ಮದುವೆ ಎಂದರೆ ಸಂಭ್ರಮ, ಸಡಗರವಿರುತ್ತದೆ. ಎರಡೂ ಕಡೆ ಸಂಬಂಧಿಕರು ಒಟ್ಟು ಸೇರುವ ಈ ಸಮಾರಂಭ ಅದ್ಧೂರಿಯಾಗಿ ನಡೆಯುತ್ತದೆ. ಆದರೆ ಇತ್ತೀಚೆಗೆ ಮದುವೆ ಮನೆಯಲ್ಲಿಯೇ ಹೆಚ್ಚು ಗಲಾಟೆಗಳು ಕಂಡು ಬರುತ್ತದೆ. ಗಂಡು-ಹೆಣ್ಣು ಶಾಸ್ತ್ರಬದ್ಧವಾಗಿ ತಮ್ಮ ಮುಂದಿನ ಜೀವನಕ್ಕೆ ಕಾಲಿಡುವ ಈ ಅಮೃತ ಘಳಿಗೆಯಲ್ಲಿ ಅನಾಹುತಗಳು ಆಗುವುದೇ ಹೆಚ್ಚಾಗಿದೆ. ಅಂತಹ ಒಂದು ಘಟನೆ ಉತ್ತರಪ್ರದೇಶದ ಬರೇಲಿಯಾದಲ್ಲಿ ನಡೆದಿದೆ. ಚಿಕನ್ ಲೆಗ್‍ಪೀಸ್‍ಗಾಗಿ ಎರಡೂ ಕಡೆಯವರು ಹೊಡೆದಾಡಿಕೊಂಡ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಬರೇಲಿಯಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಧುವಿನ ಕಡೆಯವರಿಗೆ ಬಡಿಸಿದ ಬಿರಿಯಾನಿಯಲ್ಲಿ ಚಿಕನ್ ಲೆಗ್ ಪೀಸ್ ಇಲ್ಲ ಎಂಬ ಕ್ಷುಲಕ ಕಾರಣಕ್ಕೆ ಎರಡೂ ಕಡೆ ಸಂಬಂಧಿಕರ ನಡುವೆ ಹೊಡೆದಾಟ, ಬಡಿದಾಟಗಳು ನಡೆದಿದೆ.
Bareilly, UP.
— Abhijit Majumder (@abhijitmajumder) June 24, 2024
Chicken leg pieces in the biryani got over at the wedding dawaat.
So, the groom and his guests were served kicks, punches, and flying chairs.pic.twitter.com/rhmxIAw35m
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ ಚಿಕನ್ ಪೀಸ್ ಇಲ್ಲ ಎಂಬ ಕಾರಣಕ್ಕೆ ಎರಡೂ ಕಡೆ ಸಂಬಮದಿಕರು ಕಿತ್ತಾಡುವುದನ್ನು ನೋಡಬಹುದು. ಇನ್ನು ಮದುವೆ ಮನೆಯಲ್ಲಿರುವ ಕುರ್ಚಿಗಳನ್ನು ಬಿಸಾಡಿದ್ದಾರೆ. ವಧುವಿನ ಕಡೆಯ ಸಂಬಂಧಿಕರು ವರನ ಕಡೆಯವರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದು ಅಲ್ಲದೇ, ಅಡುಗೆ ಮಾಡಿದವರ ಮೇಲೂ ಹಲ್ಲೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕಡೆಯವರ ಮನವೊಲಿಸಿ ಸಂಧಾನ ಮಾಡಿ ಮದುವೆ ಸಾಂಗವಾಗಿ ನಡೆಯುವ ಹಾಗೇ ಮಾಡಿದ್ದಾರೆ.
ಇದನ್ನೂ ಓದಿ: ಕ್ಯಾಸಿನೋದಲ್ಲಿ 33 ಕೋಟಿ ರೂ. ಜಾಕ್‌ಪಾಟ್; ಖುಷಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್!
ಶುಭ ಸಮಾರಂಭವೆಂದು ನೋಡದೇ ಚಿಕನ್ ಲೆಗ್ ಪೀಸ್‍ಗಾಗಿ ಈ ಪರಿ ಎರಡೂ ಕುಟುಂಬದವರು ಜಗಳವಾಡುವುದನ್ನು ನೋಡಿ ಈ ತರಹ ಕಿತ್ತಾಡುವುದು ಸಹ್ಯವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.