Site icon Vistara News

Viral Video: ಕಂಬಕ್ಕೆ ಸಿಲುಕಿದ ತ್ರಿವರ್ಣ ಧ್ವಜ; ಮಿಂಚಂತೆ ಬಂದು ಧ್ವಜ ಬಿಡಿಸಿದ ಹಕ್ಕಿ; ಅಪರೂಪದ ಘಟನೆ!

Viral Video


ಆಗಸ್ಟ್ 15ರಂದು ದೇಶದ ಸ್ವಾತಂತ್ರ್ಯೋತ್ಸವವನ್ನು ಎಲ್ಲಾ ಕಡೆ ಧ್ವಜ ಹಾರಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಗಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳನ್ನು ಪೋಸ್ಟ್ ಮಾಡಲಾಗಿತ್ತು. ಆದರೆ ಒಂದು ವಿಡಿಯೊ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸುವ ಮೂಲಕ ಗಮನ ಸೆಳೆದಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಈ ವೈರಲ್ ವಿಡಿಯೊದಲ್ಲಿ ಶಾಲೆಯ ಮಕ್ಕಳು ಝಂಡಾ ಊಂಚಾ ರಹೆ ಹಮಾರಾ ಎಂಬ ಹಿಂದಿ ಭಾಷೆಯ ದೇಶ ಭಕ್ತಿಗೀತೆ ಹಾಡುತ್ತಿರುವುದು ಕೇಳುತ್ತಿದೆ. ಆ ವೇಳೆ ರಾಷ್ಟ್ರಧ್ವಜವನ್ನು ಹಗ್ಗಕ್ಕೆ ಕಟ್ಟಿ ಮೇಲಕ್ಕೆ ಎಳೆಯುತ್ತಿದ್ದಾರೆ. ಆದರೆ ಧ್ವಜ ಮೇಲೆ ಹೋಗಿ ಎಷ್ಟೇ ಎಳೆದರೂ ಅದು ಬಿಡಿಸಿಕೊಂಡು ಹಾರಲಿಲ್ಲ. ಆಗ ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ ಹಕ್ಕಿಯೊಂದು ಧ್ವಜವನ್ನು ಬಿಡಿಸಿ ಅದು ಹಾರುವಂತೆ ಮಾಡಿ ಹಾರಿ ಹೋಗಿದೆ. ವಿಡಿಯೊ ಕೊನೆಯಲ್ಲಿ ಮಲಯಾಳಂನಲ್ಲಿ ಕೈಯಡಿ ಕೈಯಡಿ ( ಚಪ್ಪಾಳೆ ತಟ್ಟಿ, ಚಪ್ಪಾಳೆ ತಟ್ಟಿ) ಎನ್ನುತ್ತಿರುವುದು ಕೇಳಿದೆ.

ಈ ವಿಡಿಯೊವನ್ನು ನಚಿಕೇತಸ್ (@nach1keta) ಎಂಬ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 16ರ ರಾತ್ರಿ 11.24ಕ್ಕೆ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಈಗ ಇದು ವೈರಲ್ ಆಗಿದೆ. ಈ ವಿಡಿಯೊ ಈಗಾಗಲೇ 7700ಕ್ಕೂ ಹೆಚ್ಚು ಲೈಕ್ಸ್ ,11 ಸಾವಿರಕ್ಕೂ ಹೆಚ್ಚು ವೀವ್ಸ್, 1600ಕ್ಕೂ ಹೆಚ್ಚು ರೀಟ್ವೀಟ್ ಮತ್ತು 50ರಷ್ಟು ಕಾಮೆಂಟ್ ಕೂಡ ಬಂದಿದೆ. ಹಲವರು ಈ ವಿಡಿಯೊವನ್ನು ಡೌನ್ಲೋಡ್ ಮಾಡಿ ತಮ್ಮ ಖಾತೆಯಿಂದ ಶೇರ್ ಕೂಡ ಮಾಡಿದ್ದಾರೆ. ಇದು ಕೇರಳದ ವಿಡಿಯೊ ಎಂದು ಹೇಳಲಾಗುತ್ತಿದ್ದು, ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆಯಿತು ಎಂಬುದು ತಿಳಿದುಬಂದಿಲ್ಲ.

ಈ ವಿಡಿಯೊ ನೋಡಿದವರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಹಲವರು ವಾವ್ ಎಂದು ಬರೆದರೆ, ಅನೇಕರು ಈ ವಿಡಿಯೊ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.ಈ ವಿಡಿಯೊಗೆ ಕಾಮೆಂಟ್ ಮಾಡಿದ ಒಬ್ಬರು ಆ ಹಕ್ಕಿ ಹಿಂದಿನ ಜನ್ಮದಲ್ಲಿ ಸೈನಿಕನಾಗಿ ಕೆಲಸ ಮಾಡಿರಬೇಕು ಎಂದು ಹೇಳಿದರೆ, ಇನ್ನೊಬ್ಬರು , ಆ ಹಕ್ಕಿ ಉದ್ದೇಶಪೂರ್ವಕವಾಗಿಯೇ ಧ್ವಜದ ಹತ್ತಿರ ಬಂದಿದೆ. ಧ್ವಜ ಹಾರಿದ ಕೂಡಲೇ ಅಲ್ಲಿಂದ ಹಿಂತಿರುಗಿದೆ, ನಿಜಕ್ಕೂ ಪವಾಡದಂತೆಯೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆ ಹಕ್ಕಿ ದೂರದಲ್ಲೆಲ್ಲೋ ತೆಂಗಿನ ಮರದ ಮೇಲಿತ್ತು. ಅದು ರಾಷ್ಟ್ರಧ್ವಜಕ್ಕೆ ಸಮೀಪದಲ್ಲೆಲ್ಲೂ ಇರಲಿಲ್ಲ. ಇದ್ದಕ್ಕಿದ್ದಂತೆ ಬಂದಿದೆ ಎಂದರೆ ಅದು ವಿಷುವಲ್ ಎಫೆಕ್ಟ್ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ನಡು ರಸ್ತೆಯಲ್ಲಿ ಸ್ಟಂಟ್ ಮಾಡುತ್ತ ಬೈಕ್‍ ಸವಾರರ ರೀಲ್ಸ್; ಮುಂದೇನಾಯ್ತು ನೋಡಿ!

ಇತ್ತೀಚೆಗಷ್ಟೇ ಜಪಾನಿನ ಫೇಮಸ್ ಕೋಕಿ ಶಿಶಿಡೋ ಅವರು ‘ಜಪಾನ್ ನಲ್ಲಿ 24 ಗಂಟೆಗಳ ಭಾರತೀಯ ಆಹಾರ ಚಾಲೆಂಜ್’ ಅನ್ನು ಸ್ವೀಕರಿಸಿ ಜಪಾನ್‌ನ ಭಾರತೀಯ ಪಾಕಪದ್ಧತಿ ರೆಸ್ಟೋರೆಂಟ್‌ಗೆ ಭೇಟಿ ನೀಡುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ರೆಸ್ಟೋರೆಂಟ್‍ಗೆ ಭೇಟಿ ನೀಡಿದಾಗ, ಜನರು ವಿಡಿಯೊ ನೋಡಿ ಅದರಲ್ಲಿ ಏನೋ ಸರಿಯಾಗಿಲ್ಲ ಎಂದು ಕಂಡುಕೊಂಡರು. ಆದರೆ ಜನರ ಗಮನವನ್ನು ಸೆಳೆದದ್ದು ಆಹಾರ ಅಥವಾ ಸಿಬ್ಬಂದಿಯ ನಡವಳಿಕೆಯಲ್ಲ ಬದಲಾಗಿ ಭಾರತೀಯ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದ ರೀತಿ ಅಲ್ಲಿ ತಪ್ಪಾಗಿತ್ತು. ಭಾರತದ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ನೇತುಹಾಕಲಾಗಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.

Exit mobile version