Site icon Vistara News

Kids Stockings Styling: ಹೆಣ್ಣು ಮಕ್ಕಳ ಕ್ಯೂಟ್‌ ಸ್ಟಾಕಿಂಗ್ಸ್ ಆಯ್ಕೆಗೆ 3 ಸಿಂಪಲ್‌ ಟಿಪ್ಸ್

Kids Stockings Styling

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಮಕ್ಕಳ ಹೈ ಫ್ಯಾಷನ್‌ಗೆ ಮ್ಯಾಚ್‌ ಆಗುವಂತಹ ವೆರೈಟಿ ಸ್ಟಾಕಿಂಗ್ಸ್ (Kids Stockings Styling) ಎಂಟ್ರಿ ನೀಡಿವೆ. ಅದರಲ್ಲೂ ಹೆಣ್ಣು ಮಕ್ಕಳಿಗಾಗಿ ನಾನಾ ಬಗೆಯ ಕ್ಯೂಟ್‌ ವಿನ್ಯಾಸದವು ಬಂದಿವೆ. “ಎಂದಿನಂತೆ ಈ ವಿಂಟರ್‌ ಸೀಸನ್‌ನಲ್ಲಿ ಕಿಡ್ಸ್ ಸ್ಟಾಕಿಂಗ್ಸ್ ಆಗಮಿಸಿದ್ದು, ಮಕ್ಕಳಿಗೆ ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಷ್ಟೇ ಕ್ಯೂಟ್‌ ಆಗಿ ಕಾಣಿಸಲು ಸಾಧ್ಯ” ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್‌.

ಮಿನಿ ಫ್ರಾಕ್‌ ಜೊತೆ ನೈಲಾನ್‌ ಸ್ಟಾಕಿಂಗ್ಸ್‌

ಚಳಿಗಾಲದಲ್ಲಿ ಮಕ್ಕಳು ಮಿನಿ ಫ್ರಾಕ್‌ ಅಥವಾ ಮಿಡಿ –ಸ್ಕರ್ಟ್ ಜೊತೆ ನೈಲಾನ್‌ ಸ್ಟಾಕಿಂಗ್ಸ್‌ ಧರಿಸಬಹುದು. ಇವು ಯಾವ ಮಟ್ಟಿಗೆ ಟ್ರೆಂಡಿಯಾಗಿವೆ ಎಂದರೇ ಇವುಗಳಲ್ಲಿ ನಾನಾ ಕಲರ್ಸ್‌ ಹಾಗೂ ವೆರೈಟಿ ದೊರೆಯುತ್ತಿವೆ. ಮಕ್ಕಳಿಗಾದಲ್ಲಿ ಕಲರ್‌ಫುಲ್‌ ವರ್ಣಗಳಲ್ಲಿ ಲಭ್ಯವಿರುವ ಈ ಸ್ಟಾಕಿಂಗ್ಸ್‌ ಆಯ್ಕೆ ಮಾಡಬಹುದು.

ಬರ್ತ್ ಡೇ ಪಾರ್ಟಿ/ ಇವೆಂಟ್‌ಗಳಿಗೆ ಫಿಶ್‌ನೆಟ್‌ ಸ್ಟಾಕಿಂಗ್ಸ್

ಮಕ್ಕಳ ಬರ್ತ್ ಡೇ ಹಾಗೂ ಕಿಡ್ಸ್ ಇವೆಂಟ್‌ಗಳಲ್ಲಿ ಮಕ್ಕಳಿಗೆ ಡೈಮಂಡ್‌ ಶೇಪ್‌ನಲ್ಲಿರುವ ಫಿಶ್‌ನೆಟ್‌ ಸ್ಟಾಕಿಂಗ್ಸ್ ಆಯ್ಕೆ ಮಾಡಬಹುದು. ಇವನ್ನು ಹೆಚ್ಚಾಗಿ ಕಾರ್ಸೆಟ್‌ ಶೈಲಿಯ ಫ್ರಾಕ್‌ಗೆ ಧರಿಸಬಹುದು. ಇವು ಕೂಡ ನೋಡಲು ಕ್ಯೂಟ್‌ ಆಗಿ ಕಾಣಿಸುತ್ತವೆ. ಕಾಂಟ್ರಾಸ್ಟ್ ಔಟ್‌ಫಿಟ್‌ಗೂ ಧರಿಸಬಹುದು. ಮಿಕ್ಸ್ ಮ್ಯಾಚ್‌ ಕೂಡ ಮಾಡಬಹುದು.

ಬಾರ್ಬಿ ಲುಕ್‌ ನೀಡುವ ಪಿಂಕ್‌ ಶೀರ್‌ ಸ್ಟಾಕಿಂಗ್ಸ್

ಹೆಣ್ಣು ಮಕ್ಕಳಿಗೆ ಬಾರ್ಬಿ ಲುಕ್‌ ನೀಡುವ ಕಲರ್‌ಫುಲ್‌ ಶೀರ್‌ ಶೈಲಿಯ ಸ್ಟಾಕಿಂಗ್ಸ್‌ ಇದೀಗ ಟ್ರೆಂಡಿಯಾಗಿವೆ. ಇವು ಮಕ್ಕಳ ಪಿಂಕ್‌ ಗೌನ್‌ನೊಂದಿಗೆ ಧರಿಸಬಹುದು. ಕ್ಯಾಂಡಿ ಪಿಂಕ್‌, ಲೈಟ್‌ ಗುಲಾಬಿ, ಪೌಡರ್‌ ಪಿಂಕ್‌, ತಿಳಿ ಗುಲಾಬಿ, ಮೆಜೆಂತಾ ಪಿಂಕ್‌ ಶೇಡ್‌ಗಳಲ್ಲಿನ ಶೀರ್‌ ಸ್ಟಾಕಿಂಗ್ಸ್ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಗುಲಾಬಿ ವರ್ಣದ ಬರ್ತ್ ಡೇ ಉಡುಪಿನೊಂದಿಗೆ ಇವನ್ನು ಧರಿಸುವುದು ಮ್ಯಾಚಿಂಗ್‌ ಮಾಡುವುದು ಮಾತ್ರವಲ್ಲ, ಬಾರ್ಬಿ ಕಂಪ್ಲೀಟ್‌ ಲುಕ್‌ಗೆ ಸಾಥ್ ನೀಡುತ್ತಿದೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.

ಕಿಡ್ಸ್ ಸ್ಟಾಕಿಂಗ್ಸ್ ಚಾಯ್ಸ್‌ಗೆ ಟಿಪ್ಸ್

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Fashion: ವಿಂಟರ್‌ ಫ್ಯಾಷನ್‌ಗೆ ಮರಳಿದ ಆಕರ್ಷಕ ವುಲ್ಲನ್‌ ಪೊಂಚೊ

Exit mobile version