ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಚೋಪ್ರಾದಲ್ಲಿ ಪುರುಷ ಮತ್ತು ಮಹಿಳೆಗೆ ಸಾರ್ವಜನಿಕವಾಗಿ ಥಳಿಸಿದ್ದು ಭಾರಿ ಸುದ್ದಿಯಾಗಿತ್ತು. ಈ ಘಟನೆಗೆ ಸಂಬಂಧಪಟ್ಟ ದೃಶ್ಯ ವೈರಲ್ (Viral Video) ಆಗಿತ್ತು. ಹಾಗಾಗಿ ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿತ್ತು. ದುಷ್ಕರ್ಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿತ್ತು. ಆದರೆ ಈಗ, ಭೀಕರವಾಗಿ ಹಲ್ಲೆಗೊಳಗಾದ ವ್ಯಕ್ತಿ ಮಾತ್ರ ʼಆಗಿದ್ದೆಲ್ಲಾ ಒಳ್ಳೆಯದಕ್ಕೆʼ ಎಂದು ಹೇಳುವ ಮೂಲಕ ಆಶ್ಚರ್ಯನ್ನುಂಟುಮಾಡಿದ್ದಾನೆ!
ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ದಂಪತಿಯನ್ನು ಬಿದಿರಿನ ಕೋಲಿನಿಂದ ಪದೇಪದೇ ಹೊಡೆಯುವುದನ್ನು ತೋರಿಸುತ್ತದೆ. ಸುತ್ತಲೂ ಜನರು ನಿಂತಿರುವುದು ಕಾಣಿಸುತ್ತದೆ. ಆದರೆ ಯಾರು ಈ ದಂಪತಿಯ ಸಹಾಯಕ್ಕೆ ಬರುತ್ತಿಲ್ಲ. ಸ್ಥಳೀಯ ಟಿಎಂಸಿ ನಾಯಕ ತಜ್ಜಿಮುಲ್ ಹಕ್ ಅವರ ನಿರ್ದೇಶನದಲ್ಲಿ ಈ ದಾಳಿ ನಡೆದಿದೆ ಎಂದು ಆರೋಪಿಸಲಾಗಿತ್ತು.
ಈ ವಿಡಿಯೊ ವೈರಲ್ ಆದ ಕೆಲವು ದಿನಗಳ ನಂತರ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಸಂತ್ರಸ್ತ ವ್ಯಕ್ತಿ, ಈ ಘಟನೆಗೆ ಕಾರಣವೇನು ಎಂಬುದರ ಬಗ್ಗೆ ವಿವರಣೆ ನೀಡಿರುವುದ ಜೊತೆಗೆ ಈ ಘಟನೆ ಆಗಿದ್ದು ಒಳ್ಳೆಯದೇ ಆಯಿತು ಎಂದು ಹೇಳುವ ಮೂಲಕ ಅಚ್ಚರಿ ಉಂಟು ಮಾಡಿದ್ದಾನೆ. ನಾನೊಬ್ಬ ವಿವಾಹಿತ. ಆದರೆ ನಾನು ಹೆಂಡತಿಗೆ ಮೋಸ ಮಾಡಿ ಮತ್ತೊಬ್ಬ ವಿವಾಹಿತ ಮಹಿಳೆಯನ್ನು ಮನೆಗೆ ಕರೆತಂದು ಮೋಜು ಮಾಡುತ್ತಿದ್ದೆ. ಬಳಿಕ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದೆ. ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ನಮಗಿಬ್ಬರಿಗೆ ನಡು ರಸ್ತೆಯಲ್ಲಿ ಬೆತ್ತದಿಂದ ಬಾರಿಸಲಾಯಿತು. ನನ್ನದೇ ತಪ್ಪಾಗಿರುವುದರಿಂದ ಈ ಬಗ್ಗೆ ಯಾರ ವಿರುದ್ಧವೂ ದೂರು ನೀಡುವುದಿಲ್ಲ ಎಂಬುದಾಗಿ ಆತ ತಿಳಿಸಿದ್ದಾನೆ. ಈಗ ಏನು ನಡೆಯಿತೋ ಅದು ಒಳ್ಳೆಯದೆ ಆಗಿದೆ. ಇದರಿಂದ ಈಗ ನನ್ನ ಪತ್ನಿಯ ಜೊತೆಗೆ ಶಾಂತಿಯಿಂದ ಬದುಕಬಹುದು ಎಂದಾತ ಖುಷಿ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: ಭೋಲೆ ಬಾಬಾ ಇರುತ್ತಿದ್ದುದು ಫೈವ್ ಸ್ಟಾರ್ ಆಶ್ರಮದಲ್ಲಿ! ಅವರಿಗಿದೆ ಅಪಾರ ಆಸ್ತಿ!