ಮಕ್ಕಳ ಭವಿಷ್ಯದ ಬಗೆಗಿನ ಕಾಳಜಿ ಪೋಷಕರಿಗೆ ಇರುತ್ತದೆ. ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳನ್ನು ದಂಡಿಸುವ , ಶಿಕ್ಷಿಸುವ ಹಕ್ಕು ಇರುತ್ತದೆ. ಅಂದಮಾತ್ರಕ್ಕೆ ಪೋಷಕರು ಮಕ್ಕಳನ್ನು ತಮಗೆ ಮನಬಂದಂತೆ ಶಿಕ್ಷಿಸುವ ಹಾಗೇ ಇಲ್ಲ. ಅವರು ಮಕ್ಕಳನ್ನು ದಂಡಿಸುವ ರೀತಿ ಎಲ್ಲೆ ಮೀರಬಾರದು. ಇಲ್ಲವಾದರೆ ಇದರಿಂದ ಮುಂದೆ ದೊಡ್ಡ ಸಮಸ್ಯೆ ಉದ್ಭವಿಸಬಹುದು. ಇದಕ್ಕೆ ಉದಾಹರಣೆ ಎಂಬಂತೆ ಇದೀಗ ತಂದೆ- ಮಗನಿಗೆ ಸಂಬಂಧಪಟ್ಟ ವಿಡಿಯೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದೆ.
ಹುಡುಗನೊಬ್ಬ ಕ್ಲೀನ್ ಶೇವ್ ಮಾಡಿಕೊಂಡು ತನ್ನ ತಂದೆಗೆ ತೋರಿಸಿ ಅವರ ಮೆಚ್ಚುಗೆ ಗಳಿಸಬೇಕು ಎಂದು ಹೋಗಿ ಕಪಾಳಮೋಕ್ಷಕ್ಕೆ ಒಳಗಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದೆ.
ವಿಡಿಯೊದಲ್ಲಿ ಹುಡುಗ ಕ್ಲೀನ್ ಶೇವ್ ಮಾಡಿ ಕ್ಯಾಮರಾಕ್ಕೆ ಮುಖ ಮಾಡಿ ನಿಂತಿದ್ದಾಗ ತಂದೆ ‘’ಏನಾಗುತ್ತಿದೆ’’ ಎಂದು ಕೇಳುತ್ತಾ ಆತನ ಹಿಂದೆ ಬಂದಿದ್ದಾರೆ. ಆಗ ಆತ ತನ್ನ ತಂದೆಗೆ ತನ್ನ ಹೊಸ ಲುಕ್ ಅನ್ನು ತೋರಿಸಿ ಅವರಿಗೆ ಆಶ್ವರ್ಯವನ್ನುಂಟುಮಾಡಬೇಕು ಎಂಬ ಉತ್ಸಾಹದಿಂದ ಹಿಂದೆ ತಿರುಗಿದ್ದಾನೆ. ಆದರೆ ಮಗ ಕ್ಲೀವ್ ಶೇವ್ ಮಾಡಿದ್ದಕ್ಕೆ ಕೋಪಗೊಂಡ ತಂದೆ ಆತನ ಕೆನ್ನೆಗೆ ಬಾರಿಸಿದ್ದಾರೆ. ನಂತರ ಒಂದು ಸೆಕೆಂಡುಗಳ ಕಾಲ ಅವನನ್ನು ದಿಟ್ಟಿಸಿ ನೋಡುತ್ತಾ ಅವನ ಕುತ್ತಿಗೆ ಹಿಡಿದು ‘’ನಾನು ಹೇಳುವುದನ್ನು ನೀನು ಎಂದಿಗೂ ಕೇಳುವುದಿಲ್ಲ” ಎಂದು ಬೈಯುತ್ತಾ ಮತ್ತೊಮ್ಮೆ ಕೆನ್ನೆಗೆ ಬಾರಿಸಿದ್ದಾರೆ.
Kalesh b/w a Son and Father over Son tried to Surprise him with his Clean Shave
— Ghar Ke Kalesh (@gharkekalesh) June 18, 2024
pic.twitter.com/E1GQeEaV5x
ಈ ವಿಡಿಯೊ ಘರ್ ಕೆ ಕಾಲೆಶ್ ಎಂಬ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಲ್ಲಿ ಪೋಸ್ಟ್ ಆಗಿದ್ದು, ತಕ್ಷಣವೇ ವೈರಲ್ ಆಗಿದೆ. ಈ ಪೋಸ್ಟ್ ಗೆ 3 ಮಿಲಿಯನ್ ವೀವ್ಸ್ ಬಂದಿದ್ದು, ಮಗನ ಮೇಲೆ ತಂದೆ ಕೈ ಮಾಡಿದ್ದಕ್ಕೆ ಹಲವರು ಟೀಕೆ ಮಾಡಿದ್ದಾರೆ. ಇದು ವಿವಾದವನ್ನು ಹುಟ್ಟುಹಾಕಿದೆ ಎನ್ನಲಾಗಿದೆ.
ಅನೇಕರು ಈ ವಿಡಿಯೊ ನೋಡಿ ‘ಇದು ಕೆಟ್ಟ ನಡತೆಯ ಪೋಷಕರಿಗೆ ಪರಿಪೂರ್ಣ ಉದಾಹರಣೆಯಾಗಿದೆ’ ಎಂದು ಬರೆದಿದ್ದಾರೆ. ಇನ್ನೂ ಕೆಲವರು ‘ತನ್ನ ಗಡ್ಡ ಮೀಸೆ ಮಾತ್ರ ಬೋಳಿಸಿದ್ದಕ್ಕೆ ತಂದೆ ತಮ್ಮ ಮಗನಿಗೆ ಹೊಡೆಯುವುದು ಇದು ಮಿತಿ ಮೀರಿದ ವರ್ತನೆಯಾಯಿತು’ ಎಂದು ಕಿಡಿಕಾರಿದ್ದಾರೆ. ‘ಜಗತ್ತಿನಲ್ಲಿ ಲೈಂಗಿಕ ಶಿಕ್ಷಣಕ್ಕಿಂತ ಪೋಷಕರಿಗೆ ಶಿಕ್ಷಣ ನೀಡುವ ಅಗತ್ಯವಿದೆ’ ಎಂದು ಒಬ್ಬ ಬಳಕೆದಾರರು ತಿಳಿಸಿದ್ದಾರೆ. ‘ಹೆಚ್ಚಿನ ಭಾರತೀಯ ಪೋಷಕರು ತಮ್ಮ ಹತಾಶೆ ಮತ್ತು ವೈಫಲ್ಯವನ್ನು ತಮ್ಮ ಸ್ವಂತ ಮಕ್ಕಳ ಮೂಲಕ ಹೊರಹಾಕುತ್ತಾರೆ’ ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!
ಈ ವಿಡಿಯೊದಲ್ಲಿ ಆ ತಂದೆ ಮಗ ಮೀಸೆ , ಗಡ್ಡ ಬೋಳಿಸಿದ್ದಕ್ಕೆ ಯಾಕೆ ಕೋಪಗೊಂಡು, ಹೊಡೆದರು ಎಂಬುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಭಾರತೀಯ ಸಂಪ್ರದಾಯದ ಪ್ರಕಾರ ಗಂಡು ಮಕ್ಕಳು ತನ್ನ ತಂದೆ ಅಥವಾ ತಾಯಿ ತೀರಿಕೊಂಡಾಗ ಮಾತ್ರ ಗಡ್ಡ, ಮೀಸೆ, ತಲೆ ಬೋಳಿಸುತ್ತಾರೆ. ಹಾಗಾಗಿ ತಮ್ಮ ಸಂಪ್ರದಾಯದ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ತಂದೆ ಮಗನಿಗೆ ಹೊಡೆದಿರಬಹುದು ಎನ್ನಲಾಗಿದೆ.