ಅಕ್ರಮ ಸಂಬಂಧದ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಬರುತ್ತಿದೆ. ಪತಿ ಪತ್ನಿಯರು ಒಬ್ಬರು, ಇನ್ನೊಬ್ಬರಿಗೆ ತಿಳಿಯದಂತೆ ತಮ್ಮ ಕಚೇರಿಗಳಲ್ಲಿ, ಅಥವಾ ಇನ್ನಿತರ ಸ್ಥಳಗಳಲ್ಲಿ ಬೇರೆಯವರೊಡನೆ ಅಕ್ರಮ ಸಂಬಂಧವನ್ನು ಹೊಂದುವ ಪ್ರಕರಣಗಳು ಬಯಲಾಗುತ್ತಿವೆ. ಇದು ಈಗ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಆದರೆ ಇದೀಗ ಮಹಿಳೆಯೊಬ್ಬಳು ತಮ್ಮ ಬಾಸ್ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದರಿಂದ ಅನುಮಾನಗೊಂಡಿದ್ದ ಪತಿ ತನ್ನ ಹೆಂಡತಿಯ ರಹಸ್ಯ ಸಂಬಂಧವನ್ನು ಕಂಡುಹಿಡಿಯಲು ಡ್ರೋನ್ ಬಳಸಿ ಯಶಸ್ವಿಯಾಗಿದ್ದಾನೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News )ಆಗಿದೆ.
ಮಧ್ಯ ಹುಬೈ ಪ್ರಾಂತ್ಯದ ಶಿಯಾನ್‍ನಲ್ಲಿ ವಾಸಿಸುವ 33 ವರ್ಷದ ವ್ಯಕ್ತಿಯೊಬ್ಬನಿಗೆ ತನ್ನ ಪತ್ನಿ ತನ್ನನ್ನು ನಿರ್ಲಕ್ಷಿಸುತ್ತಿರುವುದು ತಿಳಿದುಬಂದಿದೆ. ಇದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ಅನುಮಾನ ಶುರುವಾಗಿದೆ. ಅಲ್ಲದೇ ಆತನ ಪತ್ನಿಗೆ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿದ್ದು, ತನ್ನ ಹೆತ್ತವರನ್ನು ಆಗಾಗ ಭೇಟಿ ಮಾಡಲು ಹೋಗುವುದು ಆತನಲ್ಲಿ ಅನುಮಾನವನ್ನುಂಟುಮಾಡಿದೆ. ಹಾಗಾಗಿ ಆತ ತನ್ನ ಹೆಂಡತಿಯ ಚಲನವಲನಗಳನ್ನು ಪತ್ತೆಹಚ್ಚಲು ಡ್ರೋನ್ ಅನ್ನು ಬಳಸಲು ನಿರ್ಧರಿಸಿದನು. ಪತ್ನಿಯ ಹಿಂದೆ ಡ್ರೋನ್ ಅನ್ನು ಕಳುಹಿಸಿದ ಆತ ಆಕೆ ಕಾರೊಂದರಲ್ಲಿ ದೂರದ ಪರ್ವತ ಪ್ರದೇಶಕ್ಕೆ ಹೋಗುವುದು ಕಂಡುಬಂದಿದೆ. ನಂತರ ಅಲ್ಲಿ ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಕೈ ಕೈ ಹಿಡಿದು ನಡೆದು ಪಾಳುಬಿದ್ದ ಮಣ್ಣಿನ ಗೋಡೆಯ ಮನೆಯೊಳಗೆ ಹೋಗುತ್ತಿರುವುದು ಕಂಡಿದೆ. ಸುಮಾರು 20 ನಿಮಿಷಗಳ ನಂತರ, ಅವರು ಕಟ್ಟಡದಿಂದ ಹೊರಬಂದು ನಂತರ ಅವಳು ತನ್ನ ಕೆಲಸ ಮಾಡುವ ಕಾರ್ಖಾನೆಗೆ ಹಿಂತಿರುಗಿದ್ದಾಳೆ. ಆಗ ಪತಿಗೆ ಆಕೆಗೆ ಅಕ್ರಮ ಸಂಬಂಧವಿರುವುದು ತಿಳಿದು ಬಂದಿದೆ.
ಹಾಗಾಗಿ ಡ್ರೋನ್‍ನಿಂದ ಸಂಗ್ರಹಿಸಿದ ಪುರಾವೆಗಳಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾನೆ ಎನ್ನಲಾಗಿದೆ. ಹಾಗೇ ಅವಳಿಗೆ ತನ್ನ ಬಾಸ್ ಜೊತೆ ಅಕ್ರಮ ಸಂಬಂಧವಿದ್ದು, ಕಾರ್ಖಾನೆಯಲ್ಲಿ ಅವರಿಗೆ ಸಂಬಂಧ ಹೊಂದಲು ಸಮಸ್ಯೆಯಾಗುತ್ತದೆ ಎಂದು ದೂರದ ಕಾಡಿನಲ್ಲಿ ಈ ಕೆಲಸ ಮಾಡಲು ಮುಂದಾಗಿರುವುದಾಗಿ ಪತಿ ತಿಳಿಸಿದ್ದಾನೆ. ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದು, ಪತ್ನಿಯ ಮೋಸವನ್ನು ಡ್ರೋನ್ ಮೂಲಕ ಬಯಲು ಮಾಡಿರುವ ಬಗ್ಗೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕೆಲವರು ಡ್ರೋನ್ ತಂತ್ರಜ್ಞಾನದಿಂದ ಆತನ ಪತ್ನಿಯ ಮೋಸ ಬಯಲಾಗಿದೆ ಎಂದು ಹೊಗಳಿದ್ದಾರೆ. ಹಾಗೇ ಡ್ರೋನ್‍ನಂತಹ ತಂತ್ರಜ್ಞಾನ ಇರುವ ಈ ಕಾಲದಲ್ಲಿ ಇಂತಹ ಮೋಸ ನಡೆಯುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಕ್ಕಳಿಗೆ ಈಗ ಶಾಲೆ ಕೂಡ ಸುರಕ್ಷಿತವಲ್ಲ! ಶಾಲಾ ಶೌಚಾಲಯದಲ್ಲಿ ಬಾಲಕಿ ಮೇಲೆ ಬಾಲಕನಿಂದ ಅತ್ಯಾಚಾರ
ಡ್ರೋನ್ ತಂತ್ರಜ್ಞಾನ ಇತೀಚಿನ ದಿನಗಳಲ್ಲಿ ಹೆಚ್ಚಿನ ಕೆಲಸಕ್ಕೆ ಬಳಸಲಾಗುತ್ತಿದೆ. ಏಪ್ರಿಲ್ 2022ರಲ್ಲಿ ಶಾಂಘೈನಲ್ಲಿ ಕಟ್ಟುನಿಟ್ಟಾದ ಕೋವಿಡ್ -19 ಲಾಕ್‍ಡೌನ್ ಇದ್ದಾಗ, ವ್ಯಕ್ತಿಯೊಬ್ಬರು ಎತ್ತರದ ಕಟ್ಟಡದಲ್ಲಿ ವಾಸಿಸುತ್ತಿದ್ದ ನೆರೆಹೊರೆಯವರಿಗೆ ಮೀನು ಮತ್ತು ತರಕಾರಿಗಳಂತಹ ದೈನಂದಿನ ಅಗತ್ಯ ವಸ್ತುಗಳನ್ನು ಡ್ರೋನ್‍ನಲ್ಲಿ ವಿತರಿಸಿ ಗಮನ ಸೆಳೆದಿದ್ದರು.