ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೊಗಳನ್ನು ಪೋಸ್ಟ್ ಮಾಡಲಾಗುತ್ತದೆ. ಅದರಲ್ಲಿ ಕೆಲವೊಂದು ನಮಗೆ ಬೇಸರವನ್ನುಂಟು ಮಾಡಿದರೆ, ಕೆಲವೊಂದು ವಿಡಿಯೊಗಳನ್ನು ನೋಡಿದರೆ ನಾವು ಬಿದ್ದು ಬಿದ್ದು ನಗುತ್ತೇವೆ. ಅದರಲ್ಲೂ ಮಕ್ಕಳು ಮಾತನಾಡುವ ವಿಡಿಯೊ, ಪ್ರಶ್ನೆಗಳಿಗೆ ಅವರು ಉತ್ತರಿಸುವ ರೀತಿ ತುಂಬಾ ತಮಾಷೆಯಾಗಿರುತ್ತದೆ. ಅದನ್ನು ಕೇಳಿದವರ ಮುಖದಲ್ಲಿ ನಗುವು ಮೂಡುವುದು ಖಂಡಿತ. ಇದೀಗ ಶಾಲಾ ಬಾಲಕನೊಬ್ಬನ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿ ಭಾರೀ ಸುದ್ದಿ ಮಾಡುತ್ತಿದೆ. ಮೇಷ್ಟ್ರು ಕೇಳಿದ ಪ್ರಶ್ನೆಗೆ ಆತನ ಉತ್ತರ ಕೇಳಿ ಜನರು ನಗುವಿನಲ್ಲಿ ಮುಳುಗಿದ್ದಾರೆ.
ಈ ವೈರಲ್ ವಿಡಿಯೊದಲ್ಲಿ ಶಾಲೆಯ ಮೇಷ್ಟ್ರು ಪುಟ್ಟ ಬಾಲಕನ ಬಳಿ ಮಗು ನಮಗೆ ಚಂದ್ರ ದೂರದಲ್ಲಿದಾನಾ? ಅಥವಾ ದೆಹಲಿ ದೂರದಲ್ಲಿದೆಯೇ? ಎಂದು ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಥಟ್ಟನೆ ಉತ್ತರಿಸಿದ ಬಾಲಕ ಚಂದ್ರನಿಗಿಂತ ದೆಹಲಿಯೇ ದೂರ ಎಂದು ಹೇಳುತ್ತಾನೆ. ಅದು ಹೇಗೆ ಸಾಧ್ಯ ಎಂದು ಮೇಷ್ಟ್ರು ಮರು ಪ್ರಶ್ನಿಸಿದಾಗ ಚಂದ್ರನನ್ನು ಇಲ್ಲೇ ನಿಂತು ನಾವು ನೋಡಬಹುದು ಸರ್, ಆದ್ರೆ ದೆಹಲಿಯನ್ನು ಇಲ್ಲಿಂದಲೇ ನಿಂತು ನೋಡಲು ಸಾಧ್ಯವಿಲ್ಲ ಅಲ್ವಾ ಸರ್ ಎಂದು ಉತ್ತರಿಸಿದ್ದಾನೆ. ಅವನ ಆ ಸ್ಮಾರ್ಟ್ ಉತ್ತರ ಕೇಳಿದರೆ ಎಂತವರಿಗೂ ನಗು ಬರುವುದು ಖಂಡಿತ.
क्या Logic दिया भाई ने ❤️😅 pic.twitter.com/jou8vg7u5a
— Deepak (@Putkuuu) August 14, 2024
ಈ ವಿಡಿಯೊವನ್ನು ದೀಪಕ್ (Putkuuu) ಎಂಬವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್‌ನಲ್ಲಿ ಆಗಸ್ಟ್ 14ರಂದು ಹಂಚಿಕೊಂಡಿದ್ದಾರೆ ಈ ಪೋಸ್ಟ್ 18 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಏನ್ ಲಾಜಿಕ್ ಗುರು ನಿಂದೂ’ ಎಂದು ಆಶ್ಚರ್ಯದಿಂದ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ತುಂಬಾ ಬುದ್ದಿವಂತ, ಸರಿಯಾದ ಉತ್ತರವನ್ನೇ ನೀಡಿದ್ದಾನೆ’ ಎಂದು ಹೊಗಳಿದ್ದಾರೆ.
ಇದೇ ರೀತಿಯಲ್ಲಿ ಪುಟ್ಟ ಬಾಲಕರ ಬಳಿ ಪ್ರಶ್ನೆ ಕೇಳಿದಾಗ ಅದಕ್ಕೆ ಅವರು ತಮಾಷೆ ಉತ್ತರ ನೀಡುವಂತಹ ವಿಡಿಯೊಗಳು ಈ ಹಿಂದೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಅದರಲ್ಲಿ ಹೆಚ್ಚು ಗಮನ ಸೆಳೆದ ವಿಡಿಯೊ ಅಂದರೆ ತೊದಲು ಮಾತನಾಡುವ ಪುಟ್ಟ ಮಗುವಿನ ಬಳಿ ಸಿಎಂ ಅಂದ್ರೆ ಯಾರು? ಎಂದು ಪ್ರಶ್ನೆ ಕೇಳಿದ ವಿಡಿಯೊ ತುಣುಕು. ಕನ್ನಡ ಮೀಮ್ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಮಹಿಳೆ ಪುಟ್ಟ ಬಾಲಕನ ಬಳಿ ಸಿಎಂ ಅಂದ್ರೆ ಯಾರು ಎಂದು ಪ್ರಶ್ನೆ ಕೇಳುತ್ತಾರೆ.
ಇದನ್ನೂ ಓದಿ:ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ
ಆ ಹುಡುಗ ತಕ್ಷಣ ಸಿಎಂ ನನ್ನ ಅಮ್ಮ ಅಂತ ತೊದಲು ನುಡಿಯುತ್ತಾ ಹೇಳುತ್ತಾನೆ. ಈ ಮಗುವಿನ ಉತ್ತರ ಕೇಳಿ ಅಲ್ಲಿದ್ದವರೆಲ್ಲ ಜೋರಾಗಿ ನಗುವುದನ್ನು ತೋರಿಸುತ್ತದೆ. ಆ ಪುಟ್ಟ ಹುಡುಗನ ತಮಾಷೆಯ ಉತ್ತರದ ವಿಡಿಯೊ ಅಂದು ವೈರಲ್ ಆಗಿತ್ತು. ನೆಟ್ಟಿಗರ ಮನಗೆದ್ದ ಈ ವೈರಲ್ ವಿಡಿಯೊ 374 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಹಾಗೂ ಹೆಚ್ಚಿನ ಸಂಖ್ಯೆಯ ಲೈಕ್ಸ್ ಮತ್ತು ಕಾಮೆಂಟ್ಸ್ ಕೂಡಾ ಪಡೆದುಕೊಂಡಿತ್ತು.