ಸಮಾಜದಲ್ಲಿ ಮಹಿಳೆಯರು ವಿವಿಧ ರೀತಿಯ ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ. ಆದರೆ ಕೆಲವರು ಕಂಡೂ ಕಾಣದಂತೆ ಸುಮ್ಮನಿದ್ದರೆ ಇನ್ನೂ ಕೆಲವರು ಮಹಿಳೆಯರ ಸಹಾಯಕ್ಕೆ ಬಂದು ಅವರನ್ನು ರಕ್ಷಿಸುವ ಮನೋಭಾವವುಳ್ಳವರಾಗಿರುತ್ತಾರೆ. ಅಂತಹದೊಂದು ಘಟನೆ ಇದೀಗ ನಡೆದಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಇತ್ತೀಚೆಗೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಯುವತಿಯೊಬ್ಬಳಿಗೆ ಯುವಕನೊಬ್ಬ ಕಿರುಕುಳ ನೀಡುತ್ತಿದ್ದು, ಇದನ್ನು ಕಂಡು ಬಸ್‌ನ ಪ್ರಯಾಣಿಕರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
For harrassing a girl on road pic.twitter.com/TBJmwRVHAc
— CCTV IDIOTS (@cctvidiots) April 9, 2023
ರಸ್ತೆಯಲ್ಲಿ ಯುವತಿಯೊಬ್ಬಳು ನಡೆದುಕೊಂಡು ಬರುತ್ತಿದ್ದಳು. ಆ ವೇಳೆ ಆಕೆಯ ಹಿಂದಿನಿಂದ ಬಂದ ಯುವಕನೊಬ್ಬ ಆಕೆಯನ್ನು ರಸ್ತೆಯ ಮೇಲೆ ಹಿಡಿದು ಎಳೆದಾಡಿದ. ಇದರಿಂದ ಹೆದರಿದ ಆಕೆ ಓಡಲು ಪ್ರಯತ್ನಿಸಿದರೂ ಆತ ಬಿಡಲಿಲ್ಲ. ಆ ವೇಳೆ ಒಬ್ಬ ದಾರಿಹೋಕ ಇದನ್ನು ಕಂಡೂ ಕಾಣದಂತೆ ಸುಮ್ಮನೆ ನಡೆದುಕೊಂಡು ಮುಂದೆ ಹೋದ. ಆದರೆ ರಸ್ತೆಯಲ್ಲಿ ಬರುತ್ತಿದ್ದ ಬಸ್‌ನ ಪ್ರಯಾಣಿಕರು ಈ ದೃಶ್ಯವನ್ನು ಕಂಡು ಬಸ್ ನಿಲ್ಲಿಸಿ ಅದರಲ್ಲಿದ್ದ ಪುರುಷರು ಒಟ್ಟಾಗಿ ಯುವತಿಯ ಸಹಾಯಕ್ಕೆ ಬಂದಿದ್ದಾರೆ. ಆ ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಬಾರಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!
ಹಾಗಾಗಿ ಸಮಾಜದಲ್ಲಿ ಯಾವುದೇ ರೀತಿಯ ದುರ್ವತನೆಗಳನ್ನು ಕಂಡಾಗ ಅದನ್ನು ಎದುರಿಸಲು ಮುಂದಾಗಬೇಕು. ಕಿರುಕುಳದ ವಿರುದ್ಧ ಧ್ವನಿ ಎತ್ತಿ ನಿಲ್ಲುವುದು ಕೇವಲ ನಮ್ಮ ಜವಾಬ್ದಾರಿ ಮಾತ್ರವಲ್ಲ ಅದು ಸಾಮಾಜಿಕ ಕರ್ತವ್ಯ ಎಂಬುದನ್ನು ತಿಳಿಯಿರಿ. ಇದರಿಂದ ಸಮಾಜದಲ್ಲಾಗುವ ದೌರ್ಜನ್ಯಗಳ ವಿರುದ್ಧ ಹೋರಾಡಬಹುದು. ಹಾಗೂ ಅವುಗಳನ್ನು ನಿರ್ಮೂಲನೆ ಮಾಡಬಹುದು ಎಂಬ ಸಂದೇಶವನ್ನು ಈ ಘಟನೆ ಮತ್ತು ವಿಡಿಯೊ ಸಾರಿದೆ.