Viral Video: 34 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಕಾಶ್ಮೀರಿ ಪಂಡಿತ; ಪಾಳುಬಿದ್ದ ಮನೆ ನೋಡಿ ಭಾವುಕ - Vistara News

Latest

Viral Video: 34 ವರ್ಷಗಳ ಬಳಿಕ ತಾಯ್ನಾಡಿಗೆ ಮರಳಿದ ಕಾಶ್ಮೀರಿ ಪಂಡಿತ; ಪಾಳುಬಿದ್ದ ಮನೆ ನೋಡಿ ಭಾವುಕ

Viral Video: ಉಗ್ರರ ದಾಳಿಯಿಂದ ತಾಯ್ನಾಡನ್ನು ತೊರೆದ ಕಾಶ್ಮೀರಿ ಪಂಡಿತರೊಬ್ಬರು 34 ವರ್ಷಗಳ ಬಳಿಕ ಮತ್ತೆ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಅಲ್ಲಿ ತಮ್ಮ ಮನೆಯನ್ನು ಕಂಡು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಸ್ಥಳೀಯರೊಂದಿಗೆ ಮಾತನಾಡುತ್ತಾ ಭಾವುಕರಾಗಿ ಅವರ ಕಣ್ಣಂಚು ತೇವವಾಗುವುದು ಈ ವಿಡಿಯೊದಲ್ಲಿ ನೋಡಬಹುದು. ಈ ಕ್ಲಿಪ್ ಅನ್ನು ವಿನೀತಾ ಸಿಂಗ್ ಎನ್ನುವವರು ಹಂಚಿಕೊಂಡಿದ್ದಾರೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾಶ್ಮೀರದಲ್ಲಿ ಆಗಾಗ ಉಗ್ರರು ದಾಳಿ ನಡೆಸುತ್ತಿರುತ್ತಾರೆ. ಇದರಿಂದ ಅನೇಕ ಜನರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಅನೇಕರು ತಮ್ಮ ನಾಡನ್ನು ಬಿಟ್ಟು ಬೇರೆ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ. ಇಂತಹ ನರಕ ಯಾತನೆಯಲ್ಲಿ ಬದುಕುತ್ತಿರುವ ಕಾಶ್ಮೀರಿ ಜನರನ್ನು ನೋಡಿದರೆ ಯಾರಿಗಾದರೂ ಕರುಣೆ ಹುಟ್ಟುವುದು ಸಹಜ. ಅಂತಹದೊಂದು ಘಟನೆ ಇದೀಗ ಕಾಶ್ಮೀರದಲ್ಲಿ ನಡೆದಿದ್ದು, ವಿಡಿಯೊ ವೈರಲ್ (Viral Video) ಆಗಿದೆ.

ಉಗ್ರರ ದಾಳಿಯಿಂದ ತಾಯ್ನಾಡನ್ನು ತೊರೆದ ಕಾಶ್ಮೀರಿ ಪಂಡಿತರೊಬ್ಬರು 34 ವರ್ಷಗಳ ಬಳಿಕ ಮತ್ತೆ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಅಲ್ಲಿ ತಮ್ಮ ಪಾಳು ಬಿದ್ದ ಮನೆಯನ್ನು ಕಂಡು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ 40 ವರ್ಷದ ವ್ಯಕ್ತಿಯೊಬ್ಬರು 34 ವರ್ಷಗಳ ಬಳಿಕ ತಮ್ಮ ಮನೆಗೆ ಬಂದಿದ್ದಾರೆ. ಅಲ್ಲಿ ಅವರು ಸುತ್ತಲೂ ತಿರುಗುತ್ತಾ ಆಕಾಶ ಮತ್ತು ಕಟ್ಟಡಗಳನ್ನು ನೋಡುತ್ತಾ, ತಮ್ಮ ಗತಕಾಲದ ನೆನಪುಗಳನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಿದ್ದಾರೆ. ಹಾಗೇ ಸ್ಥಳೀಯರೊಂದಿಗೆ ಮಾತನಾಡುವಾಗ ಭಾವುಕರಾಗಿದ್ದಾರೆ. ಅವರ ಕಣ್ಣಿನಂಚಿನಲ್ಲಿ ನೀರು ಬರುವುದು ಕಾಣಿಸುತ್ತದೆ. ಈ ಕ್ಲಿಪ್ ಅನ್ನು ವಿನೀತಾ ಸಿಂಗ್ ಎನ್ನುವವರು ಹಂಚಿಕೊಂಡಿದ್ದು, ಇದಕ್ಕೆ ಸಾವಿರಾರು ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್ ಗಳು ಬಂದಿವೆ.

ಈ ವಿಡಿಯೊ ನೋಡಿ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ವಲಸೆ ಬಂದಿದ್ದ ಕಾಶ್ಮೀರಿ ಗೆಳೆಯನ ಜೊತೆ ‘ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಲು ಹೋದಾಗ ಆತ ತಮ್ಮ ತಾಯ್ನಾಡಿನ ಸಂಕಷ್ಟಗಳನ್ನು ನೋಡಿ ಭಾವುಕರಾಗಿ 10 ನಿಮಿಷಗಳ ಕಾಲ ಆಘಾತಕ್ಕೊಳಗಾಗಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಇನ್ನೊಬ್ಬರು 25 ವರ್ಷಗಳ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದಾಗ, ಅವರಿಗೆ ವಿಮಾನದಿಂದ ಇಳಿದು ನೆಲಕ್ಕೆ ಕಾಲಿಟ್ಟ ತಕ್ಷಣ, ಕಣ್ಣೀರು ಹರಿಯಲು ಶುರುವಾಗಿತ್ತು ಮತ್ತು ತನ್ನ ತಾಯಿಗೂ ಅದೇ ಅನುಭವವ ಆಗಿತ್ತು. ಅಲ್ಲಿ ವಾಸಿಸುವವರ ಈ ಭಾವನೆ, ನೋವು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಅಲ್ಲದೇ ಮತ್ತೊಬ್ಬರು ಬಲವಂತವಾಗಿ ನಿಮ್ಮ ಮನೆಯನ್ನು ತೊರೆಯುವುದು ಎಷ್ಟು ಕಷ್ಟಕರವಾಗಿರುತ್ತದೆ. ನಿಮ್ಮ ಈ ನೋವನ್ನು ಯಾರು ಊಹಿಸಲು ಸಾಧ್ಯವಿಲ್ಲ ಎಂದು ಸಹಾನುಭೂತಿ ತೋರಿದ್ದಾರೆ.

ಇದನ್ನೂ ಓದಿ: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

1990ರಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿಗಳು ನಡೆಸುತ್ತಿದ್ದ ತೀವ್ರ ಉಗ್ರಗಾಮಿ ಕೃತ್ಯಗಳಿಂದಾಗಿ ಕಾಶ್ಮೀರಿ ಪಂಡಿತರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ತಾಯ್ನಾಡನ್ನು ತೊರೆಯಬೇಕಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral News : ಐಷಾರಾಮಿ ಹೋಟೆಲ್‌ನಲ್ಲಿ ವಾಸ, ಫ್ಲೈಟ್‌ನಲ್ಲಿ ಓಡಾಟ; ಶ್ರೀಮಂತ ಕಳ್ಳನೀಗ ಪೊಲೀಸರ ಬಲೆಗೆ!

Viral News: ದುಡಿಯುವುದಕ್ಕೆ ನೂರಾರು ದಾರಿಯಿದ್ದರೂ ಕೆಲವರು ಕಳ್ಳತನವನ್ನೇ ತಮ್ಮ ಕಾಯಕವನ್ನಾಗಿಸಿಕೊಳ್ಳುತ್ತಾರೆ. ಮೈ ಬಗ್ಗಿಸಿ ದುಡಿಯುವ ಬದಲು ಕಳ್ಳಮಾರ್ಗದಲ್ಲಿ ದುಡಿಯುವುದೇ ಕೆಲವರಿಗೆ ಕಸುಬಾಗಿರುತ್ತದೆ. ಇಲ್ಲೊಬ್ಬ ಕಳ್ಳನಿದ್ದಾನೆ. ಇವನು ಅಂತಿಂಥ ಕಳ್ಳನಲ್ಲ. ಐಷಾರಾಮಿ ಹೋಟೆಲ್‌ನಲ್ಲಿ ವಾಸ ಮಾಡುತ್ತಾ, ಫ್ಲೈಟ್‌ನಲ್ಲಿಯೇ ಓಡಾಡುತ್ತಾನೆ.ಇನ್ನು ಮುಂಬೈನ ಮುಂಬ್ರಾ ಪ್ರದೇಶದಲ್ಲಿ ಇವನು 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಐಷಾರಾಮಿ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ಮತ್ತು ಆಡಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

VISTARANEWS.COM


on

Rich Thief
Koo

ಗುಜರಾತ್ : ಕೆಲವರು ದುಡಿಯುವುದರ ಬದಲು ಸುಲಭವಾಗಿ ಹಣ ಮಾಡುವ ದಾರಿಯನ್ನೇ ನೋಡುತ್ತಿರುತ್ತಾರೆ. ಅದರಲ್ಲಿ ಮುಖ್ಯವಾಗಿ ಕಳ್ಳತನ. ಆದರೆ ಇಲ್ಲೊಬ್ಬ ಕಿಲಾಡಿ ಕಳ್ಳನಿದ್ದಾನೆ. ಈ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಕಳ್ಳತನ (Rich Thief )ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿಯುತ್ತಿದ್ದ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಾಗೂ ಕ್ಯಾಬ್ ಬುಕ್ ಮಾಡುತ್ತಿದ. ಇನ್ನು ಈತ ವಾಸವಿರುವ ಫ್ಲ್ಯಾಟ್‌ ಬಗ್ಗೆ ಕೇಳಿದ್ರೆ ಆಕ್‌ ಆಗ್ತೀರಾ. ಈತನ ಹೈ ಫೈ ಲೈಫ್‌ ಬಗ್ಗೆ ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ(Viral News).

ಈತನ ಹೆಸರು ರೋಹಿತ್ ಸೋಲಂಕಿ ಎಂಬುದಾಗಿ ತಿಳಿದುಬಂದಿದೆ. ಈತ ಒಬ್ಬ ಅನುಭವಿ ಕಳ್ಳನಾಗಿದ್ದು, ಹಲವಾರು ವರ್ಷಗಳಿಂದ ಕಳ್ಳತನ ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿ ಶ್ರೀಮಂತನಾಗಿದ್ದಾನೆ ಎನ್ನಲಾಗಿದೆ. ಮುಂಬೈನ ಮುಂಬ್ರಾ ಪ್ರದೇಶದಲ್ಲಿ ಸೋಲಂಕಿ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಐಷಾರಾಮಿ ಫ್ಲ್ಯಾಟ್‍ನಲ್ಲಿ ವಾಸಿಸುತ್ತಿದ್ದ ಮತ್ತು ಆಡಿ (Audi)ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಬ ಮಾಹಿತಿ ತಿಳಿದುಬಂದಿದೆ.

ಕಳೆದ ತಿಂಗಳು ರೋಹಿತ್ ಸೋಲಂಕಿ ವಾಪಿಯಲ್ಲಿ 1 ಲಕ್ಷ ರೂ.ಗಳ ಕಳ್ಳತನ ಮಾಡಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದನು. ಆತ ಈಗಾಗಲೇ 19 ದರೋಡೆಗಳನ್ನು ಮಾಡಿದ್ದು, ಇವುಗಳಲ್ಲಿ ವಲ್ಸಾದ್‍ನಲ್ಲಿ ಮೂರು, ಸೂರತ್‍ನಲ್ಲಿ ಒಂದು, ಪೋರ್ಬಂದರ್ ನಲ್ಲಿ ಒಂದು, ಸೆಲ್ವಾಲ್‍ನಲ್ಲಿ ಒಂದು, ತೆಲಂಗಾಣದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಒಂದು ಹಾಗೇ ಲಂಚದ ಮೂಲಕ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಇನ್ನೂ ಆರು ಕಳ್ಳತನಗಳನ್ನು ಮಾಡಿರುವುದಾಗಿ ಅವನು ಒಪ್ಪಿಕೊಂಡಿದ್ದಾನೆ. ಹಾಗಾಗಿ ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿದ ಇತಿಹಾಸ ಈತನಿಗಿದೆ ಎನ್ನಲಾಗಿದೆ.

ಅಲ್ಲದೇ ಈತ ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಸೋಲಂಕಿ ಎಂಬ ತನ್ನ ಹೆಸರನ್ನು ಅರ್ಹಾನ್ ಎಂದು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಹಾಗೇ ಈತ ಕಳ್ಳತನಗಳನ್ನು ಮಾಡಲು ಹಗಲಿನಲ್ಲಿ ಯೋಜನೆ ನಡೆಸುತ್ತಿದ್ದನು. ಮತ್ತು ಕಳ್ಳತನ ಮಾಡಲು ಐಷಾರಾಮಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದನು, ಅಲ್ಲದೇ ಕೆಲವೊಮ್ಮೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಹಗಲಿನಲ್ಲಿ ಹೋಟೆಲ್ ಕ್ಯಾಬ್ ಗಳನ್ನು ಕಾಯ್ದಿರಿಸುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಕೋತಿ ಚೇಷ್ಟೆಗೆ ಕೊನೆಯೇ ಇಲ್ಲ! ಈ ಮಂಗ್ಯಾನ ಡ್ಯಾನ್ಸ್‌ ನೋಡಿ!

ಅಲ್ಲದೇ ಈತ ಮಾದಕವಸ್ತುಗಳ ವ್ಯಸನಿಯಾಗಿದ್ದು, ಅದಕ್ಕಾಗಿ ತಿಂಗಳಿಗೆ 1.50 ಲಕ್ಷ ರೂ.ಗಳನ್ನು ಖರ್ಚು ಮಾಡುತ್ತಿದ್ದ ಮತ್ತು ಈತ ಮುಂಬೈನ ಡ್ಯಾನ್ಸ್ ಬಾರ್ ಮತ್ತು ನೈಟ್‍ಕ್ಲಬ್‌ಗಳಲ್ಲಿ ಪಾರ್ಟಿ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Continue Reading

Latest

Viral News: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ

Viral News: ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳಾ ವೈದ್ಯೆಯೊಬ್ಬಳು ಪ್ರೀತಿಸಿ ತನ್ನ ಜೊತೆ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ನಡೆದಿದೆ. ಸಂತ್ರಸ್ತ ಪ್ರಕಾಶ್ ಅಲಿಯಾಸ್ ವಿಕಾಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಮಧೌರಾ ಬ್ಲಾಕ್‌ನ ವಾರ್ಡ್ ಸಂಖ್ಯೆ 12 ರ ಕೌನ್ಸಿಲರ್ ಆಗಿದ್ದ ಎನ್ನಲಾಗಿದೆ. ಕಳೆದ ಐದು ವರ್ಷಗಳಿಂದ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಅವನು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದನು. ಇದರಿಂದ ಕೋಪಗೊಂಡ ಯುವತಿ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆಸಿಕೊಂಡು, ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ ಎನ್ನಲಾಗಿದೆ.

VISTARANEWS.COM


on

Love Case
Koo

ಪಾಟ್ನಾ: ಪ್ರೀತಿಸಿ ಯುವತಿಯರನ್ನು ಬಳಸಿಕೊಂಡು ಮೋಸ ಮಾಡುವಂತಹ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರ ಮೋಸದ ಪ್ರೀತಿಗೆ ಎಷ್ಟೋ ಯುವತಿಯರ ಜೀವನ ಹಾಳಾಗಿದೆ. ಹಾಗಾಗಿ ಇವರಲ್ಲಿ ಕೆಲವು ಯುವತಿಯರು ಮಾನ ಮರ್ಯಾದೆಗೆ ಅಂಜಿ ಜೀವ ಕಳೆದುಕೊಂಡಿದ್ದಾರೆ, ಆದರೆ ಇಲ್ಲೊಬ್ಬ ಯುವತಿ ಪ್ರೀತಿಸಿ (Viral News) ಮೋಸ ಮಾಡಿದವನಿಗೆ ತಕ್ಕ ಶಿಕ್ಷೆ ವಿಧಿಸಿದ್ದಾಳೆ.

ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳಾ ವೈದ್ಯೆಯೊಬ್ಬಳು ಪ್ರೀತಿಸಿ ತನ್ನ ಜೊತೆ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ಜುಲೈ 1ರಂದು ನಡೆದಿದೆ. ಸಂತ್ರಸ್ತ ಪ್ರಕಾಶ್ ಅಲಿಯಾಸ್ ವಿಕಾಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಮಧೌರಾ ಬ್ಲಾಕ್‌ನ ವಾರ್ಡ್ ಸಂಖ್ಯೆ 12ರ ಕೌನ್ಸಿಲರ್ ಆಗಿದ್ದ ಎನ್ನಲಾಗಿದೆ. ಕಳೆದ ಐದು ವರ್ಷಗಳಿಂದ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಅವನು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದನು. ತಾನು ಸಂಬಂಧ ಬೆಳೆಸಿದ ತಪ್ಪಿಗೆ ಯುವತಿ ಹೇಗೋ ನ್ಯಾಯಾಲಯದಲ್ಲಿ ಮದುವೆಯಾಗಲು ಅವನನ್ನು ಮನವೊಲಿಸಿದಳು. ಆದರೆ ಅಂದು ಆತ ಮದುವೆಯಾಗಲು ನ್ಯಾಯಾಲಯಕ್ಕೆ ಬರದೆ ತಪ್ಪಿಸಿಕೊಂಡ. ಇದರಿಂದ ಕೋಪಗೊಂಡ ಯುವತಿ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆಸಿಕೊಂಡು, ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ ಎನ್ನಲಾಗಿದೆ.

ಆತ ಅಳುವುದನ್ನು ಕೇಳಿದ ನೆರೆಹೊರೆಯವರು ಬಂದು ನೋಡಿದಾಗ ಆತ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡು ಸರನ್ ಜಿಲ್ಲೆಯ ಮಧೌರಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ದಾಖಲಿಸಿದ್ದಾರೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಸ್ತೆ ಮೇಲೆಯೇ ಮಹಿಳೆಯ ವಶೀಕರಣ! 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಹಾಗೇ ಕೊಲೆ ಯತ್ನದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಯುವತಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಯುವತಿ ಹಾಜಿಪುರದ 25 ವರ್ಷದ ಅವಿವಾಹಿತ ವೈದ್ಯೆಯಾಗಿದ್ದು, ಮಧೌರಾದಲ್ಲಿ ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ತಮ್ಮಿಬ್ಬರ ನಡುವೆ ಸಂಬಂಧವಿದ್ದು, ಆತ ಮದುವೆಯಾಗಲು ನಿರಾಕರಿಸಿದ್ದಕ್ಕೆ ಅವನ ಖಾಸಗಿ ಭಾಗ ಕತ್ತರಿಸಿರುವುದಾಗಿ ಯುವತಿ ಒಪ್ಪಿಕೊಂಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

Continue Reading

Latest

Viral News: ಮಗುವಿಗೆ ಔಷಧಿ ತರಲು ಹೋದ ತಾಯಿ ಹೆಬ್ಬಾವಿಗೆ ಆಹಾರವಾಗಿದ್ದು ಹೇಗೆ?

Viral News: ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳನ್ನು 30 ಅಡಿ ಉದ್ದ ಹೆಬ್ಬಾವು ತಿಂದು ಹಾಕಿದ ಘಟನೆ ನಡೆದಿದೆ.ತನ್ನ ಮಗುವೊಂದಕ್ಕೆ ಅನಾರೋಗ್ಯವಿರುವ ಕಾರಣ ಔಷಧಿ ಖರೀದಿಸಲು ಕಾಡಿನಲ್ಲಿ ಮರಗಳ ನಡುವೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಹೆಬ್ಬಾವು ಅವಳ ಮೇಲೆ ದಾಳಿ ಮಾಡಿ ಆಕೆಯನ್ನು ನುಂಗಿ ಹಾಕಿದೆ. ಆಕೆಯ ಪತಿ ಮನೆಯಲ್ಲಿ ಪತ್ನಿ ನಾಪತ್ತೆಯಾಗಿರುವುದು ಕಂಡು ಹುಡುಕಿಕೊಂಡು ಬಂದಾಗ ಹೆಂಡತಿಯ ಕಾಲುಗಳು 30 ಅಡಿ ಉದ್ದದ ಹೆಬ್ಬಾವಿನ ಬಾಯಿಯಿಂದ ಕಾಣಿಸುತ್ತಿದ್ದವು. ಆಗ ಆತ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಾವನ್ನು ಕೊಂದುಹಾಕಿದ್ದಾನೆ.

VISTARANEWS.COM


on

Snake Bite
Koo

ಇಂಡೋನೇಷ್ಯಾ: ಹಾವುಗಳು ಸಾಮಾನ್ಯವಾಗಿ ಮನೆಯ ಸುತ್ತಮುತ್ತ, ಹೊಲ ಗದ್ದೆಗಳಲ್ಲಿ, ಕರೆಗಳ ಸಮೀಪದಲ್ಲಿ ಕಂಡುಬರುತ್ತದೆ. ಹಾವಿನ ಕಡಿತದಿಂದ ಸಾಕಷ್ಟು ಜನರು ಜೀವ ಕೂಡ ಕಳೆದುಕೊಂಡಿದ್ದಾರೆ. ವಿಷಜಂತುಗಳಾದ ಹಾವು ಒಂದು ರೀತಿಯಾದರೆ ಹೆಬ್ಬಾವು ಇನ್ನೊಂದು ರೀತಿಯದ್ದು. ಇದರ ಬಾಯಿಗೆ ಸಿಕ್ಕರೆ ಮರಳಿ ಬರುವುದು ಅಸಾಧ್ಯ. ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳನ್ನು 30 ಅಡಿ ಉದ್ದ ಹೆಬ್ಬಾವು ತಿಂದು (Viral News) ಹಾಕಿದೆಯಂತೆ.

ಸಿರಿಯಾತಿ (30) ಹಾವಿನ ಬಾಯಿಗೆ ಆಹಾರವಾದ ಮಹಿಳೆ. ಈಕೆ ದಕ್ಷಿಣ ಸುಲಾವೆಸಿಯ ಲುವು ರೀಜೆನ್ಸಿಯಲ್ಲಿ ತನ್ನ ಪತಿ ಹಾಗೂ ಐದು ಮಕ್ಕಳೊಂದಿಗೆ ವಾಸವಾಗಿದ್ದಳು. ತನ್ನ ಮಗುವೊಂದಕ್ಕೆ ಅನಾರೋಗ್ಯವಿರುವ ಕಾರಣ ಔಷಧಿ ಖರೀದಿಸಲು ಕಾಡಿನಲ್ಲಿ ಮರಗಳ ನಡುವೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಹೆಬ್ಬಾವು ಅವಳ ಮೇಲೆ ದಾಳಿ ಮಾಡಿ ಆಕೆಯನ್ನು ನುಂಗಿ ಹಾಕಿದೆ. ಆಕೆಯ ಪತಿ ಅಡಿಯಾನ್ಸಿಯಾ ಮನೆಯಲ್ಲಿ ಪತ್ನಿ ನಾಪತ್ತೆಯಾಗಿರುವುದು ಕಂಡು ಹುಡುಕಿಕೊಂಡು ಬಂದಾಗ ಸಿರಿಯತಿಯ ಕಾಲುಗಳು 30 ಅಡಿ ಉದ್ದದ ಹೆಬ್ಬಾವಿನ ಬಾಯಿಯಿಂದ ಕಾಣಿಸುತ್ತಿದ್ದವು. ಆಗ ಆತ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಾವನ್ನು ಕೊಂದುಹಾಕಿದ್ದಾನೆ. ಆದರೆ ಅಷ್ಟೊತ್ತಿಗಾಗಲೇ ಸಿರಿಯತಿ ಮೃತಪಟ್ಟಿದ್ದಳು.

“ಆಕೆ ತನ್ನ ಮಗುವಿನ ಔಷಧಿಯನ್ನು ಖರೀದಿಸಲು ಹಾಗೂ ತನ್ನ ಸಹೋದರನನ್ನು ಭೇಟಿ ಮಾಡುವ ಉದ್ದೇಶದಿಂದ ಹೊರಗೆಹೋಗಿದ್ದಾಳೆ. ಆಕೆ ಕಾಡಿನ ದಾರಿಯ ಮೂಲಕ ಹೋಗಬೇಕಾಗಿತ್ತು. ಆಕೆಯ ಸಹೋದರ ಬಹಳ ಸಮಯದವರೆಗೆ ಅವಳಿಗಾಗಿ ಕಾಯುತ್ತಿದ್ದನು, ಆಕೆ ಬಾರದಿದ್ದು ನೋಡಿ ಆಕೆಯ ಪತಿಗೆ ಕರೆ ಮಾಡಿದ್ದಾನೆ. ಆದ್ದರಿಂದ ಪತಿ ತನ್ನ ಹೆಂಡತಿಯನ್ನು ಹುಡುಕಲು ಹೋಗಿದ್ದನು ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜುಲೈ 2 ರಂದು ಬೆಳಿಗ್ಗೆ 7.30 ಕ್ಕೆ ಈ ಘಟನೆ ನಡೆದಿದ್ದು, ಮಹಿಳೆಯ ಶವ ಪತ್ತೆಯಾಗಿದೆ. ಆದರೆ ದೇಹದ ಭಾಗಗಳು ಹಾಗೇ ಇದ್ದರೂ ಮೂಳೆಗಳು ಮುರಿದಿರಬಹುದು ಎಂದು ಊಹಿಸಲಾಗಿದೆ. ಪಾರ್ಥಿವ ಶರೀರವನ್ನು ಈಗಾಗಲೇ ಅಂತ್ಯಕ್ರಿಯೆಗಾಗಿ ಮನೆಗೆ ತಲುಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳೊಳಗೆ ದಕ್ಷಿಣ ಸುಲಾವೆಸಿಯಲ್ಲಿ ನಡೆದ ಇಂತಹ ಎರಡನೇ ಘಟನೆಯಲ್ಲಿ ಇದು ಒಂದಾಗಿದೆ. ಜೂನ್ ಆರಂಭದಲ್ಲಿ, 45 ವರ್ಷದ ಮಹಿಳೆಯ ದೇಹವು ಹೆಬ್ಬಾವಿನ ಬಾಯಿಯೊಳಗೆ ಪತ್ತೆಯಾಗಿತ್ತು. ಇಂಡೋನೇಷ್ಯಾವು ಬರ್ಮೀಸ್ ಹೆಬ್ಬಾವು ಮತ್ತು ರೆಟಿಕ್ಯುಲೇಟೆಡ್ ಹೆಬ್ಬಾವು ಸೇರಿದಂತೆ ಹಲವಾರು ಜಾತಿಯ ಹೆಬ್ಬಾವುಗಳಿಗೆ ನೆಲೆಯಾಗಿದೆ.

ಇದನ್ನೂ ಓದಿ: Fans chant Pakistan: ಟೀಮ್ ಇಂಡಿಯಾ ವಿಕ್ಟರಿ ಪೆರೇಡ್​ನಲ್ಲಿ ಅಭಿಮಾನಿಗಳು ಪಾಕಿಸ್ತಾನ್ ಘೋಷಣೆ ಕೂಗಿದ್ದು ಏಕೆ? ವಿಡಿಯೊ ವೈರಲ್​

Continue Reading

Latest

Viral Video : ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

Viral Video ಕಳೆದ ವರ್ಷ ನಡೆದ ಬೆಂಕಿ ಅನಾಹುತದಲ್ಲಿ 26 ವರ್ಷದ ಅಂಶುಮಾನ್ ಸಿಂಗ್ ಅವರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿ ಬೆಂಕಿ ಅನಾಹುತದಲ್ಲಿ ಅನೇಕ ಜನರನ್ನು ರಕ್ಷಿಸಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಹಾಗಾಗಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕೀರ್ತಿ ಚಕ್ರವನ್ನು ಪ್ರದಾನ ಮಾಡಿದ್ದಾರೆ. ಆ ವೇಳೆ ಸೇನಾ ವೈದ್ಯಕೀಯ ದಳದ ಕ್ಯಾಪ್ಟನ್ ಅವರ ಪತ್ನಿಯನ್ನು ನೋಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ : ಗಡಿಯಲ್ಲಿ ಕಾವಲು ಕಾಯುವ ಸೈನಿಕರ ಜೀವನ ಸರಳವಾಗಿರಲ್ಲ. ಅವರು ದೇಶಕ್ಕಾಗಿ ತಮ್ಮ ಜೀವವನ್ನೇ ಒತ್ತೆ ಇಡಬೇಕಾದ ಸಂದರ್ಭಗಳು ಬರುತ್ತದೆ. ಇದರಿಂದ ಅವರು ತಮ್ಮ ಹೆಂಡತಿ, ಮಕ್ಕಳು, ಕುಟುಂಬಸ್ಥರನ್ನು ತೊರೆಯಬೇಕಾಗುತ್ತದೆ. ಇಂತಹ ಶೌರ್ಯವನ್ನು ಪ್ರದರ್ಶಿಸಿದ ಭಾರತೀಯ ಸೇನೆ ಮತ್ತು ಅರೆಸೈನಿಕ ಪಡೆಗಳ ಸಿಬ್ಬಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 5, 2024 ರಂದು ಮರಣೋತ್ತರವಾಗಿ 10 ಕೀರ್ತಿ ಚಕ್ರಗಳನ್ನು ಪ್ರದಾನ ಮಾಡಿದ್ದಾರೆ. ಆ ವೇಳೆ ಸೇನಾ ವೈದ್ಯಕೀಯ ದಳದ ಕ್ಯಾಪ್ಟನ್ ಅವರ ಪತ್ನಿಯನ್ನು ನೊಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾವುಕರಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಕಳೆದ ವರ್ಷ ನಡೆದ ಬೆಂಕಿ ಅನಾಹುತದಲ್ಲಿ 26 ವರ್ಷದ ಅಂಶುಮಾನ್ ಸಿಂಗ್ ಅವರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿ ಬೆಂಕಿ ಅನಾಹುತದಲ್ಲಿ ಅನೇಕ ಜನರನ್ನು ರಕ್ಷಿಸಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದರು. ಹಾಗಾಗಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕೀರ್ತಿ ಚಕ್ರವನ್ನು ಪ್ರದಾನ ಮಾಡಿದ್ದಾರೆ. ಆ ವೇಳೆ ಪ್ರಶಸ್ತಿಯನ್ನು ಸ್ವೀಕರಿಸಲು ಬಿಳಿ ಸೀರೆಗೆ ಚಿನ್ನದ ಬಣ್ಣದ ಅಂಚು ಹೊಂದಿರುವ ಸೀರೆಯುಟ್ಟು ಚಿಕ್ಕ ಹುಡುಗಿಯೊಬ್ಬಳು ತಾಯಿಯ ಜೊತೆ ಬರುತ್ತಿರುವುದನ್ನು ಕಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರು ಅಚ್ಚರಿಗೊಂಡಿದ್ದಾರೆ.

ಆಕೆ ಅಂಶುಮಾನ್ ಸಿಂಗ್ ಅವರ ಪತ್ನಿ ಸೃಷ್ಟಿ ಸಿಂಗ್ ಆಗಿದ್ದು, ಬಾಳಿ ಬದುಕಬೇಕಾಗಿದ್ದ ಆಕೆ ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು ವಿಧವೆಯಾಗಿರುವುದನ್ನು ಕಂಡು ಅಲ್ಲಿದ್ದವರೆಲ್ಲರೂ ಒಂದು ಕ್ಷಣ ಭಾವುಕರಾಗಿದ್ದಾರೆ. ಆಕೆ ಮದುವೆಯಾಗಿ ಕೇವಲ 5 ತಿಂಗಳಿನಲ್ಲೇ ತನ್ನ ಪತಿಯನ್ನು ಕಳೆದುಕೊಂಡಿದ್ದಾಳೆ. ಪತಿಯ ವೀರತೆಯ ಬಗ್ಗೆ ವಿವರಣೆ ನೀಡುವಾಗ ಆಕೆಯ ಕಣ್ಣಂಚಿನಲ್ಲಿ ಕಣ್ಣೀರು ಬರಲು ಶುರುವಾಗಿದೆ. ಇದನ್ನು ಕಂಡು ಕೀರ್ತಿ ಚಕ್ರವನ್ನು ಪ್ರದಾನ ಮಾಡಲು ಬಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದಕವನ್ನು ನೀಡಿ ಆಕೆಯ ಕೈ ಹಿಡಿದು ಸಮಾಧಾನ ಮಾಡಿದ್ದಾರೆ. ರಾಷ್ಟ್ರಪತಿಯವರು ತಮ್ಮ ಮಗಳಂತೆ ಆಕೆಯನ್ನು ಸಂತೈಸಿದ್ದನ್ನು ಕಂಡು ಎಲ್ಲರಿಗೂ ಅಚ್ಚರಿಗೊಂಡಿದ್ದಾರೆ. ಈ ವಿಡಿಯೊ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದ ಸುಂದರಿಯರಿವರು!

ಕಳೆದ ಜುಲೈನಲ್ಲಿ ಲಡಾಕ್‌ನ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಆರ್ಮಿ ಬಂಕರ್‌ನಲ್ಲಿ ಬೆಂಕಿಯ ಅಪಘಾತ ಸಂಭವಿಸಿತ್ತು. ಶಾಕ್ ಸರ್ಕ್ಯೂಟ್‌ನಿಂದ ಅನೇಕ ಟೆಂಟ್‌ಗಳು ಬೆಂಕಿಯ ಜ್ವಾಲೆಗೆ ಸುಟ್ಟು ಹೋಗಿದ್ದವು. ಈ ವೇಳೆ ಸೇನಾ ವೈದ್ಯಕೀಯ ದಳದ ಕ್ಯಾಪ್ಟನ್ ಆಗಿದ್ದ 26 ವರ್ಷದ ಅಂಶುಮಾನ್ ಸಿಂಗ್ ಅವರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿ ಬೆಂಕಿ ಅನಾಹುತದಲ್ಲಿ ಅನೇಕ ಜನರನ್ನು ರಕ್ಷಿಸಿದರು. ಆದರೆ ಈ ಅಪಘಾತದಲ್ಲಿ ಅಂಶುಮಾನ್ ಹಾಗೂ ಮೂವರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಏರ್ ಲಿಫ್ಟ್ ಮಾಡಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದೆ ಅಂಶುಮಾನ್ ಅವರು ನಿಧನರಾಗಿದ್ದರು.

Continue Reading
Advertisement
Janaspandana programme at Harpanahalli
ವಿಜಯನಗರ25 seconds ago

Vijayanagara News: ಹರಪನಹಳ್ಳಿಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಡಿಸಿ ಎಂ.ಎಸ್‌. ದಿವಾಕರ್‌ ಚಾಲನೆ

Smriti Singh
ದೇಶ11 mins ago

Smriti Singh: ಮನೆ, ಮಗುವಿನ ಕನಸಿತ್ತು, ಎಲ್ಲವೂ ನುಚ್ಚು ನೂರಾಯ್ತು; ಹುತಾತ್ಮ ಯೋಧನ ಪತ್ನಿ ಕಣ್ಣೀರು!

ZIM vs IND
ಪ್ರಮುಖ ಸುದ್ದಿ24 mins ago

ZIM vs IND : ಜಿಂಬಾಬ್ವೆ ವಿರುದ್ಧ 13 ರನ್​ಗಳಿಂದ ಸೋತ ವಿಶ್ವ ವಿಜೇತ ಭಾರತ ತಂಡ

Dengue fever
ಕರ್ನಾಟಕ27 mins ago

Dengue fever: ಶಿರಸಿಯಲ್ಲಿ ಶಂಕಿತ ಡೆಂಗ್ಯೂ ಜ್ವರದಿಂದ ವಿದ್ಯಾರ್ಥಿನಿ ಸಾವು

Project Zorawar
ದೇಶ51 mins ago

Project Zorawar: ಚೀನಾಗೆ ಪೆಟ್ಟು ಕೊಡಲು ದೇಶೀಯವಾಗಿ ಯುದ್ಧ ಟ್ಯಾಂಕ್‌ ಉತ್ಪಾದನೆ; ಏನಿವುಗಳ ವಿಶೇಷ?

Anant Ambani-Radhika Merchant wedding
ಪ್ರಮುಖ ಸುದ್ದಿ1 hour ago

Anant Ambani-Radhika Merchant wedding : ಅನಂತ್- ರಾಧಿಕಾ ಸಂಗೀತ್ ಕಾರ್ಯಕ್ರಮದಲ್ಲಿ ವಿಶ್ವಕಪ್ ವಿಜೇತ ತಂಡದ ಸದಸ್ಯರು ಭಾಗಿ

Elephant Arjuna
ಕರ್ನಾಟಕ1 hour ago

Elephant Arjuna: ದಸರಾ ಆನೆ ಅರ್ಜುನನ ಸ್ಮಾರಕಕ್ಕೆ ಶಂಕುಸ್ಥಾಪನೆ; 50 ಲಕ್ಷ ವೆಚ್ಚದಲ್ಲಿ ನಿರ್ಮಾಣ

Hathras Stampede
ದೇಶ2 hours ago

Hathras Stampede: 121 ಜನರ ಸಾವಿಗೆ ಕಾರಣನಾದ ಭೋಲೆ ಬಾಬಾ ಆಸ್ತಿ ಧ್ವಂಸಕ್ಕೆ ಮುಂದಾದ ಯೋಗಿ!

karnataka weather Forecast
ಮಳೆ2 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Ambani Family Fashion
ಫ್ಯಾಷನ್3 hours ago

Ambani Family Fashion: ಅಂಬಾನಿ ಮಹಿಳೆಯರ ದುಬಾರಿ ಉಡುಗೆಗಳು; ಇವರ ಮದುವೆ ಡ್ರೆಸ್‌‌ಗಳು ಹೇಗಿವೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ5 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ6 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು8 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ10 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ14 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ1 day ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ1 day ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ1 day ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ1 day ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

ಟ್ರೆಂಡಿಂಗ್‌