Viral Video: ಮೃಗಾಲಯದಲ್ಲಿ ಮಂಗನ ಎದುರು ಯುವತಿಯ 'ಕಪಿ ಚೇಷ್ಟೆ'! ಪರಿಣಾಮ ಏನಾಯ್ತು ನೋಡಿ! - Vistara News

Latest

Viral Video: ಮೃಗಾಲಯದಲ್ಲಿ ಮಂಗನ ಎದುರು ಯುವತಿಯ ‘ಕಪಿ ಚೇಷ್ಟೆ’! ಪರಿಣಾಮ ಏನಾಯ್ತು ನೋಡಿ!

Viral Video: ಮೆಕ್ಸಿಕೊದ ಮೃಗಾಲಯವೊಂದಕ್ಕೆ ಪ್ರಾಣಿಗಳನ್ನು ನೋಡಲು ಭೇಟಿ ನೀಡಿದ ಹುಡುಗಿಯೊಬ್ಬಳು ಅಲ್ಲಿ ಇದ್ದ ಸ್ಪೈಡರ್ ಮಂಗನನ್ನು ಗೇಲಿ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಂಗ ಆಕೆಯ ಕೂದಲು ಹಿಡಿದು ಎಳೆದಾಡಿದೆ. ಇದನ್ನು ಅಲ್ಲಿದ್ದ ವೀಕ್ಷಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆಕೆ ತಿಳಿದು ಮಾಡಿದ ತಪ್ಪಿನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಮೆಕ್ಸಿಕೊ: ಪ್ರಾಣಿಗಳು ಬೇರೆಯವರಿಗೆ ಯಾವತ್ತು ಹಾನಿ ಮಾಡುವುದಿಲ್ಲ. ಆದರೆ ಅವುಗಳಿಗೆ ತೊಂದರೆ ಕೊಟ್ಟೆರೆ, ಚೇಷ್ಟೆ ಮಾಡಿದರೆ ಮಾತ್ರ ಅವು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಹಾಗೇ ಮೃಗಾಲಯದಲ್ಲಿ ಪ್ರಾಣಿಗಳನ್ನು ಸೆರೆಯಲ್ಲಿ ಇಟ್ಟಿರುತ್ತಾರೆ ನಿಜ. ಅಂದಮಾತ್ರಕ್ಕೆ ಅವುಗಳನ್ನು ನೋಡಲು ಬಂದವರು ಅವುಗಳಿಗೆ ಗೇಲಿ ಮಾಡಿದರೆ ಅವರಿಗೆ ತಕ್ಕ ಶಾಸ್ತಿ ಮಾಡುವುದಂತು ಖಂಡಿತ. ಇಂತಹದೊಂದು ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗುತ್ತಿದೆ.

ಮೆಕ್ಸಿಕೊದ ಮೃಗಾಲಯವೊಂದಕ್ಕೆ ಪ್ರಾಣಿಗಳನ್ನು ನೋಡಲು ಭೇಟಿ ನೀಡಿದ ಹುಡುಗಿಯೊಬ್ಬಳು ಅಲ್ಲಿ ಇದ್ದ ಸ್ಪೈಡರ್ ಮಂಗನನ್ನು ಗೇಲಿ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಮಂಗ ಆಕೆಯ ಕೂದಲು ಹಿಡಿದು ಎಳೆದಾಡಿದೆ. ಇದನ್ನು ಅಲ್ಲಿದ್ದ ವೀಕ್ಷಕರೊಬ್ಬರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆಕೆ ತಿಳಿದು ಮಾಡಿದ ತಪ್ಪಿನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ವಿಡಿಯೊ ಸುಮಾರು 900,000 ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ ಮತ್ತು ಅಂದಿನಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.

ವಿಡಿಯೊದಲ್ಲಿ, ಹುಡುಗಿಯೊಬ್ಬಳ ಕೂದಲನ್ನು ಹಿಡಿದುಕೊಂಡು ಸ್ಪೈಡರ್ ಮಂಗ ಹೊಡೆಯುತ್ತಿದೆ. ಮಂಗನ ದಾಳಿಯಿಂದ ತಪ್ಪಿಸಿಕೊಳ್ಳಲು ಹುಡುಗಿ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತಾಳೆ, ಆದರೆ ಅದು ಅವಳಿಗೆ ಸಾಧ್ಯವಾಗುವುದಿಲ್ಲ. ಅಲ್ಲಿದ್ದ ಅನೇಕರು ಆಕೆಯನ್ನು ಮಂಗನಿಂದ ಕಾಪಾಡಲು ಪ್ರಯತ್ನಿಸಿದರೂ ಅವರಿಗೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಮಂಗ ಆಕೆಯನ್ನು ತನ್ನ ಹಿಡಿತದಿಂದ ಮುಕ್ತಗೊಳಿಸಿದೆ . ಆದರೆ ಅವಳು ಅಲ್ಲಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ಮಂಗಗಳು ಮತ್ತೊಮ್ಮೆ ಅವಳ ಕೂದಲನ್ನು ಹಿಡಿದು ಎಳೆದಾಡಿವೆ. ಕೊನೆಗೂ ಆಕೆ ಹೇಗೋ ತಪ್ಪಿಸಿಕೊಂಡಿದ್ದಾಳೆ. ಈ ದಾಳಿಯಲ್ಲಿ ಆಕೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬುದಾಗಿ ತಿಳಿದುಬಂದಿದೆ.

ಈ ವಿಡಿಯೊವನ್ನು mascotasalrescate_arg ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯಿತು, ಮತ್ತು ವೀಕ್ಷಕರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಈ ಪರಿಸ್ಥಿತಿಯನ್ನು “ತಕ್ಕ ಶಿಕ್ಷೆ” ಎಂದು ಬಣ್ಣಿಸಿದ್ದಾರೆ, ಮಂಗಗಳ ಕಡೆಯಿಂದ ಆಕ್ರಮಣಕಾರಿ ಪ್ರತಿಕ್ರಿಯೆಯು ಹುಡುಗಿಯ ಕ್ರಿಯೆಗಳಿಗೆ ತಕ್ಕ ಫಲವಾಗಿದೆ ಎಂದು ಸೂಚಿಸಿದ್ದಾರೆ. ಇತರರು ಇದು ಪ್ರಾಣಿಗಳನ್ನು ಗೌರವವನ್ನು ನೀಡಬೇಕು ಎಂಬ ಪಾಠವನ್ನು ಕಲಿಸುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: ಹುಡುಗಿಯ ಮೇಲೆ ಏಕಾಏಕಿ ದಾಳಿ ಮಾಡಿದ ಕೋತಿ; ವಿಡಿಯೊ ಇದೆ

ಈ ವಿಡಿಯೊ ಮಾನವ-ಪ್ರಾಣಿಗಳ ಪರಸ್ಪರ ದಾಳಿಯ ಅತ್ಯಂತ ಗಂಭೀರ ಅಂಶವನ್ನು ಎತ್ತಿ ತೋರಿಸುತ್ತದೆ, ಸಂದರ್ಶಕರು ವನ್ಯಜೀವಿಗಳಿಗೆ ಎಷ್ಟು ಕಾಳಜಿ ಮತ್ತು ಗೌರವವನ್ನು ನೀಡಬೇಕು ಎಂಬ ಪಾಠವನ್ನು ಕಲಿಸುತ್ತದೆ. ಹುಡುಗಿಯು ಮಾಡಿದ ಕೆಲಸ ಪ್ರಚೋದನಕಾರಿಯಾಗಿದ್ದರೂ, ಮೃಗಾಲಯದೊಳಗಿನ ಪ್ರಾಣಿಗಳ ಮತ್ತು ಸಂದರ್ಶಕರ ರಕ್ಷಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಅದು ಗಮನಸೆಳೆದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Rihanna Crop Over: ʼಊರ ಹಬ್ಬʼದಲ್ಲಿ ʼನಗ್ನ ಉಡುಗೆʼ ಧರಿಸಿ ಸಂಚಲನ ಮೂಡಿಸಿದ ರಿಹಾನ್ನಾ!

Rihanna Crop Over: ಬಾರ್ಬಾಡಿಯನ್ ಗಾಯಕಿ ರಿಹಾನ್ನಾ ತನ್ನ ತಾಯ್ನಾಡಿನ ಉತ್ಸವವಾದ ಕ್ರಾಪ್ ಓವರ್ ಫೆಸ್ಟಿವಲ್‌ನಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡು ಜನರ ಗಮನ ಸೆಳೆದಿದ್ದಾರೆ. ರಿಹಾನ್ನಾ ತನ್ನ ಚರ್ಮದ ಹೊಳಪನ್ನು ತೋರಿಸಲು ನಗ್ನ ಬಾಡಿ ಸೂಟ್ ಅನ್ನು ಆರಿಸಿಕೊಂಡಿದ್ದಾರೆ. ರಿಹಾನ್ನಾ ಚರ್ಮದ ಹೊಳಪು ನೋಡಿದವರಿಗೆ ಅಸೂಯೆ ಮೂಡುವುದು ಖಂಡಿತ! ಇನ್ನು ಅವರು ಧರಿಸಿದ ಈ ವಿಶಿಷ್ಟ ಬಾಡಿ ಸೂಟ್ ಅಂತೂ ನೋಡುಗರ ಕಣ್ಣು ಕುಕ್ಕುವಂತೆ ಇದೆ.

VISTARANEWS.COM


on

Crop Over Festival
Koo


ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕಿ ರಿಹಾನ್ನಾ ತನ್ನ ತಾಯ್ನಾಡಿನ ಉತ್ಸವವಾದ ಕ್ರಾಪ್ ಓವರ್ ಫೆಸ್ಟಿವಲ್‍ (Crop Over Festival)ನಲ್ಲಿ ಅನೇಕ ಬಾರಿ ವಿಶೇಷ ಶೈಲಿಯಲ್ಲಿ ಕಾಣಿಸಿಕೊಂಡಿದ್ದರೂ, ಈ ವರ್ಷ ಮಾತ್ರ ಅವರು ಬಹಳ ವಿಭಿನ್ನವಾಗಿ ಕಾಣಿಸಿಕೊಂಡು ಜನರ ಗಮನ ಸೆಳೆದಿದ್ದಾರೆ. ಅವರು ಕ್ರಾಪ್ ಆಫ್ ಫೆಸ್ಟಿವಲ್‍ಗಾಗಿ ಬೆಜೆಲ್ಡ್ ಕಾಸ್ಟ್ಯೂಮ್ ಬಾಡಿ ಸೂಟ್‍ನಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಉಡುಗೆಯಲ್ಲಿ ಮಿಂಚಿದ ರಿಹಾನ್ನಾ ಕೆರಿಬಿಯನ್ ದೇವತೆಯಂತೆ ಕಾಣಿಸಿದ್ದಾರೆ. ಅವರ ಈ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಿಹಾನ್ನಾ ತನ್ನ ಚರ್ಮದ ಹೊಳಪನ್ನು ತೋರಿಸಲು ನಗ್ನ ಬಾಡಿ ಸೂಟ್ ಅನ್ನು ಆರಿಸಿಕೊಂಡಿದ್ದಾರೆ. ರಿಹಾನ್ನಾ ಚರ್ಮದ ಹೊಳಪು ನೋಡಿದವರಿಗೆ ಅಸೂಯೆ ಮೂಡುವುದು ಖಂಡಿತ. ಇನ್ನು ಅವರು ಧರಿಸಿದ ಈ ವಿಶಿಷ್ಟ ಬಾಡಿ ಸೂಟ್ ಅನ್ನು ಕೆಂಪು, ಹಳದಿ ಮತ್ತು ಬಿಳಿ ಬಣ್ಣವನ್ನು ಒಳಗೊಂಡ ವಿವಿಧ ಬಣ್ಣಗಳಲ್ಲಿ ಅಲಂಕರಿಸಿದ ಸ್ಟೋನ್ ವರ್ಕ್‍ನಿಂದ ಅಲಂಕರಿಸಲಾಗಿದೆ.

Crop Over Festival
Crop Over Festival

ಹಾಗೇ ಅಧರಿಸಿದ ಆಭರಣಗಳು ಮತ್ತು ಕಿರೀಟವನ್ನು ಸಹ ಅದೇ ಬಣ್ಣದ ಸ್ಟೋನ್‍ಗಳಿಂದ ರೆಡಿ ಮಾಡಲಾಗಿದೆ. ಹಾಗೇ ನಿಯಾನ್, ಕಿತ್ತಳೆ ಮತ್ತು ಫುಶಿಯಾ ಬಣ್ಣಗಳನ್ನು ಹೊಂದಿರುವ ಚಿನ್ನದ ಹೊಳಪಿನ ಚಪ್ಪಲಿಗಳು ಮತ್ತು ತನ್ನ ಬೆನ್ನಿಗೆ ಬಣ್ಣ ಬಣ್ಣದ ಗರಿಗಳಿಂದ ತಯಾರಿಸಿದ ರೆಕ್ಕೆಗಳನ್ನು ಧರಿಸಿ ಅವರು ತನ್ನ ನೋಟವನ್ನು ಹೆಚ್ಚು ಆಕರ್ಷಕವಾಗಿ ಮಾಡಿದ್ದಾರೆ.

ಅಲ್ಲದೇ ಮೇಕಪ್‍ಗಾಗಿ, ಅವರು ಗಾಢ ಬಣ್ಣದ ಲಿಪ್ ಲೈನರ್ ಜೊತೆಗೆ ತಿಳಿ ಬಣ್ಣದ ಲಿಪ್ ಶೇಡ್, ಹೈಲೈಟರ್ ಬದಲಿಗೆ ಗ್ಲಿಟರ್ಸ್ , ಐಲೈನರ್ ನೊಂದಿಗೆ ಬೂದು ಬಣ್ಣದ ಐಶಾಡೋವನ್ನು ಹಚ್ಚಿದ್ದಾರೆ. ಹಾಗೇ ಅವರು ತನ್ನ ಸಂಪೂರ್ಣ ನೋಟವನ್ನು ಪ್ರದರ್ಶಿಸಲು ತನ್ನ ಗುಂಗುರು ಕೂದಲನ್ನು ಬಿಟ್ಟಿದ್ದಾರೆ.

ಕ್ರಾಪ್ ಓವರ್ ಫೆಸ್ಟಿವಲ್
ಕ್ರಾಪ್ ಓವರ್ ಫೆಸ್ಟಿವಲ್ ಒಂದು ಬಾರ್ಬಾಡಿಯನ್‍ನಲ್ಲಿ ನಡೆಯುವ ಒಂದು ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದು 1940 ರ ದಶಕದಲ್ಲಿ ಪ್ರಾರಂಭವಾಗಿದೆ. ಈ ರೋಮಾಂಚಕ ಆಚರಣೆಯಲ್ಲಿ ಮಾಸ್ಕ್ವಾರೆಡ್ ಬ್ಯಾಂಡ್ ಗಳು(Masquerade Bands) ಸಕ್ವಿನ್ (sequin )ಧರಿಸಿದ ಉತ್ಸಾಹಿಗಳು, ವರ್ಣರಂಜಿತ ಗರಿಗಳು, ಪ್ರಕಾಶಮಾನವಾದ ಉಚ್ಚಾರಣೆಗಳು, ಆ ವರ್ಷದ ಕೊನೆಯಲ್ಲಿ ಬೆಳೆದ ಬೆಳೆಗಳನ್ನು ಮೆರವಣಿಗೆಯ ಮೂಲಕ ಪ್ರದರ್ಶಿಸುತ್ತಾರೆ.

Continue Reading

Latest

Viral Video: ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

Viral Video: ವಿದ್ಯಾರ್ಥಿನಿಯೊಬ್ಬಳು ತನಗೆ ಕಿರುಕುಳ ನೀಡಿದ ಯುವಕನೊಬ್ಬನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಯರಿಗೆ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಅವರಲ್ಲಿ ಒಬ್ಬ ವಿದ್ಯಾರ್ಥಿನಿ ಯುವಕನಿಗೆ ಸಾರ್ವಜನಿಕ ಸ್ಥಳದಲ್ಲಿ ಕಪಾಳಮೋಕ್ಷ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.

VISTARANEWS.COM


on

Viral Video
Koo


ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯರಿಗೆ ಇಬ್ಬರು ಯುವಕರು ಲೈಂಗಿಕ ಕಿರುಕುಳ ನೀಡಿದ್ದಾರೆ. ಆಗ ಒಬ್ಬ ವಿದ್ಯಾರ್ಥಿನಿ ಯುವಕನಿಗೆ ಸಾರ್ವಜನಿಕ ಸ್ಥಳದಲ್ಲೇ ಕೆನ್ನೆಗೆ ಬಾರಿಸಿದ್ದಾಳೆ. ಉತ್ತರ ಪ್ರದೇಶದ ಬುಲಂದ್‍ಶಹರ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವರದಿಗಳ ಪ್ರಕಾರ, ಈ ವಿದ್ಯಾರ್ಥಿಗಳನ್ನು ಆಗಾಗ ಹಿಂಬಾಲಿಸುತ್ತಿದ್ದ ಯುವಕರು, ಅವರಿಗೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ವಿದ್ಯಾರ್ಥಿನಿಯೊಬ್ಬಳು ಧೈರ್ಯದಿಂದ ಅವರು ಮಾರುಕಟ್ಟೆಯಲ್ಲಿದ್ದಾಗ ಸಾರ್ವಜನಿಕವಾಗಿ ಅವರಲ್ಲಿ ಒಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಆಗ ಆ ಯುವಕ ಕೂಡ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಆದರೂ, ಹೆದರದ ವಿದ್ಯಾರ್ಥಿನಿ ಧೈರ್ಯ ಮಾಡಿ ಮತ್ತೊಮ್ಮೆ ಯುವಕನಿಗೆ ಕಪಾಳಮೋಕ್ಷ ಮಾಡುವ ಮೂಲಕ ಪ್ರತಿದಾಳಿ ನಡೆಸಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಘಟನೆಯ ವಿಡಿಯೊದಲ್ಲಿ, ಸಮವಸ್ತ್ರ ಧರಿಸಿದ ವಿದ್ಯಾರ್ಥಿನಿ ತನ್ನ ಸೈಕಲ್‌ನಿಂದ ಇಳಿದು ತನಗೆ ಕಿರುಕುಳ ನೀಡಿದ ಯುವಕನ ಮುಂದೆ ಬಂದು ಕಪಾಳಮೋಕ್ಷ ಮಾಡಿದ್ದಾಳೆ. ಆಗ ಆತ ಕೂಡ ಆಕೆಯ ಮೇಲೆ ಪ್ರತಿದಾಳಿ ಮಾಡಿದ್ದಾನೆ. ನಂತರ ಅವರ ನಡುವೆ ವಾಗ್ವಾದ ಪ್ರಾರಂಭವಾಗಿದೆ. ಈ ಸಮಯದಲ್ಲಿ ವ್ಯಕ್ತಿಯು ಹುಡುಗಿಗೆ ಕಪಾಳಮೋಕ್ಷ ಮಾಡಿದನು. ಹತ್ತಿರದ ಅಂಗಡಿಗಳಿಂದ ನೋಡುಗರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಮೊದಲು ಅವಳು ಯುವಕನ ಕಪಾಳಕ್ಕೆ ಬಾರಿಸಿದ್ದಾಳೆ. ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ, ಬುಲಂದ್‍ಶಹರ್ ಪೊಲೀಸರು ಈ ಬಗ್ಗೆ ತನಿಖೆ ಮಾಡಿದ್ದಾರೆ.

“ಬೈಕ್‌ನಲ್ಲಿ ಬರುತ್ತಿದ್ದ ಇಬ್ಬರು ಯುವಕರು ಹಲವಾರು ದಿನಗಳಿಂದ ನನ್ನನ್ನು ಹಿಂಬಾಲಿಸುತ್ತಿದ್ದರು. ಇಬ್ಬರೂ ಯುವಕರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದರು ಮತ್ತು ಕಿರುಕುಳ ನೀಡಿದರು. ಈ ಸಮಯದಲ್ಲಿ ತಾನು ಕಿರುಕುಳದ ವಿರುದ್ಧ ಪ್ರತಿಭಟಿಸಿದಾಗ, ಇಬ್ಬರು ಆರೋಪಿಗಳು ತನ್ನನ್ನು ಥಳಿಸಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

ಇದನ್ನೂ ಓದಿ: ಮೃಗಾಲಯದಲ್ಲಿ ಮಂಗನ ಎದುರು ಯುವತಿಯ ‘ಕಪಿ ಚೇಷ್ಟೆ’! ಪರಿಣಾಮ ಏನಾಯ್ತು ನೋಡಿ!

ಈ ಪ್ರಕರಣದಲ್ಲಿ ಖಾನ್ಪುರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಹಾಗೇ ಈ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯವನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.

Continue Reading

Latest

Student Abuse: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

Student Abuse: ತರಗತಿಯಲ್ಲಿ ಮೊಬೈಲ್ ಪೋನ್ ರಿಂಗ್ ಆಗಿದ್ದಕ್ಕೆ ಅನುಮಾನಗೊಂಡ ಶಿಕ್ಷಕಿ ಜಯಾ ಪನ್ವಾರ್ 5 ವಿದ್ಯಾರ್ಥಿಗಳನ್ನು ಶೌಚಾಲಯಕ್ಕೆ ಕರೆದೊಯ್ದು ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ. ಅಲ್ಲದೇ ಈ ವೇಳೆ ವಿರೋಧಿಸಿದ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಅವರ ಒಳ ಉಡುಪುಗಳನ್ನು ಸಹ ತೆಗೆದು ಹಾಕಲು ಹೇಳಿದ್ದಾರೆ. ಒಬ್ಬ ವಿದ್ಯಾರ್ಥಿನಿಯೊಬ್ಬರು ಋತುಸ್ರಾವದ ಸಮಸ್ಯೆ ಇದ್ದ ಕಾರಣ ತನ್ನ ಬಟ್ಟೆಗಳನ್ನು ತೆಗೆಯಲು ನಿರಾಕರಿಸಿದಳು, ಆದರೆ ಶಿಕ್ಷಕಿ ಅವಳ ಮಾತಿಗೆ ಕಿವಿಗೊಡದೆ ಅವಳ ಪ್ಯಾಡ್ ಅನ್ನು ಸಹ ಪರಿಶೀಲಿಸಿದ್ದಾರಂತೆ.

VISTARANEWS.COM


on

Student Abuse
Koo


ಕಾಲೇಜಿನಲ್ಲಿ ಮೊಬೈಲ್ ಬಳಸುವಂತಿಲ್ಲ ಎಂಬ ನಿಯಮವಿದ್ದರೂ (Student Abuse) ಕೂಡ ಕೆಲವೊಂದು ವಿದ್ಯಾರ್ಥಿಗಳು ಮೊಬೈಲ್ ಪೋನ್ ಅನ್ನು ಶಿಕ್ಷಕರ ಕಣ್ಣು ತಪ್ಪಿಸಿ ಬಳಸುತ್ತಾರೆ. ವಿದ್ಯಾರ್ಥಿಗಳ ಈ ತಪ್ಪಿನಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಿಕ್ಷಕಿ(School Teacher)ಯೊಬ್ಬರು ಮೊಬೈಲ್ ಫೋನ್ ಹುಡುಕಲು ಹತ್ತನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿ ಟೀಕೆಗೆ ಒಳಗಾಗಿದ್ದಾರೆ. ಈ ಬಗ್ಗೆ ತನಿಖೆ ನಡೆದಿದ್ದು, ಇದು ಶಿಕ್ಷಕಿಯ ವರ್ಗಾವಣೆಗೆ ಕಾರಣವಾಗಿದೆ.

ವರದಿ ಪ್ರಕಾರ, ಈ ಘಟನೆ ಸರ್ಕಾರಿ ಶಾರದಾ ಬಾಲಕಿಯರ ಹೈಯರ್ ಸೆಕೆಂಡರಿ ಸ್ಕೂಲ್‍ನಲ್ಲಿ ಶುಕ್ರವಾರ ನಡೆದಿದ್ದು, ಅಲ್ಲಿನ ಶಿಕ್ಷಕಿ ಜಯಾ ಪನ್ವಾರ್ ತರಗತಿಯಲ್ಲಿ ಮೊಬೈಲ್ ಪೋನ್ ರಿಂಗ್ ಆಗಿದ್ದಕ್ಕೆ ಅನುಮಾನಗೊಂಡ 5 ವಿದ್ಯಾರ್ಥಿಗಳನ್ನು ಶೌಚಾಲಯಕ್ಕೆ ಕರೆದೊಯ್ದು ಬಟ್ಟೆ ಬಿಚ್ಚುವಂತೆ ಹೇಳಿದ್ದಾರೆ. ಅಲ್ಲದೇ ಈ ವೇಳೆ ವಿರೋಧಿಸಿದ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪೋಷಕರು ಮಲ್ಹಾರ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿನಿಯರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ವಿದ್ಯಾರ್ಥಿಗಳಿಗೆ ತಮ್ಮ ಒಳ ಉಡುಪುಗಳನ್ನು ಸಹ ತೆಗೆದು ಹಾಕಲು ಹೇಳಿದ್ದಾರೆ. ಒಬ್ಬ ವಿದ್ಯಾರ್ಥಿನಿ ಋತುಸ್ರಾವದ ಸಮಸ್ಯೆ ಇದ್ದ ಕಾರಣ ತನ್ನ ಬಟ್ಟೆಗಳನ್ನು ತೆಗೆಯಲು ನಿರಾಕರಿಸಿದಳು. ಆದರೆ ಶಿಕ್ಷಕರು ಅವಳ ಮಾತಿಗೆ ಕಿವಿಗೊಡದೆ ಅವಳ ಪ್ಯಾಡ್ ಅನ್ನು ಸಹ ತೆಗೆದು ಪರಿಶೀಲಿಸಿದರು ಎಂದು ತಿಳಿಸಿದ್ದಾರೆ.

“ನಾನು ನನ್ನ ಋತುಚಕ್ರದ ಸಮಯದಲ್ಲಿ ನನ್ನ ಬಟ್ಟೆಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ಶಿಕ್ಷಕಿ ಜಯಾ ಪನ್ವಾರ್ ಮೇಡಂಗೆ ಹಲವಾರು ಬಾರಿ ಹೇಳಿದೆ. ಆದರೆ ನಾನು ನನ್ನ ಸಲ್ವಾರ್ ತೆಗೆಯದಿದ್ದರೆ, ತಾನೇ ಅದನ್ನು ತೆಗೆಯುತ್ತೇನೆ ಎಂದು ನನಗೆ ಬೆದರಿಕೆ ಹಾಕಿದರು. ಇದನ್ನು ಹೇಳುತ್ತಿರುವಾಗ, ಮೇಡಮ್ ನನ್ನ ಸಲ್ವಾರ್ ಅನ್ನು ಕೆಳಕ್ಕೆ ಎಳೆದರು. ಜಯಾ ಮೇಡಂ ನನ್ನ ಒಳ ಉಡುಪುಗಳನ್ನು ತೆಗೆಯುವಂತೆ ಮಾಡಿದರು. ಮೇಡಂ ನಾನು ನನ್ನ ಋತುಚಕ್ರದಲ್ಲಿದ್ದೇನೆ ಎಂದು ನಾನು ಅವರಿಗೆ ಪರಿಪರಿಯಾಗಿ ಹೇಳಿದೆ. ಆದರೆ ಮೇಡಮ್ ನನ್ನನ್ನು ಪರೀಕ್ಷಿಸಲು ನನ್ನ ಪ್ಯಾಡ್ ತೆಗೆಯುವಂತೆ ಹೇಳಿದರು ಎಂದು ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು ದುಃಖದಿಂದ ಹೇಳಿದ್ದಾಳೆ.

ಇದನ್ನೂ ಓದಿ: ಮಹಿಳೆಯರು ಸಿಂಧೂರ, ಮಂಗಳಸೂತ್ರ ಧರಿಸಬಾರದು ಎಂದ ಶಿಕ್ಷಕಿ ಅಮಾನತು!

ಶುಕ್ರವಾರ ನಡೆದ ಘಟನೆಯ ನಂತರ, ಆಡಳಿತ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿತು ಮತ್ತು ಆರೋಪಿ ಶಿಕ್ಷಕಿಯನ್ನು ಶಾಲೆಯಿಂದ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿಕ್ಷಕಿಯ ವಿರುದ್ಧದ ಪೊಲೀಸ್ ದೂರಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

Continue Reading

ಆರೋಗ್ಯ

Health Tips: ರಾತ್ರಿ ಪದೇಪದೆ ಬಾಯಾರಿಕೆ‌ ಆಗುತ್ತದೆಯೆ? ಇದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು

ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುವುದರ ಹಿಂದೆ ಹಲವು ಕಾರಣಗಳಿರುತ್ತವೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಉತ್ತಮ ಆರೋಗ್ಯವನ್ನು (Health Tips) ಕಾಪಾಡಿಕೊಳ್ಳಲು ರಾತ್ರಿ ಬಾಯಾರಿಕೆಯನ್ನು ಲಘುವಾಗಿ ಪರಿಗಣಿಸಬೇಡಿ. ರಾತ್ರಿ ಬಾಯಾರಿಕೆಯಾಗಲು ಹಲವು ಕಾರಣಗಳು ಇರುತ್ತವೆ. ಅವು ಯಾವುದು, ಅದಕ್ಕೆ ಪರಿಹಾರವೇನು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Health Tips
Koo

ಅನೇಕ ಬಾರಿ ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆಯಾಗುತ್ತದೆ (thirst problem). ಇದರಿಂದ ನಿದ್ರೆಗೂ (sleeping problem) ತೊಂದರೆಯಾಗುತ್ತದೆ. ರಾತ್ರಿ ಹೆಚ್ಚು ಬಾಯಾರಿಕೆಯಾಗುವುದು ಸಾಮಾನ್ಯ ಎಂದುಕೊಳ್ಳಬಾರದು. ಇದು ಗಂಭೀರ ಆರೋಗ್ಯ (Health Tips) ಸಮಸ್ಯೆಯ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ರಾತ್ರಿ ಬಾಯಾರಿಕೆಯನ್ನು (night thirst) ನಿರ್ಲಕ್ಷಿಸುವುದು ಸರಿಯಲ್ಲ.

ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುವುದರ ಹಿಂದೆ ಹಲವು ಕಾರಣಗಳಿರುತ್ತದೆ. ಇದು ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಹೀಗಾಗಿ ರಾತ್ರಿ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸಬೇಡಿ. ರಾತ್ರಿ ಬಾಯಾರಿಕೆಯಾಗಲು ಹಲವು ಕಾರಣಗಳು ಇರುತ್ತವೆ.

Health Tips
Health Tips


ಮಧುಮೇಹ

ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆ ಅನುಭವಿಸಲು ಸಾಮಾನ್ಯ ಕಾರಣವೆಂದರೆ ಮಧುಮೇಹ. ದೇಹದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ ಮೂತ್ರಪಿಂಡವು ಅದನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಇದು ದೇಹದಲ್ಲಿ ನೀರಿನ ಕೊರತೆಯನ್ನು ಉಂಟು ಮಾಡುತ್ತದೆ ಮತ್ತು ಬಾಯಾರಿಕೆಯನ್ನು ಹೆಚ್ಚಿಸುತ್ತದೆ.

ನಿರ್ಜಲೀಕರಣ

ದಿನವಿಡೀ ಸಾಕಷ್ಟು ನೀರು ಕುಡಿಯದಿದ್ದರೆ ರಾತ್ರಿಯಲ್ಲಿ ದೇಹವು ಹೆಚ್ಚು ನೀರಿನ ಅಗತ್ಯವನ್ನು ಅನುಭವಿಸಬಹುದು. ಇದು ರಾತ್ರಿಯಲ್ಲಿ ಆಗಾಗ್ಗೆ ಬಾಯಾರಿಕೆಗೆ ಕಾರಣವಾಗಬಹುದು. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯುವುದು ಮುಖ್ಯ.

Health Tips
Health Tips


ನಿದ್ರೆಯ ತೊಂದರೆ

ನಿದ್ರಾ ಸಮಸ್ಯೆಗಳು ರಾತ್ರಿಯಲ್ಲಿ ಬಾಯಾರಿಕೆಗೆ ಕಾರಣವಾಗುತ್ತವೆ. ಉಸಿರಾಟದ ತೊಂದರೆ ಉಂಟು ಮಾಡುವ ಸ್ಲೀಪ್ ಅಪ್ನಿಯದಿಂದ ಬಾಯಿ ಒಣಗುವುದು, ಹೆಚ್ಚಿನ ಬಾಯಾರಿಕೆಗೆ ಕಾರಣವಾಗುತ್ತದೆ. ಈ ಸಮಸ್ಯೆಯಾದಾಗ ನಿದ್ರೆಯ ಸಮಯದಲ್ಲಿ ಉಸಿರಾಟ ತೊಂದರೆ ಉಂಟಾಗುತ್ತದೆ. ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯದೇ ಇದ್ದಾಗ ಬಾಯಿ ಒಣಗಲು ಪ್ರಾರಂಭಿಸುತ್ತದೆ. ಇದು ರಾತ್ರಿಯಲ್ಲಿ ಆಗಾಗ್ಗೆ ಬಾಯಾರಿಕೆಗೆ ಕಾರಣವಾಗುತ್ತದೆ ಮತ್ತು ನಿದ್ರೆಗೆ ತೊಂದರೆಯಾಗುತ್ತದೆ. ಸರಿಯಾದ ಚಿಕಿತ್ಸೆಯಿಂದ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.

ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು ರಾತ್ರಿಯಲ್ಲಿ ಹೆಚ್ಚು ಬಾಯಾರಿಕೆಗೆ ಕಾರಣವಾಗಬಹುದು. ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಹೆಚ್ಚಿದ ಬಾಯಾರಿಕೆ ಈ ಸೋಂಕಿನ ಸಾಮಾನ್ಯ ಲಕ್ಷಣಗಳಾಗಿವೆ. ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾವು ಮೂತ್ರದ ಪ್ರದೇಶದಲ್ಲಿ ಸೋಂಕನ್ನು ಹರಡುತ್ತದೆ, ಇದು ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುತ್ತದೆ. ಇದು ರಾತ್ರಿಯಲ್ಲಿ ಬಾಯಾರಿಕೆಯನ್ನು ಹೆಚ್ಚಿಸುತ್ತದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ ಮತ್ತು ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಇದರಿಂದ ಸರಿಯಾದ ಚಿಕಿತ್ಸೆಯನ್ನು ಮಾಡಬಹುದು.

ಇದನ್ನೂ ಓದಿ: Almonds For Health: ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

ಔಷಧಗಳ ಪರಿಣಾಮ

ಕೆಲವು ಔಷಧಗಳು ಸಹ ಬಾಯಾರಿಕೆಯನ್ನು ಹೆಚ್ಚಿಸಬಹುದು. ಅಂತಹ ಔಷಧವನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಪರಿಹಾರ

1. ರಾತ್ರಿಯಲ್ಲಿ ಬಾಯಾರಿಕೆಯಾಗದಂತೆ ತಡೆಯಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.

2. ನಿರಂತರವಾಗಿ ಬಾಯಾರಿಕೆಯನ್ನು ಅನುಭವಿಸುತ್ತಿದ್ದರೆ ಖಂಡಿತವಾಗಿಯೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ.

3. ಉತ್ತಮ ನಿದ್ರೆ ಮಾಡಿ. ನಿದ್ರಾ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ.

4. ಸರಿಯಾದ ಮತ್ತು ಸಮತೋಲಿತ ಆಹಾರ ಸೇವಿಸಿ. ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರಲಿ.

5. ಬಾಯಾರಿಕೆಯ ಸಮಸ್ಯೆ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಿ ಮತ್ತು ಸಂಪೂರ್ಣ ತಪಾಸಣೆ ಮಾಡಿಸಿ.

Continue Reading
Advertisement
bjp-jds padayatra Sumalatha ambareesh
ಪ್ರಮುಖ ಸುದ್ದಿ1 min ago

BJP-JDS Padayatra: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ‌ ; ಬ್ಯಾನರ್‌ಗಳಲ್ಲೂ ಕಾಣಿಸಿಕೊಳ್ಳದ ಸುಮಲತಾ ಅಂಬರೀಷ್‌!

Actor Darshan
ಕರ್ನಾಟಕ6 mins ago

Actor Darshan: ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ; ಎಫ್‌ಎಸ್‌ಎಲ್ ವರದಿಯಲ್ಲಿ ದೃಢ

Actor Dhanush Raayan set for OTT release
ಕಾಲಿವುಡ್6 mins ago

Actor Dhanush: ಧನುಷ್ ನಟನೆಯ ʻ50ʼನೇ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ, ಎಲ್ಲಿ?

Crop Over Festival
Latest28 mins ago

Rihanna Crop Over: ʼಊರ ಹಬ್ಬʼದಲ್ಲಿ ʼನಗ್ನ ಉಡುಗೆʼ ಧರಿಸಿ ಸಂಚಲನ ಮೂಡಿಸಿದ ರಿಹಾನ್ನಾ!

Viral Video
Latest40 mins ago

Viral Video: ರಸ್ತೆಯಲ್ಲಿ ಚುಡಾಯಿಸಿದ ಪುಂಡನಿಗೆ ಬುದ್ಧಿ ಕಲಿಸಿದ ವಿದ್ಯಾರ್ಥಿನಿ; ವಿಡಿಯೊ ನೋಡಿ

Bangladesh Unrest
ವಿದೇಶ51 mins ago

Bangladesh Unrest: ಶೇಖ್‌ ಹಸೀನಾ ಅವರ ಪಕ್ಷದ ಮುಖಂಡರು, ಕಾರ್ಯಕರ್ತರೇ ಟಾರ್ಗೆಟ್‌; ಒಂದೇ ದಿನ 29 ಜನ ಬಲಿ

Student Abuse
Latest53 mins ago

Student Abuse: ʼಮೇಡಂ ನನಗೆ ಪಿರಿಯಡ್ಸ್‌ʼ ಎಂದರೂ ಬಿಡದೆ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿದ ಶಿಕ್ಷಕಿ!

Vinesh Phogat Disqualified
ಕ್ರೀಡೆ54 mins ago

Vinesh Phogat Disqualified: ತೂಕ ವಿಭಾಗ ಬದಲಿಸಿದ್ದೇ ವಿನೇಶ್​ ಹಿನ್ನಡೆಗೆ ಕಾರಣವಾಯಿತೇ?

Namma Metro
ಕರ್ನಾಟಕ54 mins ago

Namma Metro: ಆ.6ರಂದು ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರಯಾಣಿಕರ ಓಡಾಟ

Vinesh Phogat
ದೇಶ54 mins ago

Vinesh Phogat: ನೋ! ನೋ! ನೋ!; ವಿನೇಶ್​ ಫೋಗಟ್ ಅನರ್ಹತೆ ಕೆಟ್ಟ ಕನಸಾಗಿರಲಿ: ಆನಂದ್‌ ಮಹೀಂದ್ರಾ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು21 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ22 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌