Site icon Vistara News

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Viral Video


ಜಾರ್ಖಂಡ್ : ಕೆಲವರು ದೇವರು ಮೈಮೇಲೆ ಬಂದಂತೆ ವರ್ತಿಸುವುದನ್ನು ನಾವು ಹಲವು ಬಾರಿ ನೋಡಿರುತ್ತೇವೆ. ಅಂತವರಿಗೆ ದೇವರ ಅನುಗ್ರಹವಿದೆ. ಹಾಗಾಗಿ ದೇವರು ಅವರ ಮೇಲೆ ಆಹ್ವಾನವಾಗಿ ನಂಬಿದ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾನೆ ಎಂಬ ನಂಬಿಕೆ ಬಹಳ ಹಿಂದಿನ ಕಾಲದಿಂದಲೂ ಇದೆ. ಇದನ್ನು ನಾವು ಇಂದಿನ ಕಾಲದಲ್ಲಿಯೂ ಕೆಲವು ಕಡೆ ನೋಡಬಹುದು. ಹೆಚ್ಚಾಗಿ ದೇವಸ್ಥಾನದ ಜಾತ್ರೆಯ ಸಮಯದಲ್ಲಿ ಕೆಲವರು ದೇವರು ಮೈಮೇಲೆ ಬರುವಂತೆ ವರ್ತಿಸುವ ದೃಶ್ಯವನ್ನು ನೊಡಬಹುದು. ಅದೇರೀತಿ ಜಾರ್ಖಂಡ್‍ನಲ್ಲಿ ಕೂಡ ಇಂತಹದೊಂದು ಘಟನೆ ನಡೆದಿದೆ. ಕಾಣೆಯಾದ ಬಾಲಕಿಯೊಬ್ಬಳು ಗುಹೆಯೊಂದರಲ್ಲಿ ಪತ್ತೆಯಾಗಿದ್ದು, ಆದರೆ ಅವಳು ಹಾವಿನಂತೆ ವರ್ತಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ವಿಡಿಯೊದಲ್ಲಿರುವ ಹುಡುಗಿ ಗುಹೆಯ ನೆಲದ ಮೇಲೆ ಹಾವಿನಂತೆ ತೆವಳುತ್ತಾ ತನ್ನ ನಾಲಿಗೆಯನ್ನು ಹಾವಿನಂತೆ ಹೊರಗೆ ಚಾಚುತ್ತಿದ್ದಾಳೆ. ಗುಹೆಯಲ್ಲಿ ಕಂಡುಬರುವ ಈ ಹುಡುಗಿಯ ಈ ರೂಪವನ್ನು ನೋಡಲು ಗ್ರಾಮಸ್ಥರ ಗುಂಪು ಅಲ್ಲಿ ನೆರೆದಿದ್ದು, ಮನೆಯವರು ಆಕೆಗೆ ಪೂಜೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಬಾಲಕಿ ಕಾಣೆಯಾಗಿದ್ದಳು. ಆದರೆ ಇತ್ತೀಚೆಗೆ ಆಕೆ ರಾಣಿದಿಹ್ ಗುಪ್ತಾ ಧಾಮ್ ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದರೆ ಅವಳು ಹಾವಿನಂತೆ ವರ್ತಿಸುತ್ತಿದ್ದಾಳೆ ಎನ್ನಲಾಗಿದೆ. ಆಕೆ ಹಾವಿನಂತೆ ವರ್ತಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇದನ್ನು ಕಂಡು ಜನರು ಆಶ್ಚರ್ಯ ಚಕಿತರಾಗಿದ್ದಾರೆ. ಈ ಘಟನೆ ದೊಡ್ಡ ಜನಸಮೂಹವನ್ನು ಸೆಳೆದಿದ್ದು, ಆಕೆಯ ಅಸಾಮಾನ್ಯ ನಡವಳಿಕೆಯನ್ನು ನೋಡಲು ಅನೇಕ ಜನರು ಆ ಗುಹೆಯ ಬಳಿ ಜಮಾಯಿಸಿದ್ದಾರೆ. ಅವಳನ್ನು ಹುಡುಕುತ್ತಿದ್ದ ಆಕೆಯ ಕುಟುಂಬ ಸದಸ್ಯರು ಪೂಜೆ ಮಾಡಿ ಅಂತಿಮವಾಗಿ ಅವಳನ್ನು ಮನೆಗೆ ಕರೆತಂದರು ಎನ್ನಲಾಗಿದೆ.

ರಾಣಿದಿಹ್ ಗುಪ್ತ ಧಾಮ್ ಗುಹೆಯಲ್ಲಿ ಬಹಳ ಹಿಂದಿನ ಕಾಲದಲ್ಲಿ ಭಗವಾನ್ ಶಿವನನ್ನು ಸ್ಥಾಪನೆ ಮಾಡಲಾಗಿತ್ತು. ಶಿವನ ಪೂಜೆ ಮಾಡಲು ದೂರದ ಸ್ಥಳಗಳಿಂದ ಭಕ್ತರ ಗುಂಪು ಇಲ್ಲಿಗೆ ಬಂದು ಸೇರುತ್ತಿದ್ದರು. ಪ್ರತಿ ವರ್ಷದಂತೆ, ಈ ಬಾರಿಯೂ ಜನರು ಇಲ್ಲಿಗೆ ಭೇಟಿ ನೀಡಲು ಬಂದಿದ್ದರು, ನಂತರ ಸೋಮವಾರ, ಈ ಹುಡುಗಿಯನ್ನು ಗುಹೆಯ ಮುಖ್ಯ ದ್ವಾರದಲ್ಲಿ ಸರ್ಪದ ರೂಪದಲ್ಲಿ ನೋಡಿದ ಕೂಡಲೇ ಇದು ಗ್ರಾಮದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಬಾಲಕಿಯ ಕುಟುಂಬದ ಪ್ರಕಾರ, ಕಳೆದ ಮೂರು ತಿಂಗಳಿನಿಂದ ಅವಳು ಮನೆಯಿಂದ ಕಾಣೆಯಾಗಿದ್ದಳು.

ಇದನ್ನೂ ಓದಿ: ಮಲಗಿದ್ದ ಮಹಿಳೆಯ ತಲೆಕೂದಲಿನಲ್ಲಿ ಹರಿದಾಡಿದ ಹಾವು!

ಕುಟುಂಬವು ಅವಳನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿತು. ಆದರೆ ಅವಳು ಸಿಗಲಿಲ್ಲ. ಅಲ್ಲಿಯ ತನಕ ಆಕೆ ಎಲ್ಲಿದ್ದಳು, ಏನು ಮಾಡುತ್ತಿದ್ದಳು ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಕುಟುಂಬವು ಹುಡುಗಿಯನ್ನು ಈ ರೂಪದಲ್ಲಿ ಕಂಡುಕೊಂಡಾಗ, ಅವರು ಮೊದಲು ಅವಳನ್ನು ಪೂಜಿಸಿದರು ಮತ್ತು ಹಾಡುಗಳೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದಾರೆ.

Exit mobile version