ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್‌ನಲ್ಲಿರುವ ಹೇರ್‌ಕಟ್‌ಗಳು ಸದ್ಯದಲ್ಲೆ ಸೈಡಿಗೆ ಸರಿಯಲಿದ್ದು, 2024ರಲ್ಲಿ (2024 Haircut trend) ಒಂದಿಷ್ಟು ಚಿತ್ರ-ವಿಚಿತ್ರ ಹೇರ್‌ಕಟ್ ವಿನ್ಯಾಸಗಳು ಹುಡುಗಿಯರನ್ನು ಆಕರ್ಷಿಸಲಿವೆ. ವಿದೇಶಿ ಕಾನ್ಸೆಪ್ಟ್ ಒಳಗೊಂಡ ಈ ವಿನ್ಯಾಸಗಳು ದೇಸಿ ಮಾಡರ್ನ್ ಹುಡುಗಿಯರನ್ನು ಆವರಿಸಿಕೊಳ್ಳಲಿವೆ ಎನ್ನುತ್ತಾರೆ ಹೇರ್ ಸ್ಪೆಷಲಿಸ್ಟ್‌ಗಳು.
ಚಿತ್ರ-ವಿಚಿತ್ರ ಹೇರ್‌ಕಟ್‌ಗಳಿವು
“ವಿದೇಶಿ ಹೇರ್‌ಕಟ್‌ಗಳಲ್ಲಿ ಕೊರಿಯನ್ ಹೇರ್‌ಕಟ್‌ಗಳು ಅದರಲ್ಲೂ ಬಿಟಿಎಸ್ ಪಾಪ್‌ಸ್ಟಾರ್‌ಗಳ ಸ್ಟೈಲ್‌ಗಳು ಅತಿ ಹೆಚ್ಚಾಗಿ ಸೆಳೆಯುತ್ತಿವೆ. ಅವುಗಳಲ್ಲಿ ಸಾಕಷ್ಟು ಈಗಾಗಲೇ ಇಲ್ಲಿನ ಲೋಕಲ್ ಬ್ರಾಂಡ್ ಹಾಗೂ ಸಲೂನ್‌ಗಳಲ್ಲಿ, ಬ್ಯೂಟಿ ಪಾರ್ಲರ್‌ಗಳಲ್ಲಿ ಹೇರ್‌ಸ್ಟೈಲ್ ಲಿಸ್ಟ್‌ನಲ್ಲಿ ಸೇರಿವೆ. ಪರಿಣಾಮ, ಈ ಸಾಲಿನಲ್ಲಿ, ಇವುಗಳು ಜೆನ್ ಜಿ ಹುಡುಗಿಯರನ್ನು ಆವರಿಸಿಕೊಳ್ಳಬಹುದು. ಚಿತ್ರ-ವಿಚಿತ್ರವಾಗಿ ಕಂಡರೂ ಫ್ಯಾಷೆನಬಲ್ ಲುಕ್ ನೀಡುವ ಈ ಕೂದಲ ವಿನ್ಯಾಸಗಳು ಟ್ರೆಂಡಿಯಾಗುವ ಲಕ್ಷಣಗಳು ಸೂಚಿಸುತ್ತಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ರಿಚಾ ಶರ್ಮಾ. ಅವರ ಪ್ರಕಾರ, ಮೊದಲಿಗೆ ಇವನ್ನು ನೋಡಿದಾಗ ಚಿತ್ರ-ವಿಚಿತ್ರ ಕಟ್ ಎಂದೆನಿಸಿದರೂ ಟ್ರೆಂಡಿಯಾದ ನಂತರ ಸ್ಪೆಷಲ್ ಎಂದೆನಿಸಬಹುದು ಎನ್ನುತ್ತಾರೆ.
ಟ್ರೆಂಡಿಯಾಗಬಹುದಾದ ಹುಡುಗಿಯರ ಹೇರ್‌ಕಟ್‌ಗಳು
ವೂಲ್ಫ್ ಕಟ್, ಬಾಕ್ಸ್ ಲೇಯರ್ಸ್, ಸಾಫ್ಟ್ ಬಾಬ್, ಕ್ರಾಪ್ಡ್ ಪಿಕ್ಸಿಕ್, ಬಟರ್‌ಫ್ಲೈ ಕಟ್, ಗ್ಯಾಲಕ್ಸಿ ಹೇರ್‌ಸ್ಟೈಲ್, ಲಾಂಗ್ ಕರ್ರ್ವ ಕಟ್ಸ್, ಚಿನ್ ಲಾಂಗ್ ಬಾಬ್, ಬೇಬಿ ಬ್ಯಾಂಗ್ಸ್, ಕಾಲರ್ ಬೋನ್ ಲೊಬ್, ಸ್ವಿಗ್ಗಿ ಬಾಬ್ಸ್, ಕರ್ಟನ್ ಬ್ಯಾಂಗ್ಸ್, ಬಿರ್ಕಿನ್ ಬ್ಯಾಂಗ್ಸ್, ಪಿಕ್ಸಿ ಕಟ್ಸ್ 2024ರ ಸಾಲಿನಲ್ಲಿ ಟ್ರೆಂಡ್ ಲಿಸ್ಟ್‌ನಲ್ಲಿ ಈಗಾಗಲೇ ಇಣುಕಿದ್ದು, ಸೀಸನ್‌ಗೆ ತಕ್ಕಂತೆ ಎಂಟ್ರಿ ನೀಡಲಿವೆ ಎನ್ನುತ್ತಾರೆ ಹೇರ್ ಸ್ಪೆಷಲಿಸ್ಟ್ ಜಿನತ್ ಖಾನ್.
ಬಿಂದಾಸ್ ಹುಡುಗಿಯರ ಚಾಯ್ಸ್
ಅಲ್ಟ್ರಾ ಮಾಡರ್ನ್ ಹುಡುಗಿಯರು ಸದಾ ಒಂದಲ್ಲ ಒಂದು ಹೇರ್ ಕಟ್ ಟ್ರೈ ಮಾಡುತ್ತಲೇ ಇರುತ್ತಾರೆ. ಕನಿಷ್ಠ ಪಕ್ಷ 3 ತಿಂಗಳಿಗೊಮ್ಮೆಯಾದರೂ ಹೇರ್‌ಕಟ್ ಬದಲಿಸುತ್ತಾರೆ. ಅದರಲ್ಲೂ ಮೆಸ್ಸಿ ಹೇರ್‌ಕಟ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಕೆದರಿದಂತೆ ಕಾಣುವ ನ್ಯಾಚುರಲ್ ಲುಕ್ ನೀಡುವಂತಹ ಈ ಹೇರ್‌ಕಟ್‌ಗಳನ್ನು ಆಯ್ಕೆ ಮಾಡುತ್ತಾರೆ. ಇದು ಈ ಜೆನ್ ಜಿ ಹುಡುಗಿಯರ ಚಾಯ್ಸ್ ಮಾತ್ರವಲ್ಲ, ಹೈ ಫ್ಯಾಷನ್ ಫಾಲೋ ಮಾಡುವ ಯುವತಿಯರದ್ದು ಕೂಡ ಎನ್ನುತ್ತಾರೆ ಹೇರ್ ಡಿಸೈನರ್ ರಾಂಕೂ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New Year Fashion 2024 : ಈ ವರ್ಷ ಟ್ರೆಂಡಿಯಾಗಲಿರುವ ವೆಸ್ಟರ್ನ್ ವೇರ್ಸ್ ಡಿಟೇಲ್ಸ್ ಇಲ್ಲಿದೆ!