Site icon Vistara News

Viral Video : ಹೀಗೆಲ್ಲಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರಾ…? ವಿಡಿಯೊ ನೋಡಿ

Viral Video

ಅಮೆರಿಕ : ಸ್ವಾತಂತ್ರ್ಯ ಸಿಕ್ಕ ದಿನವನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ಅಮೆರಿಕದ‌ (USA) ಅಲಾಸ್ಕಾದ ಗ್ಲೇಸಿಯರ್ ವ್ಯೂ ಎಂಬ ಸಣ್ಣ ಪಟ್ಟಣದಲ್ಲಿ ಘೋಷಣೆಗಳನ್ನು ಕೂಗುತ್ತಾ ಬಂಡೆಯಿಂದ ಕಾರುಗಳನ್ನು ಉರುಳಿಸುವ ಆಚರಣೆ ಮಾಡುತ್ತಾರಂತೆ. ಸುಮಾರು ಎರಡು ದಶಕಗಳಿಂದ ಅಲಾಸ್ಕಾದ ಗ್ಲೇಸಿಯರ್ ವ್ಯೂ ಜುಲೈ 4 ರಂದು ಈ ರೋಮಾಂಚನಕಾರಿ ಆಚರಣೆಯನ್ನು ಮಾಡುತ್ತಾ ಬಂದಿದೆ. ಈ ವರ್ಷ ಕೂಡ ಗ್ಲೇಸಿಯರ್ ವ್ಯೂ ಈ ವಿಶಿಷ್ಟ ಸಂಪ್ರದಾಯದೊಂದಿಗೆ ಆಚರಣೆ ಮಾಡಿದ್ದು ಜನರು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

Viral Video

ಈ ವರ್ಷ ಪೊಲೀಸ್ ಕ್ರೂಸರ್‌ಗಳು ಮತ್ತು ಬಸ್ಸುಗಳು ಸೇರಿದಂತೆ ಹೆಚ್ಚಿನ ಕಾರುಗಳನ್ನು ಉರುಳಿಸಲಾಗಿದೆ. ಬಂಡೆಗಳ ಮೇಲಿಂದ ಕಾರುಗಳನ್ನು ಉರುಳಿಸುವ ಮುನ್ನ ಕಾರುಗಳಿಗೆ ಅಲಂಕಾರ ಮಾಡಲಾಗುತ್ತದೆ. ಅದರಂತೆ ಈ ವರ್ಷ ಕೆಲವು ಕಾರುಗಳನ್ನು ಅಮೆರಿಕದ ಧ್ವಜಗಳಿಂದ ಚಿತ್ರಿಸಲಾಗಿದೆ. ಕಾರುಗಳನ್ನು ಉರುಳಿಸುವಾಗ ಸಂಗೀತಗಳು ಜೋರಾಗಿ ಮೊಳಗುತ್ತವೆ. ಇದು ಬೆಳಗ್ಗೆ 8:45ರ ಸುಮಾರಿಗೆ ಪ್ರಾರಂಭವಾಗಲಿದ್ದು, ಈ ಕ್ಷಣ ಆಚರಣೆಗೆ ಆಗಮಿಸಿದ ಸಾವಿರಾರು ಜನಸಮೂಹದ ಸಂತೋಷಕ್ಕೆ ಕಾರಣವಾಗಿದೆ.

ಕೆಲವರು ಇದನ್ನು ಅಮೆರಿಕದ ಒಂದು ಉತ್ತಮ ಆಚರಣೆ ಎಂದು ಬಣ್ಣಸಿದ್ದಾರೆ. ಮತ್ತು ಈ ಆಚರಣೆಯನ್ನು ನೋಡಲು ತುಂಬಾ ಖುಷಿಯಾಗುತ್ತದೆ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆಚರಣೆ ಪ್ರಪಂಚದಾದ್ಯಂತ ರೋಮಾಂಚನಕಾರಿ ದೃಶ್ಯಗಳನ್ನು ನೋಡ ಬಯಸುವವರನ್ನು ಹೆಚ್ಚು ಆಕರ್ಷಿಸುತ್ತದೆ ಎನ್ನಲಾಗಿದೆ. ಈ ಆಚರಣೆಯಲ್ಲಿ ಭಾಗವಹಿಸುವವರು ಒಂದು ಟಿಕೆಟ್‌ಗೆ 20 ಡಾಲರ್ ನೀಡಬೇಕಾಗುತ್ತದೆ. ಈ ಆಚರಣೆಯ ವೇಳೆ ಪಿಜ್ಜಾ, ಐಸ್ ಕ್ರೀಮ್, ಬ್ರಿಸ್ಕೆಟ್, ಸ್ಯಾಂಡ್‍ವಿಚ್‍ಗಳಂತಹ ಆಹಾರಗಳನ್ನು ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ:  ಕೀರ್ತಿ ಚಕ್ರ ಸ್ವೀಕರಿಸಿದ ಹುತಾತ್ಮ ಯೋಧನ ಪತ್ನಿ; ಭಾವುಕರಾದ ದ್ರೌಪದಿ ಮುರ್ಮು‌,ರಾಜನಾಥ್ ಸಿಂಗ್!

ಇನ್ನು ಈ ಆಚರಣೆಯಲ್ಲಿ ಜನರಿಗೆ ಯಾವುದೇ ಹಾನಿಯಾಗುವುದಿಲ್ಲ. ಯಾಕೆಂದರೆ ಈ ವಾಹನಗಳ ಒಳಗೆ ಯಾರು ಇರುವುದಿಲ್ಲ. ಹಾಗಾಗಿ ಈ ಕಾರನ್ನು ಚಲಾಯಿಸಲು ಮೊನೊರೈಲ್‌ನಿಂದ ಸಹಾಯವನ್ನು ಪಡೆಯುತ್ತಾರೆ, ಅಥವಾ ಫ್ರೀ ವ್ಹೀಲಿಂಗ್ ಮಾಡುತ್ತಾರೆ, ಕೆಲವೊಮ್ಮೆ ವಾಹನವನ್ನು ಸ್ಟಾರ್ಟ್ ಮಾಡಿ ಅದರ ಲೋಹದ ಪೆಡಲ್‌ಗೆ ಮರದ ತುಂಡನ್ನು ಇಡುವ ಮೂಲಕ ಉಡಾಯಿಸುತ್ತಾರೆ. ಇದರಿಂದ ಬಂಡೆಗಳಿಂದ ಉರುಳುವ ಕಾರುಗಳು ತಮ್ಮ ಗಮ್ಯಸ್ಥಾನವನ್ನು ತಲುಪುವ ತನಕ ಗಾಳಿಯಲ್ಲಿ ಹಾರುವಂತೆ ಸ್ಟಂಟ್ ಮಾಡುವಂತೆ ಪ್ರದರ್ಶನ ನೀಡುತ್ತವೆ. ಒಟ್ಟಾರೆ ಇದು ಜುಲೈ ನಾಲ್ಕನೆಯ ತಾರೀಕಿನಂದು ಯುನೈಟೆಡ್ ಸ್ಟೇಟ್ಸ್ ನ ಅಲಾಸ್ಕಾದ ಗ್ಲೇಸಿಯರ್ ವ್ಯೂ ನಲ್ಲಿ ಆಚರಿಸುವ ಅತ್ಯಂತ ದೊಡ್ಡ ಹಬ್ಬವೆಂದೆ ಹೇಳಬಹುದು.

Exit mobile version