Site icon Vistara News

Viral Video: ಭವ್ಯ ರಥೋತ್ಸವ; ಪ್ಯಾರಿಸ್‌ ಬೀದಿಯಲ್ಲಿ ಸಾವಿರಾರು ತೆಂಗಿನ ಕಾಯಿ ಒಡೆದ ಹಿಂದೂಗಳು!

Viral Video


ಪ್ಯಾರಿಸ್: ಭಾರತದ ಯಾವುದೇ ಸ್ಥಳಗಳಲ್ಲಿ ದೇವರ ಪೂಜೆ, ಮೆರವಣಿಗೆ ಸಹಜ. ಹಬ್ಬಗಳನ್ನು ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ, ವಿಶೇಷವಾಗಿ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲೂ ಇಂಥ ಆಚರಣೆ ನಡೆಯುತ್ತಿರುವುದು ವಿಶೇಷ. ಇತ್ತೀಚಿಗೆ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ ಬೀದಿಯಲ್ಲಿ ಹಿಂದೂಗಳ ಗುಂಪೊಂದು ಭವ್ಯ ಮೆರವಣಿಗೆ ನಡೆಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ (Viral Video) ಆಗಿದೆ.

ಈ ವಿಡಿಯೊದಲ್ಲಿ ಅವರು ದೇವರ ವಿಗ್ರಹವನ್ನು ರಥದಲ್ಲಿ ಇರಿಸಿ ಮೆರವಣಿಗೆಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ಇದರಲ್ಲಿ ದೇವರಿಗೆ ಹಲವಾರು ಜನರು ಸಾವಿರಾರು ತೆಂಗಿನ ಕಾಯಿಗಳನ್ನು ಬೀದಿಗಳಲ್ಲಿ ಒಡೆಯುತ್ತಿರುವುದು ಕಾಣಿಸುತ್ತದೆ. ಈ ವಿಡಿಯೊಗೆ ಹಲವರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಈ ಮೆರವಣಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊಗೆ ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, “ಫ್ರಾನ್ಸ್ ಹಿಜಾಬ್ ಅನ್ನು ನಿಷೇಧಿಸಲು ಬಯಸುತ್ತದೆ” ಎಂದು ಸೂಕ್ಷ್ಮವಾಗಿ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರೊಬ್ಬರು, ” ಮೂರನೇ ವಿಶ್ವ ಹಿಂದೂ ಅಥವಾ ಮುಸ್ಲಿಂ ಎಂಬುದು ಮುಖ್ಯವಲ್ಲ” ಎಂದು ಬರೆದಿದ್ದಾರೆ. “ಈ ಚಟುವಟಿಕೆಗಳನ್ನು ನಡೆಸುತ್ತಿರುವ ಈ ಪುರುಷರು ಭಾರತೀಯರಲ್ಲ ಮತ್ತು ಅವರು ವಾಸ್ತವವಾಗಿ ಶ್ರೀಲಂಕಾದ ತಮಿಳು ಹಿಂದೂಗಳು”ಎಂದು ಕೆಲವು ಬಳಕೆದಾರರು ಗಮನ ಸೆಳೆದಿದ್ದಾರೆ. ಧಾರ್ಮಿಕ ಮೆರವಣಿಗೆಯಲ್ಲಿ ತೆಂಗಿನಕಾಯಿ ಒಡೆಯುವ ವೀಡಿಯೊವನ್ನು ಹಂಚಿಕೊಂಡ ಬಳಕೆದಾರೊಬ್ಬರು ಕೋಪದಿಂದ “ಆ ತೆಂಗಿನಕಾಯಿಯನ್ನು ಬೀದಿಯಲ್ಲಿ ವ್ಯರ್ಥ ಮಾಡುವುದರಿಂದ ಏನು ಪ್ರಯೋಜನ?” ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಎಕ್ಸ್ ಬಳಕೆದಾರರು ಈ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿ, ಅದಕ್ಕೆ ವಿವರಣೆಯನ್ನು ನೀಡಿದ್ದಾರೆ. ಇದು ಪ್ಯಾರಿಸ್‌ನ ಪ್ರವಾಸೋದ್ಯಮ ಅಭಿಯಾನದ ಭಾಗವಾಗಿದೆ ಮತ್ತು ಇದು ಪ್ಯಾರಿಸ್ ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಅಧಿಕೃತ ಕಾರ್ಯಕ್ರಮವಾಗಿದೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ರೀಲ್ಸ್‌ ಮಾಡುವಾಗ ಕುತ್ತಿಗೆಗೆ ದಾರ ಬಿಗಿದು ಬಾಲಕ ಸಾವು; ವಿಡಿಯೊ ಇದೆ

ಫ್ರಾನ್ಸ್‌ ನಗರದ ಅಧಿಕೃತ ಪ್ರವಾಸೋದ್ಯಮ ವೆಬ್‌ಸೈಟ್ ಇಂತಹ ಬಹುಸಂಸ್ಕೃತಿಯ ಆಚರಣೆಗಳನ್ನು ಉಲ್ಲೇಖಿಸುತ್ತದೆ. ಇದರಲ್ಲಿ ಹಿಂದೂ ಸಮುದಾಯವು ಅನುಸರಿಸುವ ಸಂಪ್ರದಾಯಗಳೂ ಸೇರಿವೆ. ಇದು 2023ರ ಆಗಸ್ಟ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಸುಮಾರು ಎರಡು ದಶಕಗಳಿಂದ ನಡೆಸಲಾಗುತ್ತಿದೆ. ಇದನ್ನು ಮೊದಲು 2007ರಲ್ಲಿ ಪ್ರಾರಂಭಿಸಲಾಯಿತು ಎಂಬ ಮಾಹಿತಿಯನ್ನು ಕೆಲವರು ನೀಡಿದ್ದಾರೆ.

Exit mobile version