ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಯನ್ನು ಬಿಡಾಡಿ ಹಸುವೊಂದು ಬೆನ್ನಟ್ಟಿದ ದೃಶ್ಯ ಭಯಾನಕವಾಗಿದೆ. ಬೈಕ್‌ನ ಹಿಂದೆ ಕುಳಿತಿದ್ದ ಮಹಿಳೆಯನ್ನೇ ಗುರಿಯಾಗಿಸಿ ಹಸು ದಾಳಿ ಮಾಡಿದೆ. ಗುಜರಾತ್‌ನ ಮೊಡಾಸಾದ ಸಹಯೋಗ್ ಚೌಕ್ ಬಳಿ ಈ ಘಟನೆ ನಡೆದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇತ್ತೀಚಿಗೆ ರಸ್ತೆಗಳಲ್ಲಿ ನಡೆದಾಡುವ ಜನರ ಮೇಲೆ ಪ್ರಾಣಿಗಳ ದಾಳಿ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಮೊದಲು ನಾಯಿಗಳ ದಾಳಿ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಈಗ ಹಸು, ಎಮ್ಮೆಗಳಂತಹ ಸಾಧು ಪ್ರಾಣಿಗಳು ಕೂಡ ಜನರ ಮೇಲೆ ದಾಳಿ ಮಾಡಲು ಶುರು ಮಾಡಿದ್ದಾವೆ. ಇತ್ತೀಚಿಗೆ ಇದಕ್ಕೆ ಸಂಬಂಧಪಟ್ಟ ಪ್ರಕರಣ ಹೆಚ್ಚು ನಡೆಯುತ್ತಿರುವುದು ಕಂಡುಬಂದಿದೆ. ಈ ಹಿಂದೆ ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಎಮ್ಮೆ ಎಳೆದು ಗುದ್ದಾಡಿ ಗಾಯಗೊಳಿಸಿತ್ತು. ಇದೀಗ ಬಿಡಾಡಿ ಹಸುವೊಂದು ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಘೋರವಾಗಿ ದಾಳಿ ಮಾಡಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Stray cow knocks woman off bike, attacks her repeatedly in Modasahttps://t.co/mzDSJhhyL9 pic.twitter.com/z3OA1JqEbu
— DeshGujarat (@DeshGujarat) June 18, 2024
ವಿಡಿಯೊದಲ್ಲಿ ಮಧ್ಯಾಹ್ನದ ಹೊತ್ತಿಗೆ ಬಿಡಾಡಿ ಹಸುವೊಂದು ಪೆಟ್ರೋಲ್ ಪಂಪ್‌ನ ಬಳಿ ಬೈಕ್‌ನಲ್ಲಿದ್ದ ದಂಪತಿಯನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಆಗ ಬೈಕ್ ಸವಾರ ಬೈಕ್ ಅನ್ನು ನಿಲ್ಲಿದ್ದಾನೆ. ಹಿಂದೆ ಕುಳಿತ ಮಹಿಳೆ ಹಸುವನ್ನು ಕಂಡು ಹೆದರಿ ಓಡಲು ಶುರು ಮಾಡಿದ್ದಾಳೆ. ಹಿಂದೆ ಅಟ್ಟಿಸಿಕೊಂಡು ಬಂದ ಹಸು ಆಕೆಯನ್ನು ಗುದ್ದಿ ಕೆಳಗೆ ಕೆಡವಿ ಕೊಂಬಿನಿಂದ ತಿವಿಯಲು ಶುರುಮಾಡಿದೆ. ಆಗ ಆಕೆಯ ಪತಿ ಹಸುನಿಂದ ಆಕೆಯನ್ನು ಬಿಡಿಸಲು ಪ್ರಯತ್ನಿಸಿದರೂ ಅದು ಬಿಡದೇ ಆಕೆಯ ಮೇಲೆ ದಾಳಿ ಮುಂದುವರಿಸಿದೆ. ಆಗ ಅಲ್ಲಿದ್ದ ಜನರು ಹಸುವಿಗೆ ದೊಣ್ಣೆಯಿಂದ ಹೊಡೆದು ಓಡಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ: Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ
ಈ ದುರಂತ ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿದೆ. ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಹಸು ಬೈಕ್ ನ ಬೆನ್ನಟ್ಟಿ ಮಹಿಳೆಯ ಮೇಲೆ ದಾಳಿ ಮಾಡಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ದಂಪತಿ ಹಸುವಿಗೆ ಯಾವುದೇ ಪ್ರಚೋದನೆ ನೀಡಿಲ್ಲ. ಆದರೂ ಅದು ಮಹಿಳೆಯ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.
ಹಾಗಾಗಿ ಬೀದಿಯಲ್ಲಿ ನಡೆದಾಡುವಾಗ ನಾಯಿ ಮಾತ್ರವಲ್ಲ ಇತರ ಪ್ರಾಣಿಗಳ ಬಗ್ಗೆ ಕೂಡ ಎಚ್ಚರಿಕೆ ವಹಿಸಿ. ನೀವು ಯಾವುದೇ ಪ್ರಚೋದನೆ ನೀಡದಿದ್ದರೂ ಕೂಡ ಅವು ನಿಮ್ಮ ಮೇಲೆ ದಾಳಿ ಮಾಡುವ ಸಂಭವವಿರುತ್ತದೆ. ಹಾಗಾಗಿ ಪ್ರಯಾಣಿಕರು ಬೀದಿ ಪ್ರಾಣಿಗಳಿಂದ ಎಚ್ಚರಿಕೆಯಿಂದಿರಿ.