ವಿಜಯವಾಡ: ಪ್ರೀತಿ ಎಂದರೆ ಒಂದು ಮಾಯೆ ಎಂತ ಹೇಳಬಹುದು. ಯಾಕೆಂದರೆ ಪ್ರೀತಿಯಲ್ಲಿ ಬಿದ್ದ ಜನರು ಏನು ಬೇಕಾದರೂ ಮಾಡುತ್ತಾರೆ. ಆ ಬಗ್ಗೆ ಅವರಲ್ಲಿ ಭಯ ಇರುವುದಿಲ್ಲ. ಅದರಲ್ಲೂ ಯುವಕರು ಹೆಚ್ಚು ಇದರ ಪ್ರಭಾವಕ್ಕೆ ಒಳಗಾಗುವುದನ್ನು ನಾವು ಕೇಳಿರುತ್ತೇವೆ. ಅಂತಹದೊಂದು ಘಟನೆ ಇದೀಗ ಆಂಧ್ರಪ್ರದೇಶದ ವಿಜಯವಾಡದ ಬೃಂದಾವನ ಕಾಲೋನಿ ಬಳಿ ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಹುಡುಗಿಗಾಗಿ ಆಕೆಯ ತಂದೆಯನ್ನೇ ಆಕೆಯ ಕಣ್ಣಮುಂದೆಯೇ ಬರ್ಬರವಾಗಿ ಕೊಂದಿದ್ದು, ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದೆ. ಇದನ್ನು ಜನರು ಬೆಚ್ಚಿಬಿದ್ದಿದ್ದಾರೆ.
ಆರೋಪಿ ಶಿವ ಮಣಿಕಂಠ (26 ವರ್ಷ) ಈತ ಖಾಸಗಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಹಾಗೇ ಕೊಲೆಯಾದ ವ್ಯಕ್ತಿ ಕಿರಾಣಿ ಅಂಗಡಿ ಮಾಲೀಕ ಕೆ.ರಾಮಚಂದ್ರ ಪ್ರಸಾದ್ (56) ಎಂಬುದಾಗಿ ತಿಳಿದುಬಂದಿದೆ. ಹುಡುಗಿ ಇಂಜಿನಿಯರಿಂಗ್ ಓದುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಈಕೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಆರೋಪಿಯನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದ ಹುಡುಗಿ ತಂದೆ ಇವರ ಪ್ರೀತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತು ಆರೋಪಿಯ ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ.
ಇದರಿಂದ ಆರೋಪಿಯ ಮನೆಯಲ್ಲಿ ಗಲಾಟೆ ಶುರುವಾಗಿದೆ. ಇದರಿಂದ ಕೋಪಗೊಂಡ ಆರೋಪಿ ಜೂನ್ 27ರ ರಾತ್ರಿ ಮಗಳು ಹಾಗೂ ತಂದೆ ಸ್ಕೂಟರ್‌ನಲ್ಲಿ ಬರುವ ವೇಳೆ ದಾರಿ ಮಧ್ಯ ತಡೆದು ಹುಡುಗಿಯ ಮುಂದೆಯೇ ಆಕೆಯ ತಂದೆಯ ಕುತ್ತಿಗೆ ಮತ್ತು ಮುಖಕ್ಕೆ ಚಾಕುವಿನಿಂದ ಆರು ಬಾರಿ ಇರಿದು ಪರಾರಿಯಾಗಿದ್ದಾನೆ. ಹುಡುಗಿ ಈ ದೃಶ್ಯ ಕಂಡು ಕಿರುಚಿದಾಗ ಸ್ಥಳೀಯರು ಬಂದು ಪ್ರಸಾದ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಸಾದ್ ಸಾವನಪ್ಪಿದ್ದಾರೆ.
దారుణం.. ప్రేమకు అంగీకరించలేదని రోడ్డుపైనే వ్యాపారిని నరికి చంపిన యువకుడు.
— Telugu Scribe (@TeluguScribe) June 28, 2024
విజయవాడ – బృందావన్ కాలనీలో యువకుడు ఓ వ్యాపారి కుమార్తెను ప్రేమించాడు.. ఇది తెలుసుకున్న వ్యాపారి తన కూతురును ప్రేమించొద్దని మందలించడంతో.. యువకుడు, వ్యాపారిని కూతురు ముందే హత్య చేశాడు. pic.twitter.com/eMcnO7PUeI
ಇದನ್ನೂ ಓದಿ: ಮನೆಯ ಹೊರಗೆ ತಾಯಿಯ ಜೊತೆ ಆಡುತ್ತಿದ್ದ ಮಗುವಿನ ಮೇಲೆ ಕಾರು ಹತ್ತಿಸಿದ ಚಾಲಕ!
ಈ ಬಗ್ಗೆ ಕೃಷ್ಣಲಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹಾಗೂ ಆರೋಪಿಯನ್ನು ಬಂಧಿಸಿದ ಪೊಲೀಸರು ಆತ ಕೊಲೆಗೆ ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ವಿಡಿಯೊದಲ್ಲಿ ಆರೋಪಿ ಪ್ರಸಾದ್ ಅವರಿಗೆ ಚಾಕುವಿನಿಂದ ಇರಿಯುತ್ತಿದ್ದು, ಹುಡುಗಿ ಕಿರುಚಾಡುತ್ತಿರುವ ದೃಶ್ಯ ಕಂಡುಬಂದಿದೆ. ನಂತರ ಅಲ್ಲಿಗೆ ಸ್ಥಳೀಯರು ಬಂದು ಸುತ್ತುವರಿದಿದ್ದಾರೆ. ಈ ವಿಡಿಯೊಗೆ ಸಾಕಷ್ಟು ವೀವ್ಸ್ ಬಂದಿದ್ದು, ಜನರು ಇದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.