ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೈವಿಧ್ಯಮಯ ಹೂಡಿಗಳು ವಿಂಟರ್ ಸೀಸನ್‌ನಲ್ಲಿ (Winter Fashion) ಕಾಲೇಜು ಹುಡುಗಿಯರನ್ನೂ ಸವಾರಿ ಮಾಡತೊಡಗಿವೆ. ತಮ್ಮ ಪರ್ಸನಾಲಿಟಿ ಹಾಗೂ ವ್ಯಕ್ತಿತ್ವಕ್ಕೆ ತಕ್ಕಂತೆ ಹೂಡಿಯನ್ನು ಹುಡುಗಿಯರು ಹೇಗೆಲ್ಲಾ ಧರಿಸಬಹುದು. ಇದಕ್ಕಾಗಿ ಯಾವ ಬಗೆಯ ಹೂಡಿಗಳನ್ನು ಆಯ್ಕೆ ಮಾಡಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಸ್ಟೈಲಿಸ್ಟ್‌ಗಳು 5 ಸಿಂಪಲ್ ಟಿಪ್ಸ್ ನೀಡಿದ್ದಾರೆ.
“ಈ ವಿಂಟರ್ ಸೀಸನ್‌ನಲ್ಲಿ ಹೂಡಿ ಫ್ಯಾಷನ್ ಯೂನಿವರ್ಸಲ್ ಸ್ಟೈಲ್ ಸ್ಟೇಟ್‌ಮೆಂಟ್ ಆಗಿದೆ. ಇದಕ್ಕೆ ಪೂರಕ ಎಂಬಂತೆ, ಮಕ್ಕಳಿಂದಿಡಿದು ಯುವಕರು, ಯುವತಿಯರು ಹಾಗೂ ವಯಸ್ಕರು ಕೂಡ ಹೂಡಿ ಧರಿಸಲಾರಂಭಿಸಿದ್ದಾರೆ. ಹಾಗೆಂದು ಎಲ್ಲರೂ ಒಂದೇ ಬಗೆಯ ಹೂಡಿ ಧರಿಸಲು ಸಾಧ್ಯವಿಲ್ಲ! ಯೂನಿಸೆಕ್ಸ್ ಹೂಡಿ ಡಿಸೈನ್‌ಗಳು ಕೆಲವೊಮ್ಮೆ ಹೊಂದದಿರಬಹುದು. ಸೋ, ಹೂಡಿಯನ್ನು ಕೊಳ್ಳುವಾಗ ಹಾಗೂ ಧರಿಸುವಾಗ ಹಾಗೂ ಆಯ್ಕೆ ಮಾಡುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಹುಡುಗಿಯರು ಇದರಲ್ಲೂ ಆಕರ್ಷಕವಾಗಿ ಕಾಣಬಹುದು” ಎನ್ನುತ್ತಾರೆ ಫ್ಯಾಷನಿಸ್ಟ್ ರಿಚಾ ವರ್ಮಾ.
ಕಾಲೇಜು ಹುಡುಗಿಯರ ಹೂಡಿ ಆಯ್ಕೆ ಹೀಗಿರಲಿ
ಕಾಲೇಜು ಹುಡುಗಿಯರು ಹೂಡಿಯನ್ನು ಆಯ್ಕೆ ಮಾಡುವಾಗ, ಆದಷ್ಟೂ ಟ್ರೆಂಡ್‌ಗೆ ತಕ್ಕಂತೆ ಮಾಡಬೇಕು. ಶೇಡ್ ಕೂಡ ಹುಡುಗಿಯರಿಗೆ ಮ್ಯಾಚ್ ಆಗುವಂತಿರಬೇಕು. ಇಲ್ಲವಾದಲ್ಲಿ ಡಲ್ ಆಗಿ ಕಾಣಬಹುದು.
ಯೂನಿಸೆಕ್ಸ್ ವಿನ್ಯಾಸದ ಹೂಡಿಗೆ ನೋ ಹೇಳಿ
ಯೂನಿಸೆಕ್ಸ್ ವಿನ್ಯಾಸದ ಹೂಡಿಗಳು ಒಂದೇ ಪರ್ಸನಾಲಿಟಿ ಇರುವಂತಹ ಹುಡುಗ-ಹುಡುಗಿಯರಿಗೆ ಮಾತ್ರ ಹೊಂದುತ್ತವೆ. ಇಲ್ಲವಾದಲ್ಲಿ ದೊಗಲೆಯಾಗಿ ಫಿಟ್ಟಿಂಗ್ ಇಲ್ಲದೆ ನೋಡಲು ಚೆನ್ನಾಗಿ ಕಾಣದೇ ಹೋಗಬಹುದು.
ಟ್ರಯಲ್ ನೋಡಿ ಖರೀದಿಸಿ
ಅವಕಾಶವಿದ್ದಲ್ಲಿ ಟ್ರಯಲ್ ನೋಡಿ ಖರೀದಿಸಿ. ಯಾಕೆಂದರೇ, ಇವು ನಿಮ್ಮ ಮುಖಕ್ಕೆ ಹೊಂದುತ್ತವೆಯೇ ಎಂಬುದು ಕೂಡ ಮುಖ್ಯವಾಗುತ್ತದೆ.
ಹೂಡಿ ಡ್ರೆಸ್ ಆಯ್ಕೆ
ಉದ್ದನೆಯ ಹೂಡಿಗಳನ್ನು ಹೂಡಿ ಡ್ರೆಸ್ ಎಂದು ಬಿಂಬಿಸಲಾಗುತ್ತದೆ. ಇವನ್ನು ಖರೀದಿಸುವಾಗ ನಿಮ್ಮ ಎತ್ತರ ಹಾಗೂ ಡಿಸೈನ್ ನೋಡಿ ಖರೀದಿಸಿ. ಇದರೊಂದಿಗೆ ಕೇಪ್ರಿಸ್ ಧರಿಸುತ್ತಿರೋ ಅಥವಾ ಹಾಗೆಯೇ ಸಿಂಗಲ್ ಪೀಸ್ ಹಾಕುತ್ತೀರೋ ಎಂಬುದನ್ನು ಮೊದಲೇ ನಿರ್ಧರಿಸಿ.
ಕ್ರಾಪ್ ಹೂಡಿ ರೂಲ್ಸ್
ಕ್ರಾಪ್ ಹೂಡಿಯಾದಲ್ಲಿ ಆದಷ್ಟೂ ಉದ್ದಗಿರುವ ಹುಡುಗಿಯರಿಗೆ ಸೂಕ್ತ. ಧರಿಸಲೇಬೇಕಿದ್ದಲ್ಲಿ ಹೈ ವೇಸ್ಟ್ ಪ್ಯಾಂಟ್ ಇಲ್ಲವೇ ಸೂಕ್ತ ಜೀನ್ಸ್ ಪ್ಯಾಂಟ್ ಆಯ್ಕೆ ಮಾಡಿ, ಧರಿಸಿ.
ಬಬ್ಲಿ ಹುಡುಗಿಯರಿಗೆ ಫಂಕಿ ಹೂಡಿ
ಬಬ್ಲಿ ಕಾಲೇಜು ಹುಡುಗಿಯರು ಫಂಕಿ ಹೂಡಿಯನ್ನು ಧರಿಸಬಹುದು. ಇದು ಅವರಿಗೆ ನೋಡಲು ಟ್ರೆಂಡಿಯಾಗಿ ಬಿಂಬಿಸುತ್ತವೆ. ನಾನಾ ಪ್ರಿಂಟ್ಸ್‌ನವು ಸೀಸನ್‌ನಲ್ಲಿ ಲಭ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಕಡಲೆಕಾಯಿ ಪರಿಷೆಯಲ್ಲಿ ದೇಸಿ ಸೀರೆಯೊಂದಿಗೆ ನಟಿ ತೇಜಸ್ವಿನಿ ಶರ್ಮಾ ಸಂಭ್ರಮ