ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಸಾಮಾನ್ಯವಾಗಿ ಬಿಟ್ಟಿದೆ. ಎಲ್ಲೆಂದರಲ್ಲಿ ಈ ಸಂಬಂಧದ ಬಗ್ಗೆ ಒಂದಲ್ಲ ಒಂದು ಮಾಹಿತಿ ಸಿಗುತ್ತಿರುತ್ತದೆ. ಇದೀಗ ಅಂತಹದೊಂದು ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಹಾಪುರ್ ನಗರದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಗರ್ಲ್ ಫ್ರೆಂಡ್ ಮನೆಯಲ್ಲಿ ರೆಡ್‍ಹ್ಯಾಂಡ್ ಆಗಿ ಹಿಡಿದು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral video) ಆಗಿದೆ.
ಮಹಿಳೆಗೆ ಹಲವು ದಿನಗಳಿಂದ ತನ್ನ ಪತಿಯ ನಡವಳಿಕೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆತನಿಗೆ ಅಕ್ರಮ ಸಂಬಂಧವಿರುವುದಾಗಿ ಆಕೆಗೆ ಮೊದಲಿನಿಂದಲೂ ಅನುಮಾನವಿತ್ತು. ಹಾಗಾಗಿ ಕೆಲಸಕ್ಕೆಂದು ಹೊರಗೆ ಹೋದ ಪತಿಯನ್ನು ಫಾಲೋ ಮಾಡಿದ ಆಕೆ ಪೊಲೀಸರಿಗೂ ಮಾಹಿತಿ ನೀಡಿದ್ದಾಳೆ. ನಂತರ ತನ್ನ ಗರ್ಲ್‍ಫ್ರೆಂಡ್ ಮನೆಗೆ ತೆರಳಿದ ಪತಿಯನ್ನು ಅಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಆತನ ಅಕ್ರಮ ಸಂಬಂಧವನ್ನು ಬಯಲಿಗೆ ತಂದಿದ್ದಾಳೆ.
Extra-marital affair kalesh (The wife caught her husband red handed with his girlfriend. The husband and wife fought in the presence of the police) Hapur UP
— Ghar Ke Kalesh (@gharkekalesh) July 7, 2024
pic.twitter.com/cDcJTyaM5j
ವೈರಲ್ ಆದ ವಿಡಿಯೊದಲ್ಲಿ ಪತ್ನಿ ಮತ್ತು ಪತಿ ಪೊಲೀಸರೊಂದಿಗೆ ಮನೆಯಿಂದ ಹೊರನಡೆಯುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಹೊರಗೆ ಕಾಲಿಟ್ಟ ಕೂಡಲೇ, ಮಹಿಳೆ ತಿರುಗಿ ತನ್ನ ಗಂಡನಿಗೆ ಬಿಗಿಯಾದ ಕಪಾಳಮೋಕ್ಷ ಮಾಡುತ್ತಾಳೆ. ಕೋಪ ಮತ್ತು ಮುಜುಗರದಿಂದ, ಫೋನ್‌ನಲ್ಲಿ ಮಾತನಾಡುತ್ತಿದ್ದ ಪತಿ, ಪೊಲೀಸರ ಮುಂದೆಯೇ ಹೆಂಡತಿಗೆ ಕಪಾಳಮೋಕ್ಷ ಮಾಡುತ್ತಾನೆ. ಇದರ ನಂತರ, ದಂಪತಿಗಳ ನಡುವೆ ಜಗಳ ಪ್ರಾರಂಭವಾಗುತ್ತದೆ. ನಂತರ ಪೊಲೀಸರು ಇಬ್ಬರನ್ನು ಬೇರ್ಪಡಿಸಿ ಪರಿಸ್ಥಿತಿಯನ್ನು ಶಾಂತಗೊಳಿಸುವುದು ಈ ವಿಡಿಯೊದಲ್ಲಿ ಕಂಡುಬಂದಿದೆ.
ಸಿಕ್ಕಿಬಿದ್ದ ನಂತರ, ಆ ವ್ಯಕ್ತಿ ತಾನು ಮೂರು ವರ್ಷಗಳಿಂದ ಆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದೇನೆ ಎಂದು ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 6 ಲಕ್ಷಕ್ಕೂ ಹೆಚ್ಚು ವೀವ್ಸ್ ಅನ್ನು ಪಡೆದುಕೊಂಡಿದೆ. ಘಟನೆಯ ದಿನಾಂಕ ಮತ್ತು ಸಮಯ ತಿಳಿದುಬಂದಿಲ್ಲ. ಹಾಗೇ ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಅಂಬಾನಿ ಕುಟುಂಬ ಸದಸ್ಯರು ಯಾರೆಲ್ಲ ಎಂಬ ಕುತೂಹಲ ನಿಮಗೂ ಇರಬಹುದು! ಇಲ್ಲಿದೆ ನೋಡಿ ಡಿಟೇಲ್ಸ್!
ಅಪರಾಧ ಮಾಡಿ ಮತ್ತೆ ಪತ್ನಿಯನ್ನು ಹಿಂಸೆ ಮಾಡುತ್ತಿರುವುದಕ್ಕೆ ಹಲವರು ವ್ಯಕ್ತಿಯ ಮೇಲೆ ಕಿಡಿಕಾರಿದ್ದಾರೆ. ಕೆಲವರು ಇಂದಿನ ಕಾಲದಲ್ಲಿ ವಿವಾಹೇತರ ಸಂಬಂಧವು ಸಾಮಾನ್ಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಹಾಗೇ ಮತ್ತೊಬ್ಬರು ನಿಷ್ಠೆ ಎನ್ನುವುದು ಕೊಹಿನೂರ್ ಇದ್ದಂತೆ. ಇಂದಿನ ಕಾಲದಲ್ಲಿ ಕಾಣಸಿಗುವುದು ತುಂಬಾ ಅಪರೂಪ. ಹಾಗಾಗಿ ನಿಷ್ಠಾವಂತ ಸಂಗಾತಿಯನ್ನು ಹೊಂದಿರುವವರು ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.