ಹಾವೆಂದರೆ ಎಲ್ಲರೂ ಹೌಹಾರುತ್ತಾರೆ. ಅದರಲ್ಲೂ ಹುಡುಗಿಯರಂತೂ ಹಾವನ್ನು ಕಂಡರೆ ಕಿರುಚುತ್ತಾ ಎಲ್ಲೆಂದರಲ್ಲಿ ಓಡಿಹೋಗುತ್ತಾರೆ. ಇನ್ನು ಹಿಂದೂಗಳು ಹಾವನ್ನು ದೇವರೆಂದು ಪೂಜಿಸುತ್ತಾರೆ. ನಾಗರ ಪಂಚಮಿಯ ದಿನ ಹಾವಿಗೆ ಹಾಲೆರೆದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ. ಹಾಗಾಗಿ ಕೆಲವರು ಹಾವನ್ನು ಕಂಡು ಹೆದರಿದರೆ ಇನ್ನು ಕೆಲವರು ಹಾವನ್ನು ದೇವರೆಂದು ಪೂಜಿಸುತ್ತಾರೆ. ಇದೆಲ್ಲ ಅವರವರ ನಂಬಿಕೆಗೆ ಬಿಟ್ಟ ವಿಚಾರವಾಗಿದೆ. ಚೀನಾ, ವಿಯೆಟ್ನಾದಂತಹ ದೇಶಗಳಲ್ಲಿ ಹಾವನ್ನು ಮಸಾಲೆ ಜೊತೆಗೆ ಹುರಿದು, ಇಲ್ಲವಾದರೆ ಜೀವಂತ ಹಾವನ್ನೇ ನುಂಗಿ ಬಿಡುತ್ತಾರೆ. ಅಂತಹದೊಂದು ಭಯಾನಕ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ದಕ್ಷಿಣ ಕೊರಿಯಾದ ಹುಡುಗಿಯೊಬ್ಬಳು ಹಾವನ್ನು ತರಕಾರಿಗಳ ಜೊತೆಗೆ ಸೇರಿಸಿ ಕಚ್ಚಿ ಕಚ್ಚಿ ತಿನ್ನುತ್ತಿರುವ ವಿಡಿಯೊವೊಂದು ನೋಡುಗರನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ಕೆಲವರಲ್ಲಿ ಅಸಹ್ಯ ಹುಟ್ಟಿಸುತ್ತಿದೆ. ಈ ವಿಡಿಯೊ ಇನ್ ಸ್ಟಾಗ್ರಾಂನಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ದಕ್ಷಿಣ ಕೊರಿಯಾದ ಹುಡುಗಿ ತನ್ನ ಮುಂದೆ ಇರುವ ಪ್ಲೇಟ್‌ನಲ್ಲಿ ತರಕಾರಿಗಳ ಜೊತೆಗೆ ಹಾವುಗಳನ್ನು ಇಟ್ಟುಕೊಂಡಿದ್ದಾಳೆ. ನಂತರ ಅದರಲ್ಲಿ ಒಂದು ಹಾವನ್ನು ತನ್ನ ಎರಡು ಕೈಗಳಿಂದ ಹಿಡಿದು ತಿನ್ನಲು ಶುರುಮಾಡಿದ್ದಾಳೆ. ಒಮ್ಮೆ ಹಾವಿನ ತಲೆ, ಒಮ್ಮೆ ಮಧ್ಯಭಾಗ, ಒಮ್ಮೆ ಬಾಲದ ಹಸಿ ಮಾಂಸವನ್ನು ಜಗಿದು ಸವಿಯುವ ಅವಳ ಮುಖವನ್ನು ನೋಡಿದ್ದರೆ ವೀಕ್ಷಕರಿಗೆ ದಿಗ್ಭ್ರಮೆಯಾಗುತ್ತದೆ.
ಇದಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿದ್ದು, ಅನೇಕರು ಇದನ್ನು ಕಂಡು ಅಸಹ್ಯ ಪಟ್ಟಿದ್ದಾರೆ. ಕೆಲವರು ಈ ಕೃತ್ಯವನ್ನು ಟೀಕಿಸಿದ್ದಾರೆ. ಇನ್ನೂ ಕೆಲವರು ನಾವು ಭಾರತದಲ್ಲಿ ಜನಿಸಿರುವುದು ಒಳ್ಳೆಯದು ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದಾರೆ. ಹಾಗೇ ಇನ್ನೊಬ್ಬ ಬಳಕೆದಾರ, ಚೀನೀ ಜನರು ತೃಪ್ತರಾಗಲು ಇವುಗಳನ್ನು ತಿನ್ನುತ್ತಾರೆ. ಅವರ ಈ ಹೊಸ ಆಹಾರ ಪದ್ಧತಿಯಿಂದ ಹೊಸ ವೈರಸ್‌ಗಳು ಜಗತ್ತಿಗೆ ಬರುತ್ತಿವೆ ಎಂದು ಕಿಡಿಕಾರಿದ್ದಾರೆ.
ಈ ವಿಡಿಯೊ @asmrmukbangworld ಎಂಬ ಪ್ಲಾಟ್ ಫಾರ್ಮ್ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ 15 ಮಿಲಿಯನ್ ವೀವ್ಸ್ ಮತ್ತು 1 ದಶಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ.