Site icon Vistara News

Viral Video: ಪ.ಬಂಗಾಳದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಬರ್ಬರ ಹಲ್ಲೆ; ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ‌ ಮೇಲೆ ಕಿಡಿಕಾರಿದ ಜನ

Viral Video

ರಾಜಕೀಯ ವ್ಯಕ್ತಿಗಳ ಬೆಂಬಲವಿರುವಂತಹ ಕೆಲವು ವ್ಯಕ್ತಿಗಳು ತಮ್ಮ ಊರಿನಲ್ಲಿ ದುರ್ಬಲರು, ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ಎಸಗುತ್ತಿರುತ್ತಾರೆ. ಯಾಕೆಂದರೆ ಅವರ ಮೇಲೆ ಯಾವುದೇ ಆರೋಪ ಬಂದರೂ ಮಂತ್ರಿಗಳು ತಮ್ಮ ಬೆಂಬಲಕ್ಕೆ ನಿಂತು ನಮಗೆ ಸಹಾಯ ಮಾಡುತ್ತಾರೆ ಎಂಬ ನಂಬಿಕೆ. ಇಂತಹ ಘಟನೆಗಳನ್ನು ನಾವು ಹೆಚ್ಚು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಇಂತಹ ಘಟನೆಗಳು ನಿಜಜೀವನದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸಖತ್ ವೈರಲ್ (Viral Video )ಆಗಿ ಆಕ್ರೋಶ ವ್ಯಕ್ತವಾಗುತ್ತಿದೆ.

ಟಿಎಂಸಿ ಶಾಸಕರೊಬ್ಬರಿಗೆ ತುಂಬಾ ಹತ್ತಿರದವ ಎನಿಸಿಕೊಂಡ ಗೂಂಡಾ ವ್ಯಕ್ತಿಯೊಬ್ಬ ತನ್ನ ಗ್ಯಾಂಗ್‍ನೊಂದಿಗೆ ಸೇರಿಕೊಂಡು ಮಹಿಳೆಯೊಬ್ಬರ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾರೆ. ಈ ಆಘಾತಕಾರಿ ವಿಡಿಯೊ ಹೊರಬಂದ ನಂತರ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಕಮರ್ ಹಟ್ಟಿ ಪುರಸಭೆಯ ವ್ಯಾಪ್ತಿಯ ಅರಿಯಾಡಾಹದ ತಲ್ತಾಲಾ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಈ ವಿಡಿಯೊದಲ್ಲಿ ವ್ಯಕ್ತಿ ಮತ್ತು ಅವರ ಸಹಚರರು ಯುವತಿಯನ್ನು ಕ್ರೂರವಾಗಿ ಥಳಿಸುತ್ತಿರುವುದನ್ನು ಚಿತ್ರಿಸಲಾಗಿದೆ. ಮಹಿಳೆಯನ್ನು ನೆಲದಿಂದ ಮೇಲಕ್ಕೆತ್ತಿ, ಆಕೆಯ ಎರಡೂ ಕೈಕಾಲುಗಳನ್ನು ಹಿಡಿದುಕೊಂಡು ದೊಣ್ಣೆಯಿಂದ ಇಬ್ಬರು ಪುರುಷರು ಆಕೆಯನ್ನು ಕ್ರೂರವಾಗಿ ಥಳಿಸಿದ್ದಾರೆ. ಆ ಅಸಹಾಯಕ ಮಹಿಳೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಲೇ ಇದ್ದಳು ಮತ್ತು ಗೂಂಡಾಗಳು ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಆಕೆ ನೋವನ್ನು ಸಹಿಸಲಾಗದೆ ತನ್ನ ದೇಹವನ್ನು ಎರಡು ಬಾರಿ ತಿರುಚಿದಳು ಆದರೆ ಅವಳನ್ನು ಹಿಡಿದ ಗೂಂಡಾಗಳು ಅವಳನ್ನು ಬಿಡಲು ನಿರಾಕರಿಸಿದ್ದಾರೆ. ಈ ಗೂಂಡಾವನ್ನು ಜಯಂತ ಸಿಂಗ್ ಎಂದು ಗುರುತಿಸಲಾಗಿದ್ದು, ಟಿಎಂಸಿ ಶಾಸಕ ಮದನ್ ಮಿತ್ರಾ ಅವರ ನಿಕಟವರ್ತಿಯಾಗಿದ್ದ ಮತ್ತು ಈ ಪ್ರದೇಶದಲ್ಲಿ ‘ಸುಪಾರಿ’ ತೆಗೆದುಕೊಳ್ಳುವುದರಲ್ಲಿ ಕುಖ್ಯಾತನಾಗಿದ್ದ ಎನ್ನಲಾಗಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ ಮತ್ತು ನ್ಯಾಯಕ್ಕಾಗಿ ಬೇಡಿಕೆಗಳನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ರಾಯಗಢ ಕೋಟೆಯಲ್ಲಿ ಪ್ರವಾಸಿಗರಿಗೆ ಪ್ರಾಣ ಸಂಕಟ; ವಿಡಿಯೊ ನೋಡಿ

ಹಾಗೇ ಕ್ರಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರನ್ನು ರಕ್ಷಿಸಲು ವಿಫಲರಾಗಿದ್ದಾರೆ ಮತ್ತು ಅವರ ಪಕ್ಷದ ಸದಸ್ಯರಿಗೆ ನಿರ್ಭೀತಿಯಿಂದ ಇಂತಹ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ. ಈ ಘಟನೆಯು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ವ್ಯಾಪಕ ಖಂಡನೆ ಮತ್ತು ಗಂಭೀರ ಕಳವಳಗಳಿಗೆ ಕಾರಣವಾಗಿದೆ. ಘಟನೆಯ ವಿಡಿಯೊ ವೈರಲ್ ಆದ ನಂತರ, ಆರೋಪಿ ಜಯಂತ್ ಸಿಂಗ್ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿರುವುದಾಗಿ ಅವರು ತಿಳಿಸಿದ್ದಾರೆ.

Exit mobile version