ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ವೆಡ್ಡಿಂಗ್ ಸೀಸನ್‌ನಲ್ಲಿ (Wedding Fashion) ಧರಿಸಿರುವ ಗ್ರ್ಯಾಂಡ್ ಔಟ್‌ಫಿಟ್ ಹಾಗೂ ಸೀರೆಗೆ ಸಾಥ್ ನೀಡುವ ಎಥ್ನಿಕ್ ಲುಕ್ ಇರುವಂತಹ ಪರ್ಸ್‌ಗಳು ಆಗಮಿಸಿದ್ದು, ಅವುಗಳಲ್ಲಿ 3 ಶೈಲಿಯ ಪರ್ಸ್ ಹಾಗೂ ಕ್ಲಚ್‌ಗಳು ಟ್ರೆಂಡಿಯಾಗಿವೆ.
“ಇತ್ತೀಚೆಗೆ ಮದುವೆಯಲ್ಲಿ ಭಾಗವಹಿಸುವವರು ಟ್ರೆಂಡಿ ಗ್ರ್ಯಾಂಡ್ ಲುಕ್ ಇರುವಂತಹ ಪರ್ಸ್‌ಗಳನ್ನು ಬಳಸುತ್ತಾರೆ. ಒಂದು ಮೊಬೈಲ್ ಇಡುವುದರೊಂದಿಗೆ ಒಂದಿಷ್ಟು ಜಾಗ ಇರುವಂತಹ ಮಿನಿ ಬ್ಯಾಗ್‌ನಂತವು ಇಲ್ಲವಾದಲ್ಲಿ ಕ್ಲಚ್‌ನಂತವನ್ನು ಕ್ಯಾರಿ ಮಾಡುತ್ತಾರೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣುತ್ತವೆ. ಇನ್ನು ಇಡೀ ಲುಕ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ನಲ್ಲಿ ದೊರಕುತ್ತವೆ. ಇವುಗಳನ್ನು ವೆಡ್ಡಿಂಗ್ ಕ್ಲಚ್ ಅಥವಾ ಪರ್ಸ್ ಎನ್ನಲಾಗುತ್ತದೆ. ಹುಡುಗಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರು ಇವನ್ನು ಬಳಸತೊಡಗಿದ್ದಾರೆ. ಸದ್ಯ ಈ ಸೀಸನ್‌ನ ಟ್ರೆಂಡ್‌ನಲ್ಲಿದೆ ಎನ್ನಬಹುದು” ಎನ್ನುತ್ತಾರೆ ಸ್ಟೈಲಿಸ್ಟ್ ಜೀವಿತಾ. ಅವರ ಪ್ರಕಾರ, ನೋಡಲು ಆಕರ್ಷಕವಾದ ಊಹೆಗೂ ಮೀರಿದ ಡಿಸೈನ್‌ನವಲ್ಲಿ ಇವು ದೊರಕುತ್ತವೆ.
ಸ್ಟೋನ್ಸ್ ಡಿಸೈನ್‌ನ ಪರ್ಸ್
ಇಡೀ ಪರ್ಸ್ ಚಿಕ್ಕ ಚಿಕ್ಕ ಸ್ಟೋನ್ಸ್ ವಿನ್ಯಾಸದಿಂದ ಕೂಡಿರುತ್ತವೆ. ಇದು ಈ ಸೀಸನ್‌ನಲ್ಲಿ ಅತ್ಯಂತ ಪ್ರಚಲಿತದಲ್ಲಿದೆ ಹಾಗೂ ಹೆಚ್ಚು ಪಾಪುಲರ್ ಕೂಡ ಆಗಿದೆ. ಕೊಂಚ ದುಬಾರಿಯಾದರೂ ಈ ಸ್ಟೂನ್ಸ್ ಪರ್ಸ್ ಹಾಗೂ ಕ್ಲಚ್‌ಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ರಫ್ ಬಳಕೆ ಮಾಡಲು ಸಾಧ್ಯವಿಲ್ಲ. ಇದೀಗ ಕೇವಲ ವೈಟ್ ಸ್ಟೋನ್ ಮಾತ್ರವಲ್ಲ, ನಾನಾ ಕಲರ್‌ಗಳವು ದೊರೆಯುತ್ತವೆ. ಔಟ್‌ಫಿಟ್‌ಗೆ ತಕ್ಕಂತೆ ಮ್ಯಾಚ್ ಮಾಡಬಹುದು.
ಥ್ರೆಡ್ ವರ್ಕ್ ಪರ್ಸ್
ಗೋಲ್ಡನ್ ಅಥವಾ ಸಿಲ್ವರ್ ಥ್ರೆಡ್ ವರ್ಕ್ ಮಾಡಿರುವಂತಹ ಸಿಲ್ಕ್ ಕ್ಲಾತ್‌ನ ಬಾಕ್ಸ್ ಪರ್ಸ್‌ಗಳು ಕೂಡ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಕೆಲವಕ್ಕೆ ಚೈನ್ ಕೂಡ ಇರುತ್ತದೆ. ತೂಗು ಹಾಕಿಕೊಳ್ಳಬಹುದು ಅಥವಾ ಕೈಗಳಲ್ಲೂ ಹಿಡಿಯಬಹುದು. ಇವು ಊಹೆಗೂ ಮೀರಿದ ಕಲರ್‌ನಲ್ಲಿ ದೊರೆಯುತ್ತವೆ. ನೋಡಲು ಉಡುಪಿನ ಮೇಲೆ ಮಾಡಿದಂತಹ ಥ್ರೆಡ್ ವರ್ಕ್‌ನಂತೆಯೇ ಕಾಣುತ್ತವೆ.
ಜರ್ದೋಸಿ ವರ್ಕ್ ಪರ್ಸ್
ನೋಡಲು ಆಕರ್ಷಕ ಹ್ಯಾಂಡ್‌ಮೇಡ್‌ನ ಜರ್ದೋಸಿ ವರ್ಕ್ ಇರುವಂತಹ ಈ ಪರ್ಸ್‌ಗಳು ನಾನಾ ಶೇಡ್‌ನಲ್ಲಿ ದೊರೆಯುತ್ತವೆ. ಇವುಗಳನ್ನು ಕೂಡ ಔಟ್‌ಫಿಟ್‌ಗೆ ತಕ್ಕಂತೆ ಮ್ಯಾಚ್ ಮಾಡಬಹುದು.
ಗ್ರ್ಯಾಂಡ್ ಪರ್ಸ್ ಪ್ರಿಯರು ಗಮನಿಸಬೇಕಾದ್ದು
- ಸಮಾರಂಭಗಳಿಗೆ ಮಾತ್ರ ಬಳಸಿ.
- ಬಳಸಿದ ನಂತರ ಪ್ರತ್ಯೇಕವಾಗಿ ತೆಗೆದಿರಿಸಿ.
- ಸ್ಟೋನ್ ಪರ್ಸ್ ಎಲ್ಲಾ ಬಗೆಯ ಔಟ್ಫಿಟ್ಗಳಿಗೆ ಮ್ಯಾಚ್ ಆಗುತ್ತವೆ.
- ಬ್ರೈಡಲ್ ಡಿಸೈನ್ನವು ಕೊಂಚ ದುಬಾರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ವಿಂಟರ್‌ನಲ್ಲೂ ವಿಂಟೇಜ್ ಫ್ಯಾಷನ್‌ಗೆ ಮಾಡೆಲ್ ವಿಭಾ ಸಿಂಹ ಆದ್ಯತೆ