್ದುದು ಫೈವ್‌ ಸ್ಟಾರ್‌ ಆಶ್ರಮದಲ್ಲಿ! ಅವರಿಗಿದೆ ಅಪಾರ ಆಸ್ತಿ!

ಇದೇ ತರಹದ ಘಟನೆ ಕಳೆದ ಜನವರಿಯಲ್ಲಿ ನಡೆದಿದ್ದು, ಇದು ಆನ್‌ಲೈನ್ ನಲ್ಲಿ ವೈರಲ್ ಆಗಿತ್ತು. ಅದನ್ನು @ashimhta ಎಂಬ ಬಳಕೆದಾರರು ತಮ್ಮ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಆಕೆ ತನ್ನ ಉಬರ್ ಡ್ರೈವರ್ ನಡುವಿನ ಸಂಭಾಷಣೆಯ ಸ್ಕ್ರೀನ್‍ಶಾಟ್ ಅನ್ನು ಹಂಚಿಕೊಂಡಿದ್ದು, ಇದರಲ್ಲಿ ಭರತ್ ಎಂಬ ಚಾಲಕ “ಈ ಬುಕ್ಕಿಂಗ್ ಅನ್ನು ರದ್ದುಗೊಳಿಸಿ, ನನಗೆ ನಿದ್ರೆ ಬರುತ್ತಿದೆ” ಎಂದು ಮೆಸೇಜ್ ಕಳುಹಿಸಿದರು. ತನಗೆ ತುಂಬಾ ಸುಸ್ತಾಗಿದೆ. ಹಾಗಾಗಿ ಬರಲು ಆಗಲ್ಲ ಎಂದಿದ್ದ ಮೆಸೇಜ್‌ನ ಸ್ಕ್ರೀನ್‍ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.

Exit mobile version