Site icon Vistara News

Viral Video: ಮೃಗಾಲಯದಲ್ಲಿ ಮಂಗನ ಎದುರು ಯುವತಿಯ ‘ಕಪಿ ಚೇಷ್ಟೆ’! ಪರಿಣಾಮ ಏನಾಯ್ತು ನೋಡಿ!

Viral Video


ಮೆಕ್ಸಿಕೊ: ಪ್ರಾಣಿಗಳು ಬೇರೆಯವರಿಗೆ ಯಾವತ್ತು ಹಾನಿ ಮಾಡುವುದಿಲ್ಲ. ಆದರೆ ಅವುಗಳಿಗೆ ತೊಂದರೆ ಕೊಟ್ಟೆರೆ, ಚೇಷ್ಟೆ ಮಾಡಿದರೆ ಮಾತ್ರ ಅವು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಹಾಗೇ ಮೃಗಾಲಯದಲ್ಲಿ ಪ್ರಾಣಿಗಳನ್ನು ಸೆರೆಯಲ್ಲಿ ಇಟ್ಟಿರುತ್ತಾರೆ ನಿಜ. ಅಂದಮಾತ್ರಕ್ಕೆ ಅವುಗಳನ್ನು ನೋಡಲು ಬಂದವರು ಅವುಗಳಿಗೆ ಗೇಲಿ ಮಾಡಿದರೆ ಅವರಿಗೆ ತಕ್ಕ ಶಾಸ್ತಿ ಮಾಡುವುದಂತು ಖಂಡಿತ. ಇಂತಹದೊಂದು ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗುತ್ತಿದೆ.

ಮೆಕ್ಸಿಕೊದ ಮೃಗಾಲಯವೊಂದಕ್ಕೆ ಪ್ರಾಣಿಗಳನ್ನು ನೋಡಲು ಭೇಟಿ ನೀಡಿದ ಹುಡುಗಿಯೊಬ್ಬಳು ಅಲ್ಲಿ ಇದ್ದ ಸ್ಪೈಡರ್ ಮಂಗನನ್ನು ಗೇಲಿ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಂಗ ಆಕೆಯ ಕೂದಲು ಹಿಡಿದು ಎಳೆದಾಡಿದೆ. ಇದನ್ನು ಅಲ್ಲಿದ್ದ ವೀಕ್ಷಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆಕೆ ತಿಳಿದು ಮಾಡಿದ ತಪ್ಪಿನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವಿಡಿಯೊ ಸುಮಾರು 900,000 ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಮತ್ತು ಅಂದಿನಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.

ವಿಡಿಯೊದಲ್ಲಿ, ಹುಡುಗಿಯೊಬ್ಬಳ ಕೂದಲನ್ನು ಹಿಡಿದುಕೊಂಡು ಸ್ಪೈಡರ್ ಮಂಗ ಹೊಡೆಯುತ್ತಿದೆ. ಮಂಗನ ದಾಳಿಯಿಂದ ತಪ್ಪಿಸಿಕೊಳ್ಳಲು ಹುಡುಗಿ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತಾಳೆ, ಆದರೆ ಅದು ಅವಳಿಗೆ ಸಾಧ್ಯವಾಗುವುದಿಲ್ಲ. ಅಲ್ಲಿದ್ದ ಅನೇಕರು ಆಕೆಯನ್ನು ಮಂಗನಿಂದ ಕಾಪಾಡಲು ಪ್ರಯತ್ನಿಸಿದರೂ ಅವರಿಗೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಮಂಗ ಆಕೆಯನ್ನು ತನ್ನ ಹಿಡಿತದಿಂದ ಮುಕ್ತಗೊಳಿಸಿದೆ . ಆದರೆ ಅವಳು ಅಲ್ಲಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ಮಂಗಗಳು ಮತ್ತೊಮ್ಮೆ ಅವಳ ಕೂದಲನ್ನು ಹಿಡಿದು ಎಳೆದಾಡಿವೆ. ಕೊನೆಗೂ ಆಕೆ ಹೇಗೋ ತಪ್ಪಿಸಿಕೊಂಡಿದ್ದಾಳೆ. ಈ ದಾಳಿಯಲ್ಲಿ ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಈ ವಿಡಿಯೊವನ್ನು mascotasalrescate_arg ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯಿತು, ಮತ್ತು ವೀಕ್ಷಕರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ಪರಿಸ್ಥಿತಿಯನ್ನು “ತಕ್ಕ ಶಿಕ್ಷೆ” ಎಂದು ಬಣ್ಣಿಸಿದ್ದಾರೆ, ಮಂಗಗಳ ಕಡೆಯಿಂದ ಆಕ್ರಮಣಕಾರಿ ಪ್ರತಿಕ್ರಿಯೆಯು ಹುಡುಗಿಯ ಕ್ರಿಯೆಗಳಿಗೆ ತಕ್ಕ ಫಲವಾಗಿದೆ ಎಂದು ಸೂಚಿಸಿದ್ದಾರೆ. ಇತರರು ಇದು ಪ್ರಾಣಿಗಳನ್ನು ಗೌರವವನ್ನು ನೀಡಬೇಕು ಎಂಬ ಪಾಠವನ್ನು ಕಲಿಸುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಹುಡುಗಿಯ ಮೇಲೆ ಏಕಾಏಕಿ ದಾಳಿ ಮಾಡಿದ ಕೋತಿ; ವಿಡಿಯೊ ಇದೆ

ಈ ವಿಡಿಯೊ ಮಾನವ-ಪ್ರಾಣಿಗಳ ಪರಸ್ಪರ ದಾಳಿಯ ಅತ್ಯಂತ ಗಂಭೀರ ಅಂಶವನ್ನು ಎತ್ತಿ ತೋರಿಸುತ್ತದೆ, ಸಂದರ್ಶಕರು ವನ್ಯಜೀವಿಗಳಿಗೆ ಎಷ್ಟು ಕಾಳಜಿ ಮತ್ತು ಗೌರವವನ್ನು ನೀಡಬೇಕು ಎಂಬ ಪಾಠವನ್ನು ಕಲಿಸುತ್ತದೆ. ಹುಡುಗಿಯು ಮಾಡಿದ ಕೆಲಸ ಪ್ರಚೋದನಕಾರಿಯಾಗಿದ್ದರೂ, ಮೃಗಾಲಯದೊಳಗಿನ ಪ್ರಾಣಿಗಳ ಮತ್ತು ಸಂದರ್ಶಕರ ರಕ್ಷಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಅದು ಗಮನಸೆಳೆದಿದೆ.

Exit mobile version