Site icon Vistara News

Christmas Shopping: ಕ್ರಿಸ್ಮಸ್‌ ಶಾಪಿಂಗ್‌ ಪ್ರಿಯರಿಗೆ 5 ಸಿಂಪಲ್ ಟಿಪ್ಸ್

Christmas Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯಲ್ಲಿ ಇದೀಗ ಎಲ್ಲಿ ನೋಡಿದರೂ ಕ್ರಿಸ್ಮಸ್‌ ಶಾಪಿಂಗ್‌ (Christmas Shopping) ಮೇನಿಯಾ. ಮಾಲ್‌ಗಳಿಂದಿಡಿದು ಸಾಕಷ್ಟು ಪ್ರಮುಖ ಸ್ಟ್ರೀಟ್‌ಗಳಲ್ಲೂ ಶಾಪಿಂಗ್‌ ಮಾಡುವವರು ಕಾಣಸಿಗುತ್ತಿದ್ದಾರೆ. ವೀಕೆಂಡ್‌ನಲ್ಲಿ ಮಾತ್ರವಲ್ಲ, ವಾರದ ದಿನಗಳಲ್ಲೂ ಈ ಕ್ರೇಜ್ ಹೆಚ್ಚಾಗಿದೆ.

“ಕ್ರಿಸ್ಮಸ್‌ ಹಬ್ಬ ಒಂಥರ ಯೂನಿವರ್ಸಲ್‌ ಸೆಲೆಬ್ರೇಷನ್‌ನಂತೆ. ಬಹುತೇಕ ಎಲ್ಲಾ ಸಮುದಾಯದವರು ಆಚರಿಸುತ್ತಾರೆ. ಇಲ್ಲವೇ ಶಾಪಿಂಗ್‌ ಮಾಡುತ್ತಾರೆ. ಈ ದಿನಗಳಲ್ಲಿ ಅಗತ್ಯವಿರುವ ವಸ್ತುಗಳ ಖರೀದಿ ಮಾತ್ರವಲ್ಲ, ಈ ಸೀಸನ್‌ನಲ್ಲಿ ಫೆಸ್ಟೀವ್‌ ಸೀಸನ್‌ ಡಿಸೈನರ್‌ವೇರ್ಸ್ ಹಾಗೂ ಆಕ್ಸೆಸರೀಸ್‌ ಕೊಳ್ಳುವವರು ಹೆಚ್ಚು. ಇನ್ನು ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ವೆಸ್ಟರ್ನ್‌ವೇರ್‌ಗಳು ಕಾಲಿಡುತ್ತವೆ. ಹೋಮ್‌ ಡೆಕೋರೇಟಿವ್‌ ಐಟಂಗಳು ಆಗಮಿಸುತ್ತವೆ. ಹೊಸ ಡಿಸೈನ್‌ನಲ್ಲಿ ದೊರೆಯುತ್ತವೆ. ಹಾಗಾಗಿ ಕೊಳ್ಳುವವರು ಹೆಚ್ಚು” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪಟ್ರ್ಸ್. ಅವರು ಹೇಳುವಂತೆ, ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಾಪಿಂಗ್‌ ಮಾಡುವುದು ಮುಖ್ಯ ಎನ್ನುತ್ತಾರೆ.

ಕ್ರಿಸ್ಮಸ್‌ ಸೇಲ್‌ನಲ್ಲಿ ಖರೀದಿಸಿ

ಈ ಸೀಸನ್‌ನಲ್ಲಿ ಮಾಲ್‌ಗಳಲ್ಲಿ ಕೆಲವು ಶೋ ರೂಮ್‌ಗಳು ಕ್ರಿಸ್ಮಸ್‌ ಸೇಲ್‌ ಕೂಡ ಪ್ರಕಟಿಸುತ್ತವೆ. ಇಂತಹ ಶಾಪ್‌ಗಳಲ್ಲಿ ಟ್ರೆಂಡಿ ಔಟ್‌ಫಿಟ್‌ಗಳು ಅಥವಾ ಡೆಕೋರೇಟಿವ್‌ ಐಟಂಗಳು ಕೊಂಚ ಡಿಸ್ಕೌಂಟ್‌ನಲ್ಲಿ ದೊರೆಯುತ್ತವೆ.

ಡೆಕೋರೇಟಿವ್‌ ಐಟಂಗಳು

ಟ್ರೀ ಬೆಲ್‌, ಟ್ರೀ ಹ್ಯಾಂಗಿಂಗ್ಸ್‌, ಅರ್ನಾಮೆಂಟಲ್‌ ಸ್ಟಾರ್ಸ್‌, ಸ್ನೋ ಮ್ಯಾನ್‌, ಲ್ಯಾಂಟೆರ್ನ್‌, ಶೈನಿಂಗ್‌ ಸ್ಪಾರ್ಕಲ್ಸ್‌ನಲ್ಲಿ ನಾನಾ ಬಗೆಯ ಅಲಂಕಾರಿಕ ವಸ್ತುಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿದ್ದು, ಬಗೆಬಗೆಯ ಲೈಟಿಂಗ್‌ಗಳು ಲಭ್ಯ. ಇವುಗಳ ಖರೀದಿ ಮಾಡುವಾಗ ಟ್ರೆಂಡಿ ಡಿಸೈನ್ಸ್ ಕೊಳ್ಳಿ.

ಟ್ರೆಂಡಿ ಔಟ್‌ಫಿಟ್ಸ್ ಸೆಲೆಕ್ಷನ್‌

ವರ್ಷದ ಕೊನೆಯಲ್ಲಿ ಬರುವ ಕ್ರಿಸ್ಮಸ್‌ ಹಬ್ಬಕ್ಕಾಗಿ ಮಾಡರ್ನ್ ಔಟ್‌ಫಿಟ್‌ಗಳು ಲಗ್ಗೆ ಇಡುತ್ತವೆ. ಈ ಸೀಸನ್‌ನಲ್ಲಿ ನ್ಯೂ ಯಿಯರ್‌ ಕೂಡ ಆಗಮಿಸುವುದರಿಂದ ಫ್ಯಾಷನ್‌ ಪ್ರಿಯರು ಶಾಪಿಂಗ್‌ ಮಾಡಬಹುದು. ಅತ್ಯುತ್ತಮ ಹೊಸ ವಿನ್ಯಾಸದ ಖರೀದಿಗೆ ಅವಕಾಶ ದೊರೆಯುತ್ತದೆ.

ಕ್ರಿಸ್ಮಸ್‌ ಕೊಡುಗೆ ಆಯ್ಕೆ

ಕ್ರಿಸ್ಮಸ್‌ ಗಿಫ್ಟ್‌ಗಳ ಆಯ್ಕೆಯಾದಲ್ಲಿ ಆದಷ್ಟೂ ನೀವು ಕೊಡುಗೆ ನೋಡುತ್ತಿರುವ ವ್ಯಕ್ತಿಯ ಅಭಿರುಚಿ ತಿಳಿದುಕೊಂಡು ನೀಡಿ. ಸುಖಸುಮ್ಮನೆ ಶೋ ಪೀಸ್‌ ನೀಡುವ ಬದಲು ಬಳಸುವಂತಹ ವಸ್ತುಗಳನ್ನು ನೀಡಿ.

ಆನ್‌ಲೈನ್‌ ಶಾಪಿಂಗ್‌ ಸದುಪಯೋಗ

ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವುದಾದಲ್ಲಿ ಆದಷ್ಟೂ ಈಗಲೇ ಆರಂಭಿಸಿ. ಕೊನೆಯ ಕ್ಷಣಗಳಲ್ಲಿ ತಲುಪುವುದು ತಡವಾಗಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Wedding Fashion: ವೆಡ್ಡಿಂಗ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಲೇಯರ್ ಕೋ ಆರ್ಡ್ ಸೂಟ್ !

Exit mobile version