Site icon Vistara News

Viral Video: ನಡೆದು ಹೋಗುತ್ತಿದ್ದ ಹುಡುಗಿಯ ಎದುರು ಹಸ್ತಮೈಥುನ ಮಾಡಿಕೊಂಡ ವಿಕೃತ ಯುವಕ!

Viral Video

ಜನ ಶೈಕ್ಷಣಿಕವಾಗಿ ಮೇಲ್ದರ್ಜೆಗೆ ಏರುತ್ತಿದ್ದಂತೆ ಸಾಮಾಜಿಕವಾಗಿ ಎಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಮನುಷ್ಯನ ವಿಕೃತ ಮುಖವನ್ನು ವಿಜೃಂಭಿಸುತ್ತದೆ. ನಡುರಸ್ತೆಯಲ್ಲಿ ನಾಚಿಕೆ ಬಿಟ್ಟ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವಿಡಿಯೊವೊಂದು ವೈರಲ್‌ (Viral Video) ಆಗಿದೆ.

ಪಶ್ಚಿಮ ಬಂಗಾಳದ ಬಸಿರ್ಹರ್ತ ಜಿಲ್ಲೆಯ ಗ್ರಾಮಾಂತರ ರಸ್ತೆಯಲ್ಲಿ ಹುಡುಗಿಯೊಬ್ಬಳು ನಡೆದುಕೊಂಡು ಹೋಗುವ ಸಂದರ್ಭ ವ್ಯಕ್ತಿಯೊಬ್ಬ ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಳ್ಳುವ ಅಸಹ್ಯಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅಸಹ್ಯಕರ ವಿಡಿಯೋವನ್ನು ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ನೆಟಿಜನ್ ಗಳು ಹಂಚಿಕೊಂಡಿದ್ದಾರೆ.

ಬೈಕ್ ನಲ್ಲಿ ಸಂಚರಿಸುವ ವ್ಯಕ್ತಿ ಇದ್ದಕ್ಕಿಂದ್ದಂತೆ ಬೈಕ್ ನಿಲ್ಲಿಸುತ್ತಾನೆ ಹಾಗೂ ಹಿಂತಿರುಗಿ ನೋಡುತ್ತಾನೆ. ಈ ವೇಳೆ ಇನ್ನೊಂದು ಬೈಕ್ ಅವನ ಹತ್ತಿರದಿಂದ ಹಾದು ಹೋಗುತ್ತದೆ. ಬಳಿಕ ಇನ್ನಾವುದೇ ವಾಹನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಆತ ತನ್ನ ಖಾಸಗಿ ಅಂಗವನ್ನು ಪದೇಪದೇ ಮುಟ್ಟಿಕೊಳ್ಳುತ್ತ ಹಸ್ತಮೈಥುನ ಆರಂಭಿಸುತ್ತಾನೆ.

ಆಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅದೇ ದಾರಿಯಲ್ಲಿ ತೆರಳುತ್ತಾಳೆ. ಆಗ ಬೈಕ್ ಬಿಟ್ಟು ಹುಡುಗಿಯನ್ನೇ ನೋಡಿಕೊಳ್ಳುತ್ತಾ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಒಂದು ಹಂತದಲ್ಲಿ ಆಕೆಯನ್ನು ಆತ ಬೆನ್ನಟ್ಟಲು ಪ್ರಯತ್ನಿಸಿ, ಇನ್ನೊಂದು ವಾಹನ ಕಣ್ಣಿಗೆ ಬೀಳುತ್ತಿದ್ದಂತೆ ತನ್ನ ಬೈಕ್ ಏರಿ ಓಡಿ ಹೋದ ದೃಶ್ಯಗಳೂ ಕಾಣಸಿಗುತ್ತವೆ.

ಇದನ್ನೂ ಓದಿ: Nita Ambani: ಕಾಶಿಯಲ್ಲಿ ಮದುವೆ ಆಮಂತ್ರಣ ಪೂಜೆ; ಚಾಟ್‌ ಅಂಗಡಿಗೂ ಭೇಟಿ ನೀಡಿದ ನೀತಾ ಅಂಬಾನಿ

ಇದು ಹೀಗೆ ಮುಂದುವರಿದರೆ ಸಾರ್ವಜನಿಕ ರಸ್ತೆಗಳು ಸುರಕ್ಷಿತವಲ್ಲ ಎಂಬ ಭಾವನೆ ನಾಗರಿಕರಿಗೆ ಬರಬಹುದು, ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನೆಟಿಜನ್‌ಗಳು ಪೊಲೀಸರನ್ನು ಒತ್ತಾಯಿಸಿದ್ದಾರೆ.

Exit mobile version