Site icon Vistara News

Viral News: ಆರ್ಡರ್ ಮಾಡಿ 6 ವರ್ಷ ಕಳೆದರೂ ವಸ್ತು ಕಳುಹಿಸದ ಫ್ಲಿಪ್‌ಕಾರ್ಟ್!

Viral News

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಬಹುತೇಕ ಸಮಯ ಈ ಆರ್ಡರ್ ಅವರು ತಿಳಿಸಿದ ಸಮಯಕ್ಕೆ ಸರಿಯಾಗಿ ಬರುತ್ತದೆ, ಕೆಲವೊಮ್ಮೆ ಅದಕ್ಕೂ ಮುಂಚಿತವಾಗಿ ಬರುತ್ತದೆ. ಆದರೆ ಮುಂಬೈ ವ್ಯಕ್ತಿಯೊಬ್ಬರಿಗೆ ವಸ್ತುವನ್ನು ಆರ್ಡರ್ ಮಾಡಿದ 6 ವರ್ಷಗಳ ನಂತರ ಕಸ್ಟಮರ್ ಕೇರ್‌ನಿಂದ ಕರೆ ಬಂದಿದೆಯಂತೆ. ಅಂದ ಹಾಗೆ ಆರು ವರ್ಷ ಕಳೆದರೂ ಅವರಿಗೆ ಆರ್ಡರ್‌ ಮಾಡಿದ ವಸ್ತು ಬಂದಿರಲಿಲ್ಲ. ಈ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.

ಅಹ್ಸಾನ್ ಖರ್ಬಾಯಿ ಎಂಬ ಮುಂಬೈ ನಿವಾಸಿ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅವರ ಆರ್ಡರ್ ಹಿಸ್ಟ್ರಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿ ತಮಗಾದ ಈ ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಅವರು ತಿಳಿಸಿದಂತೆ 2018ರಲ್ಲಿ ಫ್ಲಿಪ್ ಕಾರ್ಟ್ ಇ ಕಾಮರ್ಸ್ ವೆಬ್ ಸೈಟ್‌ನಲ್ಲಿ ಅಹ್ಸಾನ್ ಸ್ಪಾರ್ಕ್ಸ್ ಚಪ್ಪಲಿಯನ್ನು ಆರ್ಡರ್ ಮಾಡಿದ್ದರಂತೆ. ಆದರೆ ಚಪ್ಪಲಿಯನ್ನು ಅವರು ಇಂದಿಗೂ ಡೆಲಿವರಿ ನೀಡಲಿಲ್ಲ. ಆದರೆ 6 ವರ್ಷಗಳು ಕಳೆದ ನಂತರ ಅದು ಡೆಲಿವರಿ ಆಗಲಿದೆ ಎಂದು ತೋರಿಸುತ್ತಿದ್ದ ಕಾರಣ ಅವರು ಅದನ್ನು ಕ್ಲಿಕ್ ಮಾಡಿದ್ದಾರೆ. ಆಗ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ನಿಂದ ಕರೆ ಬಂದಿದೆಯಂತೆ. “ನೀವು ಆರ್ಡರ್ ನೊಂದಿಗೆ ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?” ಎಂದು ಕೇಳುವ ಕರೆಯನ್ನು ಸ್ವೀಕರಿಸಿದ ಅಹ್ಸಾನ್ ಅದಕ್ಕೆ ಉತ್ತರಿಸಿದ್ದಕ್ಕೆ “ಫ್ಲಿಪ್ ಕಾರ್ಟ್ ನಿಂದ ನಿಮಗೆ ಯಾವುದೇ ಕರೆ ಬರಲಿಲ್ಲವೇ? ಇದಕ್ಕಾಗಿ ನಾವು ವಿಷಾದಿಸುತ್ತೇವೆ ಸರ್” ಎಂದು ಹೇಳಿ ಕರೆ ಕಟ್ ಆಗಿದೆಯಂತೆ.

ಅಹ್ಸಾನ್ ಅವರು ಆರ್ಡರ್ ಅನ್ನು ಕ್ಯಾಶ್ ಆನ್ ಡೆಲಿವರಿಗೆ ಮಾಡಿದ್ದರಿಂದ ಅವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲವಂತೆ. ಆದರೆ ಅದನ್ನು ರದ್ದುಗೊಳಿಸಲು ಅದರಲ್ಲಿ ಯಾವುದೇ ಆಯ್ಕೆ ಇರಲಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಆದರೆ ಅವರ ಆರ್ಡರ್ ಲಿಸ್ಟ್ ತೆಗೆದಾಗ ಮೊದಲು ಅದೇ ಆರ್ಡರ್ ಬರುವ ಕಾರಣ ಅದನ್ನು ಅವರೇ ರದ್ದುಗೊಳಿಸಬೇಕೆಂದು ಅಹ್ಸಾನ್ ಕೇಳಿಕೊಂಡಿದ್ದಾರೆ.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಗೆ 1.3 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ಜೊತೆಗೆ ಅನೇಕ ಕಾಮೆಂಟ್ ಗಳು ಕೂಡ ಬಂದಿದೆ. ಅದರಲ್ಲಿ ಕೆಲವರು ಫ್ಲಿಪ್ ಕಾರ್ಟ್ ನಲ್ಲಿ ತಮಗೂ ಇದೇ ರೀತಿಯ ಅನುಭವವಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಅದರಲ್ಲಿ ಯಾವುದೂ 6 ವರ್ಷಗಳ ದೀರ್ಘಕಾಲದವರೆಗೆ ವಿಳಂಬವಾಗಿರಲಿಲ್ಲ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಹಾಗಾಗಿ ಫ್ಲಿಪ್ ಕಾರ್ಟ್ ಸೇರಿದಂತೆ ಯಾವುದೇ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಮೋಸ, ವಂಚನೆ ನಡೆಯುತ್ತಿರುತ್ತದೆ. ಆದಕಾರಣ ಇವುಗಳಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡುವಾಗ ಕ್ಯಾಶ್ ಆನ್ ಡೆಲಿವರಿ ಗೆ ಆರ್ಡರ್ ಮಾಡಿ. ಇದರಿಂದ ನಿಮಗೆ ಯಾವುದೇ ನಷ್ಟವಾಗುವುದಿಲ್ಲ.

Exit mobile version