-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್‌ನಲ್ಲಿ ಆಕರ್ಷಕವಾಗಿ ಕಾಣಲು ಸದಾ ಫ್ರೀ ಹೇರ್ ಸ್ಟೈಲ್ ಮಾಡಬೇಕಾಗಿಲ್ಲ. ಫ್ರೆಂಚ್ ಫ್ಲಾಟ್, ಫಿಶ್ ಬ್ರೈಡ್ ಹಾಗೂ ಹಾಫ್ ಹನ್‌ನಂತಹ 3 ಸಿಂಪಲ್ ಹೇರ್‌ಸ್ಟೈಲ್‌ಗಳನ್ನು (Winter Hair styles) ಮಾಡಿದರೇ ಸಾಕು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ಗಳು. ಅವರ ಪ್ರಕಾರ, ವಿಂಟರ್ ಸೀಸನ್‌ಗೆ ತಕ್ಕಂತೆ ಹೇರ್‌ಸ್ಟೈಲ್‌ಗಳು ಕೂಡ ಬದಲಾಗುತ್ತವೆ. ಹಾಗಾಗಿ ಈ ಸೀಸನ್‌ನಲ್ಲಿ ಯುವತಿಯರು ಆದಷ್ಟೂ ಫ್ರೀ ಹೇರ್ ಸ್ಟೈಲಿಂಗ್‌ಗಿಂತ ಗಾಳಿಯಲ್ಲಿ ಹಾರಾಡದೇ ಒಂದೆಡೆ ಹಿಡಿದಿಡುವಂತಹ ಹೇರ್‌ಸ್ಟೈಲ್‌ಗಳಿಗೆ ಪ್ರಾಮುಖ್ಯತೆ ನೀಡಬೇಕು ಎನ್ನುತ್ತಾರೆ. ಈ ಚಳಿಗಾಲದಲ್ಲಿ ಕೂದಲಿಗೆ ಯಾವುದೇ ಬಗೆಯ ಹೇರ್‌ಸ್ಟೈಲ್ ಮಾಡಿದರೂ ಒಣಗಿದಂತೆ ನಿಸ್ತೇಜವಾಗಿ ಪೊರಕೆಯಂತೆ ಕಾಣಬಹುದು. ಇದಕ್ಕಾಗಿ ನೀವು ಕೂದಲ ಆರೈಕೆಯೊಂದಿಗೆ ಕೂದಲ ಸಿಂಪಲ್ ವಿನ್ಯಾಸಕ್ಕೂ ಗಮನ ನೀಡುವುದು ಮುಖ್ಯ ಎನ್ನುತ್ತಾರೆ ಹೇರ್ ಸ್ಟೈಲ್ ಎಕ್ಸ್ಪರ್ಟ್ಗಳು.
ಫ್ರೆಂಚ್ ಫ್ಲಾಟ್ ಜಡೆ
ನೋಡಲು ಆಕರ್ಷಕವಾಗಿ ಕಾಣುವ ಫ್ರೆಂಚ್ ಫ್ಲಾಟ್ ಹೇರ್‌ಸ್ಟೈಲ್ ಮಾಡರ್ನ್ ಆಗಿಯೂ ಕಾಣುತ್ತದೆ. ನೆತ್ತಿಯ ಮೇಲಿನಿಂದ ಹೆಣೆದಾಗ ಡಿಫರೆಂಟ್ ಲುಕ್ ನೀಡುತ್ತದೆ. ಇದನ್ನು ಲೂಸಾಗಿ ಹೆಣೆದರೇ ಹೇರ್ ಆಕ್ಸೆಸರೀಸ್‌ನಿಂದ ಸಿಂಗರಿಸಿಕೊಳ್ಳಬಹುದು. ನಾನಾ ಬಗೆಯಲ್ಲಿ ಹೆಣೆಯಬಹುದು.
ಫಿಶ್‌ಟೇಲ್ ಬ್ರೈಡ್
ತಕ್ಷಣಕ್ಕೆ ನೋಡಲು ಫ್ರೆಂಚ್ ಫ್ಲಾಟ್‌ನಂತೆ ಕಂಡರೂ ಇದು ಅದಲ್ಲ! ಚಿಕ್ಕ ಕೂದಲಿಗೂ ಫಿಶ್ ಟೇಲ್ ವಿನ್ಯಾಸ ಮಾಡಬಹುದು. ಇದು ಪಾರ್ಟಿಗಳಿಗೆ ಈ ಹೇರ್‌ಸ್ಟೈಲ್ ಆಕರ್ಷಕವಾಗಿ ಕಾಣುತ್ತದೆ. ಲೂಸಾಗಿ ಹೆಣೆಯಲಾಗುವ ಜಡೆಯಿದು. ಪರ್ಲ್ ಹೇರ್ ಆಕ್ಸೆಸರೀಸ್‌ನಿಂದ ಸಿಂಗರಿಸಬಹುದು.
ಹಾಫ್ ಹನ್ ಹೇರ್‌ಸ್ಟೈಲ್
ನಿಮಗೆ ಕೂದಲಿಗೆ ಜಡೆ ಹಾಕಲು ಇಷ್ಟವಿಲ್ಲದಿದ್ದಲ್ಲಿ ಈ ಹೇರ್‌ಸ್ಟೈಲ್ ಮಾಡಬಹುದು. ಅರ್ಧ ಕೂದಲನ್ನು ಫ್ರೀಯಾಗಿ ಬಿಟ್ಟು, ಇನ್ನುಳಿದ ಕೂದಲನ್ನು ನೆತ್ತಿ ಮೇಲೆ ತುರಬಿನಂತೆ ಕಟ್ಟಿ ವಿನ್ಯಾಸಗೊಳಿಸಿದಾರಾಯಿತು. ಇದು ಸೆಲೆಬ್ರೆಟಿಗಳ ನೆಚ್ಚಿನ ಹೇರ್‌ಸ್ಟೈಲ್. ನೋಡಲು ನಮ್ಮಲ್ಲಿ ಮಕ್ಕಳಿಗೆ ಹಾಕುವ ಕೃಷ್ಣನ ಜುಟ್ಟಿನಂತೆ ಕಾಣುತ್ತದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್ ರಿಯಾ.
ಇದನ್ನೂ ಓದಿ : Winter Headache: ಚಳಿಗಾಲದ ತಲೆನೋವಿಗೆ ಇಲ್ಲಿವೆ ಒಂಭತ್ತು ಸರಳ ಉಪಾಯಗಳು!
ವಿಂಟರ್ ಹೇರ್‌ಸ್ಟೈಲಿಂಗ್‌ಗೆ 5 ಟಿಪ್ಸ್
- · ಈ ಸೀಸನ್‌ನಲ್ಲಿ ಹೇರ್ ಡ್ರೈಯರ್ ಹೆಚ್ಚು ಬಳಸಬೇಡಿ.
- · ಒದ್ದೆ ಕೂದಲಿಗೆ ಯಾವತ್ತೂ ವಿನ್ಯಾಸ ಮಾಡಬೇಡಿ.
- · ಗಾಳಿಯಲ್ಲಿ ಕೂದಲನ್ನು ಫ್ರಿಯಾಗಿ ಬಿಡಬೇಡಿ.
- · ಒಣಗಿದಂತೆ ಆದಾಗ ಎಣ್ಣೆ ಹಚ್ಚಿ ಮಸಾಜ್ ಮಾಡಿ.
- · ಕೂದಲನ್ನು ವಾಶ್ ಮಾಡುವಾಗ ಕಂಡೀಷನರ್ ಬಳಸಿ.