Site icon Vistara News

Viral Video: 34 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಕಾಶ್ಮೀರಿ ಪಂಡಿತ; ಪಾಳುಬಿದ್ದ ಮನೆ ನೋಡಿ ಭಾವುಕ

Viral Video

ಕಾಶ್ಮೀರದಲ್ಲಿ ಆಗಾಗ ಉಗ್ರರು ದಾಳಿ ನಡೆಸುತ್ತಿರುತ್ತಾರೆ. ಇದರಿಂದ ಅನೇಕ ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಅನೇಕರು ತಮ್ಮ ನಾಡನ್ನು ಬಿಟ್ಟು ಬೇರೆ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಇಂತಹ ನರಕ ಯಾತನೆಯಲ್ಲಿ ಬದುಕುತ್ತಿರುವ ಕಾಶ್ಮೀರಿ ಜನರನ್ನು ನೋಡಿದರೆ ಯಾರಿಗಾದರೂ ಕರುಣೆ ಹುಟ್ಟುವುದು ಸಹಜ. ಅಂತಹದೊಂದು ಘಟನೆ ಇದೀಗ ಕಾಶ್ಮೀರದಲ್ಲಿ ನಡೆದಿದ್ದು, ವಿಡಿಯೊ ವೈರಲ್ (Viral Video) ಆಗಿದೆ.

ಉಗ್ರರ ದಾಳಿಯಿಂದ ತಾಯ್ನಾಡನ್ನು ತೊರೆದ ಕಾಶ್ಮೀರಿ ಪಂಡಿತರೊಬ್ಬರು 34 ವರ್ಷಗಳ ಬಳಿಕ ಮತ್ತೆ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಅಲ್ಲಿ ತಮ್ಮ ಪಾಳು ಬಿದ್ದ ಮನೆಯನ್ನು ಕಂಡು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ 40 ವರ್ಷದ ವ್ಯಕ್ತಿಯೊಬ್ಬರು 34 ವರ್ಷಗಳ ಬಳಿಕ ತಮ್ಮ ಮನೆಗೆ ಬಂದಿದ್ದಾರೆ. ಅಲ್ಲಿ ಅವರು ಸುತ್ತಲೂ ತಿರುಗುತ್ತಾ ಆಕಾಶ ಮತ್ತು ಕಟ್ಟಡಗಳನ್ನು ನೋಡುತ್ತಾ, ತಮ್ಮ ಗತಕಾಲದ ನೆನಪುಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗೇ ಸ್ಥಳೀಯರೊಂದಿಗೆ ಮಾತನಾಡುವಾಗ ಭಾವುಕರಾಗಿದ್ದಾರೆ. ಅವರ ಕಣ್ಣಿನಂಚಿನಲ್ಲಿ ನೀರು ಬರುವುದು ಕಾಣಿಸುತ್ತದೆ. ಈ ಕ್ಲಿಪ್ ಅನ್ನು ವಿನೀತಾ ಸಿಂಗ್ ಎನ್ನುವವರು ಹಂಚಿಕೊಂಡಿದ್ದು, ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್ ಗಳು ಬಂದಿವೆ.

ಈ ವಿಡಿಯೊ ನೋಡಿ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ವಲಸೆ ಬಂದಿದ್ದ ಕಾಶ್ಮೀರಿ ಗೆಳೆಯನ ಜೊತೆ ‘ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಲು ಹೋದಾಗ ಆತ ತಮ್ಮ ತಾಯ್ನಾಡಿನ ಸಂಕಷ್ಟಗಳನ್ನು ನೋಡಿ ಭಾವುಕರಾಗಿ 10 ನಿಮಿಷಗಳ ಕಾಲ ಆಘಾತಕ್ಕೊಳಗಾಗಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಇನ್ನೊಬ್ಬರು 25 ವರ್ಷಗಳ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದಾಗ, ಅವರಿಗೆ ವಿಮಾನದಿಂದ ಇಳಿದು ನೆಲಕ್ಕೆ ಕಾಲಿಟ್ಟ ತಕ್ಷಣ, ಕಣ್ಣೀರು ಹರಿಯಲು ಶುರುವಾಗಿತ್ತು ಮತ್ತು ತನ್ನ ತಾಯಿಗೂ ಅದೇ ಅನುಭವವ ಆಗಿತ್ತು. ಅಲ್ಲಿ ವಾಸಿಸುವವರ ಈ ಭಾವನೆ, ನೋವು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಅಲ್ಲದೇ ಮತ್ತೊಬ್ಬರು ಬಲವಂತವಾಗಿ ನಿಮ್ಮ ಮನೆಯನ್ನು ತೊರೆಯುವುದು ಎಷ್ಟು ಕಷ್ಟಕರವಾಗಿರುತ್ತದೆ. ನಿಮ್ಮ ಈ ನೋವನ್ನು ಯಾರು ಊಹಿಸಲು ಸಾಧ್ಯವಿಲ್ಲ ಎಂದು ಸಹಾನುಭೂತಿ ತೋರಿದ್ದಾರೆ.

ಇದನ್ನೂ ಓದಿ: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

1990ರಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿಗಳು ನಡೆಸುತ್ತಿದ್ದ ತೀವ್ರ ಉಗ್ರಗಾಮಿ ಕೃತ್ಯಗಳಿಂದಾಗಿ ಕಾಶ್ಮೀರಿ ಪಂಡಿತರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ತಾಯ್ನಾಡನ್ನು ತೊರೆಯಬೇಕಾಯಿತು.

Exit mobile version