Site icon Vistara News

Viral Video: ಒಂಟಿ ಮಹಿಳೆ ಮೇಲೆ ಪುರುಷರ ಗುಂಪಿನಿಂದ ಅಮಾನುಷ ಹಲ್ಲೆ; ಸಹಾಯಕ್ಕೆ ಬದಲು ಮೊಬೈಲ್‌ ಚಿತ್ರೀಕರಣ!

viral Video

ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ ಇತ್ಯಾದಿ ಘಟನೆಗಳು ನಡೆಯುತ್ತಲೇ ಇರುತ್ತವೆ. ಒಂಟಿ ಮಹಿಳೆಯಿಂದ ಏನೂ ಮಾಡಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಪುರುಷರದ್ದು. ಅಂತಹದೊಂದು ಘಟನೆ ಈಗ ಮಧ್ಯಪ್ರದೇಶದಲ್ಲಿ ನಡೆದಿದೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಪುರುಷರು ಸಾರ್ವಜನಿಕವಾಗಿ ದೊಡ್ಡ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪುರುಷರ ಗುಂಪೊಂದು ಮಹಿಳೆಯನ್ನು ಸಾರ್ವಜನಿಕ ಸ್ಥಳದಲ್ಲಿ ತಡೆದು ಮೂವರು ಮಹಿಳೆಯನ್ನು ಹಿಡಿದುಕೊಂಡಿದ್ದರೆ ಇನ್ನೊಬ್ಬ ಮರದ ದೊಡ್ಡ ದೊಣ್ಣೆಯಿಂದ ಮಹಿಳೆಯ ಬೆನ್ನಿನ ಕೆಳಭಾಗಕ್ಕೆ ಹೊಡೆಯುತ್ತಿದ್ದಾನೆ. ಆದರೆ ಅಲ್ಲಿದ್ದ ಜನರು ಆಕೆಗೆ ಸಹಾಯ ಮಾಡುವ ಬದಲು ವಿಡಿಯೊ ಮಾಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ .

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೋ ಗಮನಿಸಿದ ಪೊಲೀಸರು ಜಿಲ್ಲೆಯ ತಾಂಡಾ ಪೊಲೀಸ್ ಠಾಣಾ ವ್ಯಪ್ತಿಯಲ್ಲಿರುವ ಈ ಸ್ಥಳವನ್ನು ಗುರುತಿಸಿ, ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಾಗೇ ಮಹಿಳೆಯಿಂದ ದೂರು ದಾಖಲಿಸಿಕೊಂಡು ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ತಂಡ ರಚಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಜೂನ್ 20ರಂದು ಮಹಿಳೆ ತನ್ನ ಮನೆಯಿಂದ ಪುರುಷನೊಬ್ಬನ ಜೊತೆ ಓಡಿಹೋದ ಕಾರಣ ಈ ಘಟನೆ ಸಂಭವಿಸಿರುವುದಾಗಿ ತನಿಖೆಯ ವೇಳೆ ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಮಧ್ಯ.ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಿದೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಾಗೇ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ ಎಂಬುದಾಗಿ ತಿಳಿಸಿದೆ. ಅಲ್ಲದೇ ಈ ಪೋಸ್ಟ್ ಅನ್ನು ಸಿಎಂ ಮೋಹನ್ ಯಾದವ್ ಅವರಿಗೆ ಟ್ಯಾಗ್ ಮಾಡಿ ಮಧ್ಯಪ್ರದೇಶದಲ್ಲಿ ಮಹಿಳೆಯರು ಪದೇ ಪದೇ ಕಿರುಕುಳಕ್ಕೆ ಒಳಗಾಗುತ್ತಿದ್ದು, ಇಂತಹ ಅಪರಾಧಗಳನ್ನು ಸರ್ಕಾರ ತಡೆಯಲು ಯಾಕೆ ವಿಫಲವಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Mysore News in Kannada: ಬೆಂಗಳೂರು-ಮೈಸೂರು ಸಂಚಾರ ನಿಯಂತ್ರಣ ಜು.1ರಿಂದ ಸಂಪೂರ್ಣ ಹೈಟೆಕ್‌

ಧಾರ್ ಲೋಕಸಭಾ ಕ್ಷೇತ್ರವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾವಿತ್ರಿ ಟಾಕೂರ್ ಅವರು ಪ್ರತಿನಿಧಿಸುತ್ತಿದ್ದ ಕಾರಣ ಈ ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ಒತ್ತಡ ಹೆಚ್ಚಾಗಿದೆ ಎನ್ನಲಾಗಿದೆ.

Exit mobile version