Site icon Vistara News

Viral Video : ನೋಯ್ಡಾದಲ್ಲಿ ನಿರ್ಮಾಣವಾಗುತ್ತಿದೆ ಲಕ್ಷುರಿ ಅಪಾರ್ಟ್‌ಮೆಂಟ್‌! ಇದರ ಬೆಲೆ ಅಬ್ಬಬ್ಬಾ!

Viral Video

ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಿಗೆ ಒಂದು ಮನೆಯನ್ನು ಕಟ್ಟಿಕೊಳ್ಳುವುದು ಬಹಳ ಕಠಿಣವಾದ ಕೆಲಸವಾಗಿದೆ. ಸಿಮೆಂಟ್, ಮರಳು, ಕಲ್ಲು, ಕಬ್ಬಿಣದ ಬೆಲೆ ಕೇಳಿದರೆ ಜನರಿಗೆ ಮನೆಯೂ ಬೇಡ ಜೀವನವೇ ಬೇಡ ಎಂದೆನಿಸಿ ಬಿಡುತ್ತದೆ. ಹೀಗಿರುವಾಗ ದೆಹಲಿಯ ಎನ್ ಸಿಆರ್ ಇಂಜಿನಿಯರ್ ಒಬ್ಬರು ನೋಯ್ಡಾದಲ್ಲಿ ನಿರ್ಮಿಸುತ್ತಿರುವ ಅಪಾರ್ಟ್ ಮೆಂಟ್ ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತು ಖಂಡಿತ. ಈ ಬಗ್ಗೆ ಟೆಕ್ಕಿಯೊಬ್ಬರು ವಿಡಿಯೊ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಟೆಕ್ಕಿ ಕಾಶಿಶ್ ಛಿಬ್ಬರ್ ಎನ್ನುವವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ದೆಹಲಿಯ ಎನ್ ಸಿಆರ್ ಇಂಜಿನಿಯರ್ ಒಬ್ಬರು ನೋಯ್ಡಾದಲ್ಲಿ ಅಪಾರ್ಟ್ ಮೆಂಟ್ ಒಂದನ್ನು ನಿರ್ಮಿಸುತ್ತಿದ್ದು, ಇದರಲ್ಲಿ 4BHK ಗೆ 15 ಕೋಟಿ ರೂ ಹಾಗೂ 6BHK 25 ಕೋಟಿ ರೂ ಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಛಿಬ್ಬರ್ ಅವರು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ವಿಡಿಯೊ ಮಾಡುತ್ತಾ ನೋಯ್ಡಾ ಸೆಕ್ಟರ್ 124 ರ ವರ್ಚುವಲ್ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ಅವರು ಮುಂಬರುವ ದಿನಗಳಲ್ಲಿ ಎಟಿಎಸ್ ನೈಟ್ಸ್ ಬ್ರಿಡ್ಜ್ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಅಪಾರ್ಟ್ ಮೆಂಟ್ ಅನ್ನು ಪರಿಶೀಲನೆ ಮಾಡಿದ್ದಾರೆ.

ಅಲ್ಲಿ 4BHK ಅಪಾರ್ಟ್ ಮೆಂಟ್ ಗೆ 15 ಕೋಟಿ ರೂ ಹಾಗೂ 6BHK ಅಪಾರ್ಟ್ ಮೆಂಟ್ ಗೆ 25 ಕೋಟಿ ರೂ ಗೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ಇಂತಹ ದುಬಾರಿ ವೆಚ್ಚದ ಅಪಾರ್ಟ್ ಮೆಂಟ್ ಅನ್ನು ಯಾರು ಖರೀದಿಸುತ್ತಾರೆ? ತಾನು ಎಷ್ಟೇ ಉದ್ಯೋಗ ಮಾಡಿದರೂ, ಎಷ್ಟೇ ವ್ಯಾಪಾರ, ಹೂಡಿಕೆ ಮಾಡಿದರೂ ಇಂತಹ ಅಪಾರ್ಟ್ ಮೆಂಟ್ ಅನ್ನು ಖರೀದಿಸಲು ಸಾಧ್ಯವಾಗುತ್ತದೆಯೇ? ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಛಿಬ್ಬರ್ ಅವರು ಕೆಲವು ದಿನಗಳ ಹಿಂದೆ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ಒಟ್ಟು 4.4 ಮಿಲಿಯನ್ ವೀವ್ಸ್ ಹಾಗೂ ಹಲವು ಕಾಮೆಂಟ್ ಗಳು ಬಂದಿದೆ. ಹಾಗೇ ಇದು ಹಿಂದೆ ಟ್ವೀಟರ್ ನಲ್ಲಿಯೂ ಪೋಸ್ಟ್ ಆಗಿದ್ದು, ಅಲ್ಲಿ ಇದಕ್ಕೆ 1 ಮಿಲಿಯನ್ ವೀವ್ಸ್ ಬಂದಿತ್ತು ಎನ್ನಲಾಗಿದೆ.

ಇದನ್ನೂ ಓದಿ:ರೈಲಿನ ಮೇಲಿನ ಬರ್ತ್‌ನಲ್ಲಿದ್ದ ವ್ಯಕ್ತಿ ಉರುಳಿ ಬಿದ್ದು ಕೆಳ ಬರ್ತ್‌ನ ಪ್ರಯಾಣಿಕ ಸಾವು

ಈ ವಿಡಿಯೊ ನೋಡಿದ ಜನರು ಅಪಾರ್ಟ್ ಮೆಂಟ್ ನ ದುಬಾರಿ ಬೆಲೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನೋಯ್ಡಾದ ರಿಯಲ್ ಎಸ್ಟೇಟ್ ಮಧ್ಯಮ ವರ್ಗದ ಭಾರತೀಯರಿಗೆ ತಲುಪುತ್ತಿಲ್ಲ ಎಂದು ಒಬ್ಬರು ಬೇಸರ ವ್ಯಕ್ತಪಡಿಸಿದರೆ, ಕೆಲವರು ಇಲ್ಲಿ ಅಪಾರ್ಟ್ ಮೆಂಟ್ ಖರೀದಿಸುವ ಬದಲು ನ್ಯೂಯಾರ್ಕ್, ಸಿಂಗಾಪುರ ನಲ್ಲಿ ಅಪಾರ್ಟ್ ಮೆಂಟ್ ಅಥವಾ ದುಬೈ ನಲ್ಲಿ ವಿಲ್ಲಾ ಖರೀದಿಸಬಹುದು ಎಂದು ಸಲಹೆ ನೀಡಿದ್ದಾರೆ. ಹಾಗೇ ಇನ್ನೊಬ್ಬರು ಸಮಸ್ಯೆಗಳ ಗೂಡಾದ ಇಂತಹ ದುಬಾರಿ ಅಪಾರ್ಟ್ ಮೆಂಟ್ ಖರೀದಿಸುವ ಬದಲು ಇದೇ ಹಣದಲ್ಲಿ ಬೇರೆ ಕಡೆ ಸ್ಥಳ ಖರೀದಿಸಿ ಮನೆ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

Exit mobile version