ವಿಮಾನ ನಿಲ್ದಾಣಗಳಲ್ಲಿ ಕಳ್ಳಸಾಗಾಣಿಕೆ ವ್ಯವಹಾರಗಳು ಹೆಚ್ಚು ನಡೆಯುತ್ತಿರುತ್ತದೆ. ವಿಮಾನ ನಿಲ್ದಾಣದಲ್ಲಿ ಭದ್ರತೆಯ ವ್ಯವಸ್ಥೆಯ ಇದ್ದರೂ ಕೂಡ ಕೆಲವರು ಅವರ ಕಣ್ಣು ತಪ್ಪಿಸಿ ಕಳ್ಳಸಾಗಾಣಿಕೆಯಲ್ಲಿ ತೊಡಗುತ್ತಾರೆ. ಹೆಚ್ಚಾಗಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಳ್ಳಸಾಗಾಣಿಕೆಯಲ್ಲಿ ತೊಡಗಿರುವ ವಿಚಾರ ಕೇಳಿಬರುತ್ತಿತ್ತು. ಆದರೆ ಇತ್ತೀಚಿಗೆ ವಿಮಾನದಲ್ಲಿ ಕೆಲಸ ಮಾಡುವ ಗಗನಸಖಿಯರು ಕೂಡ ಇಂತಹ ನೀಚ ಕೃತ್ಯದಲ್ಲಿ ತೊಡಗುತ್ತಿವುದು ವರದಿಯಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ (Viral Video) ಆಗಿದೆ.
ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯೊಬ್ಬಳು ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾಳೆ. ಈ ಬಾರಿ ಗಗನಸಖಿ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ . ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ಇಮಿಗ್ರೇಶನ್ ಆಥೋರಿಟಿಯ ಸಹಯೋಗದೊಂದಿಗೆ ಗಗನಸಖಿಯೊಬ್ಬಳ ಕಾಲಿನಲ್ಲಿರುವ ಸಾಕ್ಸ್ ಅನ್ನು ಪರಿಶೀಲನೆ ನಡೆಸಲಾಯಿತು. ಆ ವೇಳೆ ಆಕೆಯ ಕಾಲಿನ ಸಾಕ್ಸ್ ನಲ್ಲಿ ಹಲವು ವಿದೇಶಿ ಕರೆನ್ಸಿಯನ್ನು ಪತ್ತೆಯಾಗಿದೆ. ಹಾಗಾಗಿ ಅಧಿಕಾರಿಗಳು ಆಕೆಯನ್ನು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
Air hostess caught smu-ggling of Saudi Riyals from Pakistan to Dubai 😂😂😂 pic.twitter.com/ywc3N4x0G9
— G Raja G (@GRajaG260940) July 27, 2024
ಮಾಹಿತಿ ಪ್ರಕಾರ, ಕಸ್ಟಮ್ಸ್ ಅಧಿಕಾರಿಗಳು ಗಗನಸಖಿಯ ಬ್ಯಾಗ್‍ನಲ್ಲಿ 37,318 ಡಾಲರ್ (ಸುಮಾರು 3,124,356 ಭಾರತೀಯ ರೂಪಾಯಿಗಳು) ಮತ್ತು 40,000 ಸೌದಿ ರಿಯಾಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 892,653 ಭಾರತೀಯ ರೂಪಾಯಿಗಳಾಗಿವೆ ಎನ್ನಲಾಗಿದೆ. ಗಗನಸಖಿ ಜೆಡ್ಡಾಗೆ ಹೋಗಲು ಪಿಐಎ ವಿಮಾನವನ್ನು ಹತ್ತಬೇಕಾಗಿತ್ತು. ಆಗ ಅಧಿಕಾರಿಗಳು ಆಕೆಯ ಮೇಲೆ ಅನುಮಾನಗೊಂಡು ಅವಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಆಕೆ ಈಗಾಗಲೇ ಬಚ್ಚಿಟ್ಟ ಪಾಕಿಸ್ತಾನಿ ರೂಪಾಯಿಗಳ ಹಲವಾರು ಲಕ್ಷ ರೂಪಾಯಿಗಳ ಕರೆನ್ಸಿಯನ್ನು ನಂತರ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಉಪ ಕಲೆಕ್ಟರ್ ಕಸ್ಟಮ್ಸ್ ರಾಜಾ ಬಿಲಾಲ್ ಗಗನಸಖಿಯನ್ನು ಬಂಧಿಸಿರುವುದಾಗಿ ದೃಢಪಡಿಸಿದ್ದಾರೆ ಮತ್ತು ಕರೆನ್ಸಿ ಕಳ್ಳಸಾಗಣೆಯನ್ನು ತಡೆಗಟ್ಟುವ ಬಗ್ಗೆ ಸರ್ಕಾರ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಗಗನಸಖಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕಾಗಿ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್ ಬಲೆಗೆ ಬಿದ್ದಿದ್ದು ಹೇಗೆ?
ಈ ಹಿಂದೆ ಪಾಕಿಸ್ತಾನದ ಗಗನಸಖಿಗೆ ಸಂಬಂಧಪಟ್ಟ ಇನ್ನೊಂದು ಹಗರಣ ಬೆಳಕಿಗೆ ಬಂದಿತ್ತು. ಮಾರ್ಚ್‍ನಲ್ಲಿ, ಪಿಐಎ ಗಗನಸಖಿ ಹೀನಾ ಸಾನಿ ಅವರನ್ನು ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಅನೇಕ ಪಾಸ್‍ಪೋರ್ಟ್‍ಗಳನ್ನು ಹೊಂದಿದ್ದಕ್ಕಾಗಿ ಬಂಧಿಸಲಾಗಿತ್ತು. ಇದು ಗಂಭೀರವಾದ ಅಪರಾಧವಾದ ಕಾರಣ, ಈ ಪ್ರಕರಣವು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಯೊಳಗೆ ತೊಂದರೆಯನ್ನುಂಟುಮಾಡಿತ್ತು. ಈ ಪ್ರಕರಣ ಪಿಐಎಯೊಳಗೆ ಭದ್ರತೆ ಮತ್ತು ಸಮಗ್ರತೆಯ ಕಾಳಜಿಯನ್ನು ಒತ್ತಿಹೇಳಿದೆ, ಇದರಿಂದ ವಿಮಾನಸಂಸ್ಥೆ ಆಂತರಿಕ ಸವಾಲುಗಳನ್ನು ಎದುರಿಸುವಂತಾಗಿದೆ ಮತ್ತು ಅದರ ಸಿಬ್ಬಂದಿ ತೊಡಗಿರುವ ಕಳ್ಳಸಾಗಣೆ ಮತ್ತು ಇತರ ಅಪರಾಧಗಳಿಂದ ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನಲಾಗಿದೆ.