ಹುಟ್ಟಿದ ಮಗುವಿಗೆ ಮೊದಲ ಗುರು ತಾಯಿಯೇ ಆಗಿರುತ್ತಾಳೆ. ಯಾಕೆಂದರೆ ತಾಯಿಯನ್ನು ನೋಡಿಯೇ ಮಕ್ಕಳು ಕಲಿಯುವುದರಿಂದ, ಮಕ್ಕಳು ತಾಯಿಯ ಜೊತೆ ಸಾಕಷ್ಟು ಸಮಯ ಕಳೆಯುವುದರಿಂದ ಮಕ್ಕಳ ಪಾಲಿಗೆ ಅವಳೇ ಗುರುವಾಗಿರುತ್ತಾಳೆ. ಮಕ್ಕಳು ಉತ್ತಮ ಸಂಸ್ಕಾರವಂತರಾದರೆ ಅದಕ್ಕೆ ಅವರ ತಾಯಿಯೇ ಕಾರಣೀಕರ್ತಳಾಗಿರುತ್ತಾಳೆ. ಇನ್ನು ತಾನು ಹಾಲೂಣಿಸಿ ಬೆಳೆಸಿದ ಮಗು ಕೆಟ್ಟದಾರಿ ಹಿಡಿದರೆ ಆ ತಾಯಿಗೆ ಆಗುವ ಅಘಾತ ಅಷ್ಟಿಷ್ಟಲ್ಲ. ಇಷ್ಟೆಲ್ಲಾ ಯಾಕೆ ಹೇಳುತ್ತಿರುವುದು ಎಂದರೆ ಇಲ್ಲೊಬ್ಬಳು ತಾಯಿ ಆ ಸ್ಥಾನಕ್ಕೆ ಅಪಮಾನ ಮಾಡಿದ್ದಾಳೆ. ತನ್ನ ಕರುಳಬಳ್ಳಿಗೆ ಕೆಟ್ಟ ಗುಣಗಳನ್ನು ಕಲಿಸುತ್ತಿರುವ ಘಟನೆ ಅಸ್ಸಾಂನಲ್ಲಿ ನಡೆದಿದ್ದು, ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.
ಅಸ್ಸಾಂನ ಸಿಲ್ಚಾರ್‌ನ ಚೆಂಗ್ಕುರಿಯಲ್ಲಿ ಮಹಿಳೆಯೊಬ್ಬಳು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡಲು ಒತ್ತಾಯಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ಪೋಟೊಗಳ ಆಧಾರದ ಮೇಲೆ ಸ್ಥಳೀಯ ಮಕ್ಕಳ ಸಹಾಯವಾಣಿ ಘಟಕವು ಮಹಿಳೆಯ ಮೇಲೆ ದೂರು ದಾಖಲಿಸಿದೆ ಎಂಬುದಾಗಿ ವರದಿಯಾಗಿದೆ. ದೂರಿನ ನಂತರ ಪೊಲೀಸರು ಮಹಿಳೆಯ ನಿವಾಸಕ್ಕೆ ತಲುಪಿ ಮಗುವನ್ನು ರಕ್ಷಿಸಿ ತಾಯಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
In an absolutely disturbing incident, a woman has been found to allegedly force her 20-month-old child to smoke cigarettes and even drink alcohol. The incident took place in the Chengkuri area of Silchar on Wednesday night.
— ForMenIndia (@ForMenIndia_) June 15, 2024
The Child Helpline Cell received a complaint with… pic.twitter.com/fwPZ593pts
‘ಸಿಲ್ಚಾರ್ ನ ಚೆಂಗ್ಕುರಿಯಲ್ಲಿ ಬುಧವಾರ ರಾತ್ರಿ ತಾಯಿಯೊಬ್ಬಳು ಮಗುವನ್ನು ಧೂಮಪಾನ ಮತ್ತು ಮದ್ಯಪಾನ ಮಾಡುವಂತೆ ಒತ್ತಾಯಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅವರು ಸೂಕ್ತ ಕ್ರಮ ಕೈಗೊಂಡು ತಾಯಿಯನ್ನು ವಶಕ್ಕೆ ತೆಗೆದುಕೊಂಡು ಮಗುವನ್ನು ರಕ್ಷಿಸಿದ್ದಾರೆ’ ಎಂದು ಮಕ್ಕಳ ಸಹಾಯವಾಣಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ತಾಯಿ ಮತ್ತು ಮಗು ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದಾರೆ ಮತ್ತು ಸಮಗ್ರ ತನಿಖೆಗಾಗಿ ದೃಶ್ಯ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಹಿನ್ನಲೆಯಲ್ಲಿ ಈ ಪೋಟೊಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಮಹಿಳೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕೆಲವರು ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸಿದ್ದಾರೆ. ಮತ್ತೊಬ್ಬರು, ಮಗುವನ್ನು ಪ್ರೀತಿ ಮತ್ತು ಜವಬ್ದಾರಿಯಿಂದ ನೋಡಿಕೊಳ್ಳುವ ಕುಟುಂಬಕ್ಕೆ ದತ್ತು ನೀಡಬೇಕು. ಅವಳು ತಾಯಿಯಾಗಲು ಯೋಗ್ಯಳಲ್ಲ. ವಿದೇಶಗಳಲ್ಲಿ ಇಂತಹ ತಾಯಿಗೆ ದೀರ್ಘಕಾಲದವರೆಗೆ ಜೈಲಿನಲ್ಲಿ ಬಂಧಿಯಾಗಿರುವಂತಹ ಶಿಕ್ಷೆ ನೀಡುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಕೆಲವರು ಮಹಿಳೆಗೆ ಕೌನ್ಸಿಲಿಂಗ್ ಅಗತ್ಯವಿದೆ ಎಂದರೆ, ಇನ್ನೂ ಕೆಲವರು ಮಹಿಳೆಯರು ಸಹಾನುಭೂತಿಯ ಪ್ರತಿರೂಪವೆಂದು ಪರಿಗಣಿಸುವ ದಿನಗಳು ಕಳೆದುಹೋಗಿವೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪುರುಷರಿಗಿಂತ ಕೆಟ್ಟವರಾಗಿದ್ದಾರೆ ಎಂದು ಮಹಿಳಾ ಕುಲದ ಬಗ್ಗೆ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ
Feel terrible for kids around these reel monsters pic.twitter.com/VujAzvmClj
— Deepika Narayan Bhardwaj (@DeepikaBhardwaj) June 17, 2024
ಇದೇರೀತಿಯ ಘಟನೆಯೊಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಕೊಂಡಿದ್ದು, ಇದರಲ್ಲಿ ಮಹಿಳೆಯೊಬ್ಬಳು ತನ್ನ ಮಗುವನ್ನು ಎತ್ತಿಕೊಂಡು ಹಳೆಯ ಪ್ರಸಿದ್ಧ ಬಾಲಿವುಡ್ ಹಾಡಿಗೆ ರೀಲ್ಸ್ ಮಾಡುವಾಗ ಸಿಗರೇಟ್ ಸೇದುತ್ತಿರುವ ವಿಡಿಯೊ ಇದೆ. ಈ ವಿಡಿಯೊ ಕೂಡ ವೈರಲ್ ಆಗಿದ್ದು, ಅನೇಕರು ಮಹಿಳೆಯ ಮೇಲೆ ಕಿಡಿಕಾರಿದ್ದಾರೆ.