Site icon Vistara News

Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

Viral Video

ಕೊಲಂಬಿಯಾ : ತಾಳಿ ಕಟ್ಟಿಸಿಕೊಂಡ ಒಬ್ಬನ ಜೊತೆ ಸರಿಯಾಗಿ ಬಾಳ್ವೆ ನಡೆಸದೇ ಮದುವೆಯಾಗಿ ಮಾರನೇ ದಿನಕ್ಕೆ ವಿಚ್ಛೇದನ ನೀಡುವ ಹೆಣ್ಣಿನ ಬಗ್ಗೆ, ಮನೆಯಲ್ಲಿ ಹೆಂಡತಿಯಿದ್ದರೂ, ಹೊರಗಡೆ ಸಂಬಂಧ ಇಟ್ಟುಕೊಂಡ ಗಂಡಸಿನ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ. ಇನ್ನು ನಮ್ಮ ಪುರಾಣದ ಪುಟ ತಿರುವಿ ಹಾಕಿದರೆ ಮಹಾಭಾರತದಲ್ಲಿ ದ್ರೌಪದಿಗೆ ಐದು ಮಂದಿ ಪತಿಯರಿರುವುದನ್ನೂ ಕೇಳಿರುತ್ತೇವೆ. ಆದರೆ ಕಲಿಯುಗದ ಈ ಮಹಿಳೆಯೊಬ್ಬಳು 7 ಮಂದಿ ಪುರುಷರ ಜೊತೆ ಸುಖವಾಗಿ ಕಾಲ ಕಳೆಯುತ್ತಿರುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದ್ದು, ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ವರದಿಯ ಪ್ರಕಾರ ಲೀನಾ ಎಂಬ ಮಹಿಳೆ ಕೊಲಂಬಿಯಾದ ಬ್ಯಾರನ್ ಕ್ವಿಲ್ಲಾ ನಗರದಲ್ಲಿ ವಾಸವಾಗಿದ್ದಳು. ಆಕೆಗೆ 7 ಮಂದಿ ಗೆಳೆಯರಿದ್ದು, ಎಲ್ಲರೂ ವಯಸ್ಸಾದ ಮುದುಕರಾಗಿದ್ದಾರೆ. ಅಲ್ಲದೇ ಅವರ ಖರ್ಚುವೆಚ್ಚವನ್ನು ಆಕೆಯೇ ನೋಡಿಕೊಳ್ಳುತ್ತಾಳೆ ಎನ್ನಲಾಗಿದೆ. ಇನ್ನು ಅವರ ಜೊತೆಗೆ ಸಂಬಂಧ ಹೊಂದಲು ಕಾರಣವೇನು ಎಂಬುದನ್ನು ಆಕೆ ಬಿಚ್ಚಿಟ್ಟಿದ್ದಾಳೆ.

ಮಹಿಳೆಯ ಸಂದರ್ಶನದ ವಿಡಿಯೊವನ್ನು ಯೂಟ್ಯೂಬ್ ಚಾನೆಲ್‌ವೊಂದು ಪೋಸ್ಟ್ ಮಾಡಿದ್ದು, ಈ ವಿಡಿಯೊದಲ್ಲಿ ಮಹಿಳೆ ತಿಳಿಸಿದಂತೆ ಆಕೆಗೆ ತನ್ನ ಪ್ರಿಯತಮನ ಜೊತೆಗಿನ ಸಂಬಂಧದಲ್ಲಿ ಸಮಸ್ಯೆಯಾದ ಕಾರಣ ಆಕೆ ತನ್ನ ಜೀವನವನ್ನು ಸಾಗಿಸಲು ಪಿಂಚಣಿ ಹೊಂದಿರುವ ವಯಸ್ಸಾದ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಲು ಶುರುಮಾಡಿದಳಂತೆ. ಆಕೆ ಮೊದಲು ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಆದರೆ ಅವರ ನಡುವೆ ಸಮಸ್ಯೆ ಉಂಟಾದ ಕಾರಣ ಇಬ್ಬರೂ ದೂರವಾದರು. ಹೀಗಿರುವಾಗ ಒಂದು ದಿನ ಆಕೆಯ ಪಕ್ಕದ ಮನೆಯ ವಯಸ್ಸಾದ ವ್ಯಕ್ತಿಯೊಬ್ಬ ಅವಳ ಜೊತೆ ಚೆಲ್ಲಾಟವಾಡಲು ಶುರುಮಾಡಿದನಂತೆ. ಆಕೆಗೆ ಆರ್ಥಿಕ ಸಮಸ್ಯೆ ಇರುವ ಕಾರಣ ಅವನ ಚೆಲ್ಲಾಟವನ್ನು ಸಹಿಸಿಕೊಂಡಳು. ಮುಂದೆ ಇದನ್ನೇ ದಾರಿಯಾಗಿಸಿಕೊಂಡ ಆಕೆ ಪಿಂಚಣಿ ಹಣ ಹೊಂದಿರುವ ವಯಸ್ಸಾದ ವ್ಯಕ್ತಿಯ ಜೊತೆ ಸಂಬಂಧವಿರಿಸಿಕೊಳ್ಳುವುದಕ್ಕೆ ಶುರುಮಾಡಿದ್ದಾಳೆ. ಅದಕ್ಕಾಗಿ ಅವಳು ಉದ್ಯಾನವನ ಮತ್ತು ವಯಸ್ಸಾದ ವ್ಯಕ್ತಿಗಳು ಸಮಯ ಕಳೆಯುವಂತಹ ಸ್ಥಳಗಳಿಗೆ ಭೇಟಿ ನೀಡಲು ಪ್ರಾರಂಭಿಸಿದಳು. ಹಾಗಾಗಿ ಇದೀಗ ಅವಳು 7 ಮಂದಿ ವಯಸ್ಸಾದ ಪುರುಷರ ಜೊತೆ ಸಂಬಂಧದಲ್ಲಿರುವ ಮೂಲಕ ಬಹುಪತಿತ್ವವನ್ನು ಅನುಸರಿಸುತ್ತಿದ್ದಾಳೆ.

ಇದನ್ನೂ ಓದಿ: Viral Video: ಬಕ್ರೀದ್ ಬಲಿ ಕೊಡುವ ಮೇಕೆಯ ಮೈಮೇಲೆ ʼರಾಮʼ ನಾಮ; ಹಿಂದೂಗಳನ್ನು ಕೆಣಕಿದ ವ್ಯಕ್ತಿ ಅರೆಸ್ಟ್

ಅಲ್ಲದೇ ಆಕೆಯ ಪ್ರಕಾರ ವಯಸ್ಸಾದ ವ್ಯಕ್ತಿಗಳ ಬಳಿ ಏನನ್ನೂ ಕೇಳಬೇಕಾಗಿಲ್ಲ, ಎಲ್ಲವನ್ನೂ ಅವರೇ ನೀಡುತ್ತಾರೆ. ಏಕೆಂದರೆ ಅವರ ವಯಸ್ಸಿನವರಿಗೆ ತನ್ನಂತಹ ಹುಡುಗಿಯು ಸಿಗುವುದಿಲ್ಲ. ಹಾಗಾಗಿ ತಾನು ಪಿಂಚಣಿ ಹೊಂದಿರುವ ಅಂತಹ ವ್ಯಕ್ತಿಯನ್ನು ಹುಡುಕಿದೆ. ಯಾಕೆಂದರೆ ಅವರು ತನ್ನನ್ನು ಸುಖವಾಗಿ ನೋಡಿಕೊಳ್ಳುತ್ತಾರೆ. ಅಂದ ಹಾಗೇ ಈಕೆಯ ಗೆಳೆಯರು ಕಾರ್ಲೋಸ್, ಸೈಮನ್, ಜೀಸಸ್, ಪಾಬ್ಲೋ, ಮ್ಯಾನುಯೆಲ್ ಹಾಗೂ ಇಬ್ಬರ ಹೆಸರನ್ನು ಬಹಿರಂಗಪಡಿಸಿಲ್ಲ. ಇವರೆಲ್ಲರೂ ಸಹ ಪಿಂಚಣಿದಾರರಾಗಿದ್ದು, ಒಬ್ಬರನೊಬ್ಬರು ಚೆನ್ನಾಗಿ ಅರಿತುಕೊಂಡಿದ್ದಾರಂತೆ. ಹಾಗೇ ಅವರು ಆಕೆಗೆ ಅಡುಗೆ ಮಾಡಲು, ಬಟ್ಟೆ ಒಗೆಯಲು, ಮನೆ ಶುಚಿ ಮಾಡುವಂತಹ ಕೆಲಸಗಳಲ್ಲಿ ಸಹಾಯ ಮಾಡುತ್ತಾರಂತೆ.

Exit mobile version