ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಮಫ್ಲರನ್ನು ವೈವಿದ್ಯಮಯವಾಗಿ ಧರಿಸಿ ಸ್ಟೈಲಿಶ್ (winter Muffler styling) ಆಗಿ ಕಾಣಿಸಬಹುದು. ಅದನ್ನು ಧರಿಸುವ ಶೈಲಿ ಆಗಾಗ್ಗೆ ಬದಲಿಸಿದಾಗ ಸದಾ ಒಂದೇ ರೀತಿ ಕಾಣಿಸುವುದಿಲ್ಲ. ಮಫ್ಲರ್ ಒಂದೇ ಆದರೂ ನಾನಾ ಬಗೆಯಲ್ಲಿ ಸ್ಟೈಲಿಂಗ್ ಮಾಡಬಹುದು. ಫ್ಯಾಷೆನಬಲ್ ಆಗಿಯೂ ಕಾಣಿಸಬಹುದು. ಇದಕ್ಕಾಗಿ ಧರಿಸುವ ಡ್ರೆಸ್‌ಕೋಡ್‌ಗೆ ತಕ್ಕಂತೆ ಸ್ಟೈಲಿಂಗ್‌ನಲ್ಲಿ ಒಂದಿಷ್ಟು ಬದಲಾವಣೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಡಿಸೈನರ್ಸ್.
ಮಫ್ಲರ್ ಸ್ಟೈಲಿಂಗ್ ಜಾದೂ
“ಫೇಕ್ ಫರ್, ಸಾಫ್ಟ್ ಸ್ಯಾಟೀನ್, ದಪ್ಪನೆ ಮೇಟಿರಿಯಲ್‌ನ ಕೌದಿಯಂತಹ ಫ್ಯಾಬ್ರಿಕ್‌ನ ಮಫ್ಲರ್, ಉಲ್ಲನ್‌ನ ಮಫ್ಲರ್‌ಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿದ್ದು, ಸಂಜೆ ವೇಳೆ ಔಟಿಂಗ್ ಅಥವಾ ಹೊರ ಹೋಗುವಂತಹ ಯುವತಿಯರು ಇವುಗಳನ್ನು ಧರಿಸುವುದು ಹೆಚ್ಚಾಗಿದೆ. ಇನ್ನು ಜೆಂಟ್ಸ್ ಅದರಲ್ಲೂ ಮಧ್ಯ ವಯಸ್ಕರು ಮಫ್ಲರ್ ಧರಿಸಿದರೂ ಅದನ್ನು ಸ್ಟೈಲಿಶ್ ಆಗಿ ಹಾಕಿಕೊಳ್ಳುವುದು ಕಡಿಮೆ. ಕಾಲೇಜು ಯುವಕರು ಕೊಂಚ ಸ್ಟೈಲಿಶ್ ಆಗಿ ಧರಿಸುತ್ತಾರೆ. ಇತ್ತೀಚೆಗಂತೂ ಬ್ಯೂಟಿ ಬ್ಲಾಗ್ ಹಾಗೂ ಯೂ ಟ್ಯೂಬ್‌ಗಳಲ್ಲಿ ಇವುಗಳನ್ನು ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತೋರಿಸುತ್ತಾರೆ. ಇವು ಕೂಡ ಮಫ್ಲರ್ ಧರಿಸುವವರಿಗೆ ಸಹಕಾರಿ” ಎನ್ನುತ್ತಾರೆ ಸ್ಟೈಲಿಸ್ಟ್ ಶಿವ. ಅವರ ಪ್ರಕಾರ, ಧರಿಸುವ ಡ್ರೆಸ್‌ಕೋಡ್‌ಗೆ ಇದು ಮ್ಯಾಚ್ ಆಗುವುದು ಅಗತ್ಯ ಎನ್ನುತ್ತಾರೆ.
ಸ್ಟೈಲಿಶ್ ಆಗಿ ಕಾಣಿಸಲು ಮಫ್ಲರ್ ಹೀಗೆ ಧರಿಸಿ
ರೌಂಡ್ ಶೇಪ್
ಕತ್ತಿನ ಸುತ್ತಾ ಒಂದು ರೌಂಡ್ ಸುತ್ತಿ. ಎಡಗಡೆ ಹಾಗೂ ಬಲಗಡೆ ಒಂದೇ ಸಮನಾಗಿ ಬರುವಂತೆ ನೋಡಿಕೊಳ್ಳಿ. ನೆಕ್‌ಲೈನ್ ಅಗಲವಾಗಿರುವ ಡ್ರೆಸ್‌ಗಳಿಗೆ ಇದು ಮ್ಯಾಚ್ ಆಗುತ್ತದೆ.
ಸುತ್ತುವರಿದ ಮಫ್ಲರ್
ಒಂದು ಕಡೆ ಮಫ್ಲರ್ ಯು ಶೇಪ್‌ನಲ್ಲಿ ತೆಗೆದುಕೊಳ್ಳಿ. ಕತ್ತಿನ ಮುಂಭಾಗದಲ್ಲಿ ಅದರ ಹೋಲ್‌ನಲ್ಲಿ ಇನ್ನೊಂದು ತುದಿ ನುಸುಳಿಸಿ. ಇದು ನೋಡಲು ಟೈ ಮಾಡಿದಂತೆ ಕಾಣುತ್ತದೆ.
ಮಫ್ಲರ್ ವ್ರಾಪ್
ರೌಂಡ್ ಶೇಪ್‌ನಲ್ಲಿ ಸುತ್ತಿಕೊಂಡಿರುವ ಮಫ್ಲರ್‌ಗಳು ದೊರೆಯುತ್ತವೆ. ಡಬ್ಬಲ್ ಫೋಲ್ಡ್ ಧರಿಸಬಹುದು. ಇರುವ ಮಫ್ಲರ್ ಅನ್ನು ಇದೇ ರೀತಿಯಲ್ಲಿ ಸುತ್ತಿಕೊಳ್ಳಬಹುದು. ಕೋಟಿನ ಮೇಲೆ ಹಾಕಿದಾಗ ಇದು ಆಕರ್ಷಕವಾಗಿ ಕಾಣುತ್ತದೆ.
ಮಫ್ಲರ್ ಜೊತೆ ಬೆಲ್ಟ್
ಮಫ್ಲರನ್ನು ಇಳೆ ಬಿಟ್ಟು ಅದನ್ನು ಸೇರಿಸಿ ಉಡುಪಿಗೆ ಬೆಲ್ಟ್ ಹಾಕಿದಾಗ ಡಿಫರೆಂಟ್ ಲುಕ್ ನೀಡುವುದು. ಮಫ್ಲರ್ ತೆಳುವಾಗಿರಬೇಕಷ್ಟೇ!
ಟೈ ಶೇಪ್ ಮಫ್ಲರ್
ಮಫ್ಲರನ್ನು ಟೈ ಶೇಪ್‌ನಲ್ಲೂ ಧರಿಸಬಹುದು. ಮಫ್ಲರ್ ಕೊಂಚ ನೋಡಲು ಸ್ಟೋಲ್‌ನಂತಿರಬೇಕು. ಡಬ್ಬಲ್ ಅಥವಾ ಸಿಂಗಲ್ ಟೈ ಮಾಡಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Christmas Kids Fashion: ಈ ಬಾರಿಯ ಕ್ರಿಸ್ಮಸ್ ವೇಳೆ ಮಕ್ಕಳ ಡ್ರೆಸ್ ಟ್ರೆಂಡ್ ಹೀಗಿದೆ!