ನವ ದೆಹಲಿ: 13 ತಿಂಗಳ ಹೆಣ್ಣು ಮಗುವಿಗೆ ಪ್ರಪಂಚದಲ್ಲೇ ಮೊದಲ ಬಾರಿಗೆ ಕರುಳು ಕಸಿ (Intestine Transplant) ಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಆ ಮೂಲಕ ಕರುಳು ಕಸಿಗೊಳಗಾದ ಮೊದಲು ಮಗು ಎಂಬ ಕೀರ್ತಿ ಸ್ಪೇನ್‌ನ ಬಾಲಕಿಯದ್ದಾಗಿದೆ. ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಕರುಳನ್ನು ಜೋಡಿಸಲಾಗಿದ್ದು, ಇದು ವೈದ್ಯಲೋಕ ಸಾಧಿಸಿದ ಯಶಸ್ವಿ ಕಸಿಯಾಗಿದೆ. ಕರುಳು ಕಸಿಗೆ ಒಳಗಾಗಿರುವ ಬಾಲಕಿಯನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮಗು ತನ್ನ ಪೋಷಕರೊಂದಿಗೆ ಮನೆಯಲ್ಲಿ ಆರಾಮವಾಗಿದೆ ಎಂದು ಮ್ಯಾಡ್ರಿಡ್‌ನ ಲಾ ಪಾಝ್ ಹಾಸ್ಪಿಟಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಕರುಳನ್ನು ಅಂಗಾಂಗ ದಾನದ ಮೂಲಕ ಪಡೆಯಲಾಗಿತ್ತು. ಈ ರೀತಿಯ ಅಂಗಾಂಗ ದಾನದಿಂದಾಗಿ ಯಶಸ್ವಿಯಾಗಿ ಕಸಿ ಮಾಡಬಹುದು. ಇದರಿಂದ ಅಂಗಾಂಗಗಳು ನಿರುಪಯುಕ್ತವಾಗಿ ಹಾಳಾಗವುದನ್ನು ತಡೆಯಬಹುದು ಎಂದು ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕರುಳು ಕಸಿಗೆ ಈಗ ಬಳಸಲಾಗಿರುವ ತಂತ್ರವನ್ನು ಈ ಹಿಂದೆಯೂ ಬಳಸಲಾಗುತ್ತಿತ್ತು. ಆದರೆ, ಅದು ಹೆಚ್ಚು ಉಪಯೋಗಕಾರಿಯಲ್ಲ ಎಂದು ನಿರ್ಧರಿಸಲಾಗಿತ್ತು. ಕರುಳು ಕಸಿಗೆ ವೇಟಿಂಗ್ ಲಿಸ್ಟ್‌ನಲ್ಲಿರುವ ಶೇ.30ರಷ್ಟು ಜನರು ಪ್ರಾಣವನ್ನು ಕಳೆದುಕೊಂಡಿದ್ದಾಗ್ಯೂ, ಈ ತಂತ್ರ ಉಪಯೋಗಕಾರಿಯಲ್ಲ ಎಂದು ಭಾವಿಸಲಾಗಿತ್ತು. ಕರುಳು ದುಗ್ಧಗ್ರಂಥಿಗೆ ಸಂಬಂಧಿಸಿದ ಅಂಗವಾಗಿದ್ದು, ವ್ಯಕ್ತಿಯ ಪ್ರತಿಕಾಯ ರಕ್ಷಣಾ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಅಂದರೆ, ದೇಹದ ಹೊರಗಿನ ಅಂಗವನ್ನು ತಿರಸ್ಕರಿಸುವ ಮತ್ತು ಸೋಂಕುಗೀಡಾಗುವ ಅಪಾಯವೇ ಹೆಚ್ಚಿರುತ್ತದೆ ಎಂದು ಆಸ್ಪತ್ರೆ ಹೇಳಿದೆ.
ಕರುಳು ಕಸಿಯಂಥ ಕ್ಲಿಷ್ಟಕರ ಆಪರೇಷನ್ ಸಾಧ್ಯ ಎಂಬುದನ್ನು ಸಾಬೀತುಪಡಿಸಲು ನಮ್ಮ ಆಸ್ಪತ್ರೆಯಲ್ಲಿ ಸತತ ಮೂರು ವರ್ಷಗಳ ಸಂಶೋಧನೆ ಮತ್ತು ಅನೇಕ ತಂಡಗಳಿಂದ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಲಾಗಿದೆ. ಅಂಗಾಂಗ ಕೃಷಿಯಲ್ಲಿ ಸ್ಪೇನ್ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ರಾಷ್ಟ್ರವಾಗಿದೆ. 2021ರ ಅಂಕಿ ಸಂಖ್ಯೆಗಳ ಪ್ರಕಾರ ಒಟ್ಟು ಅಂಗಾಂಗ ದಾನದಲ್ಲಿ ಸ್ಪೇನ್ ಪಾಲು ಶೇ.5ರಷ್ಟಿದೆ.
ಇದನ್ನೂ ಓದಿ | Organ donation | ಮೆದುಳು ನಿಷ್ಕ್ರಿಯ: ಮಹಿಳೆಯ ಅಂಗಾಂಗ ದಾನದಿಂದ 8 ಜನರಿಗೆ ಜೀವ ದಾನ