Site icon Vistara News

New Year Fashion 2024: ಹೊಸ ವರ್ಷ ನಿಮ್ಮ ಫ್ಯಾಷನ್‌ ಸ್ಟೈಲ್‌ ಹೀಗಿರಲಿ

New Year Fashion 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ವರ್ಷಕ್ಕೆ (New Year Fashion 2024) ನಯಾ ಲುಕ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳು ಈಗಾಗಲೇ ಆಗಮಿಸಿವೆ. ಧರಿಸುವ ಫ್ಯಾಷನ್‌ವೇರ್‌ ಜತೆಜತೆಗೆ ಹೇಗೆಲ್ಲ ಇತರೆ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಲ್ಲೂ ಬದಲಾವಣೆ ತರಬಹುದು. ಈ ನ್ಯೂಯಿಯರ್‌ಗೆ ನ್ಯೂ ಲುಕ್‌ ತಮ್ಮದಾಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಮಾಹಿತಿ ನೀಡಿದ್ದಾರೆ. ಸಿಂಪಲ್‌ 5 ಡ್ರೆಸ್ಸಿಂಗ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಬದಲಿಸಿಕೊಳ್ಳುವ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.

Crop woman fastening high heeled sandals on city street

ಡ್ರೆಸ್ಸಿಂಗ್‌ ಸೆನ್ಸ್‌ ಬದಲಿಸಿ

ನಿಮ್ಮ ಹಳೆಯ ಲುಕ್‌ಗೆ ವಿರಾಮ ಹಾಕಬೇಕಾಗಿದ್ದಲ್ಲಿ ಮೊದಲು ಡ್ರೆಸ್ಸಿಂಗ್‌ ಸೆನ್ಸ್‌ ಬದಲಿಸಿಕೊಳ್ಳಿ. ಬೇಸಿಗೆ ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಲೆಯರ್‌ ಲುಕ್‌ ಜತೆಗೆ ಮಿಕ್ಸ್‌ ಆ್ಯಂಡ್‌ ಮ್ಯಾಚ್‌ ಡ್ರೆಸ್‌ಗಳನ್ನು ಪ್ರಯೋಗಿಸಬಹುದು. ಟ್ರೆಂಡಿ ಕಲರ್‌ ಕಾಂಬಿನೇಷನ್‌ ಬಗ್ಗೆ ಮೊದಲು ತಿಳಿದುಕೊಳ್ಳಿ. ಆದಷ್ಟು, ಈ ಸೀಸನ್‌ನಲ್ಲಿ ಫಂಕಿ ಕಲರ್‌ಗಳನ್ನು ಬಳಸಿ. ಸದ್ಯಕ್ಕೆ ಟ್ರೆಡಿಸನಲ್‌ ಲುಕ್‌ಗೆ ಬೈ ಹೇಳಿ. ಯಾಕಂದ್ರೆ, ಜನವರಿಯಲ್ಲಿ ಫಂಕಿ ಫ್ಯಾಷನ್‌ಗೆ ಹೆಚ್ಚು ಆದ್ಯತೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಿಚಾ.

ಟ್ರೆಂಡಿ ಆ್ಯಕ್ಸಿಸರೀಸ್‌ ಧರಿಸಿ

ನೀವು ನಿಮ್ಮ ಸ್ಟೈಲ್‌ ಸ್ಟೇಟ್‌ಮೆಂಟ್‌ ಬದಲಿಸುಕೊಳ್ಳವಿರಾದಲ್ಲಿ ಮೊದಲು ಒಂದಿಷ್ಟು ಆ್ಯಕ್ಸಿಸರೀಸ್‌ ಬಗ್ಗೆ ಮೋಹ ಬೆಳೆಸಿಕೊಳ್ಳಿ. ಧರಿಸುವ ಉಡುಪಿಗೆ ಮ್ಯಾಚ್‌ ಆಗುವಂತಹ ಆಭರಣಗಳನ್ನು ಧರಿಸಿ. ಫಂಕಿ ಪ್ರಿಯರಾಗಿದ್ದಲ್ಲಿ, ಇದೀಗ ಲಭ್ಯವಿರುವ ಲೇಯರ್‌ ಲುಕ್‌ ನೀಡುವ ಆಕ್ಸೆಸರೀಸ್‌ ಕೊಳ್ಳಿ. ಫಂಕಿ ಆಭರಣಗಳು ನಿಮ್ಮ ವಧನದ ಲುಕ್‌ ಬದಲಿಸಬಲ್ಲವು ಎನ್ನುತ್ತಾರೆ ಮಾಡೆಲ್‌ ನಿಶಾ.

Crop woman fastening high heeled sandals on city street

ಬದಲಾದ ಮೇಕಪ್‌ ಜಾದೂ

ಸದಾ ಒಂದೇ ಬಗೆಯ ಮೇಕಪ್‌ನಿಂದ ಬೋರಾಗಿದ್ದಲ್ಲಿ ಈ ಬಾರಿ ಕೊಂಚ ಬದಲಿಸಿಕೊಳ್ಳಿ ಎನ್ನುತ್ತಾರೆ ಮೇಕಪ್‌ ಎಕ್ಸ್‌ಪಟ್ರ್ಸ್. ಲಿಪ್‌ಸ್ಟಿಕ್‌ ಕಲರ್‌ ಬದಲಿಸಿ, ಐ ಲೈನರ್‌ ಹಚ್ಚುವ ವಿಧಾನ ಚೇಂಜ್‌ ಮಾಡಿ. ಆದಷ್ಟೂ ಟ್ರೆಂಡಿಯಾಗಿರುವ ಮೇಕಪ್‌ ಮಾಡಿ. ಗಾಢವಾದ ಮೇಕಪ್‌ ಮಾಡಬೇಡಿ. ಲೈಟ್‌ ಮೇಕಪ್‌ ಆಗಿದ್ದಲ್ಲಿ ಐ-ಲೈನರ್‌, ಮಸ್ಕರಾ ಅಥವಾ ಕಾಡಿಗೆ ಹಚ್ಚಿದರೆ ಸಾಕು, ಇನ್ನು ನೈಟ್‌ ಪಾರ್ಟಿಗೆ ಹೋಗುತ್ತಿರುವರಾದರೇ ಉಡುಪಿಗೆ ಹೊಂದುವ ಶೈನಿಂಗ್‌ ಐ-ಶ್ಯಾಡೋ ಹಚ್ಚಿದರೇ ಗ್ಲೋ ಮತ್ತಷ್ಟು ಹೆಚ್ಚುತ್ತದೆ. ಬ್ಲಷರ್‌ನಿಂದ ಗಲ್ಲವನ್ನು ಹೈಲೈಟ್‌ ಮಾಡಿ. ಲಿಪ್‌ಲೈನರ್‌ನಿಂದ ಲಿಪ್‌ ಕಲರ್‌ನ್ನು ಹೈಲೈಟ್‌ ಮಾಡಿ.

ನಯಾ ಹೇರ್‌ ಸ್ಟೈಲ್‌

ಯಾವಾಗಲೂ ಒಂದೇ ಬಗೆಯ ಕೇಶ ವಿನ್ಯಾಸ ಮಾಡಿಕೊಳ್ಳುತ್ತೀರಾ? ಹಾಗಾದಲ್ಲಿ, ಈ ಬಾರಿ ನಿಮ್ಮ ಲುಕ್‌ನಲ್ಲಿ ಕೊಂಚ ಬದಲಾವಣೆ ತನ್ನಿ. ಟೈಟ್‌ ರಿಂಗ್ಲೆಟ್ಸ್‌, ಬಿಗ್‌ ರಿಂಗ್ಲೆಟ್ಸ್‌, ಫುಲ್‌ ಕರ್ಲಿ, ಸ್ಟ್ರೈಟ್‌ ಎಡ್ಜ್‌ ಕರ್ಲ್‌, ಲಾಂಗ್‌, ಬೌನಿ, ಸಾಫ್ಟ್‌ ಕರ್ಲ್ಸ್ ಕರ್ಲ್‌ ಹೇರ್‌ ಫ್ಯಾಷನ್‌ನಲ್ಲಿದೆ. ಟ್ರೈ ಮಾಡಿ ನೋಡಿ.

ಇಮೇಜ್‌ ಬದಲಿಸುವ ಫುಟ್‌ವೇರ್‌

ಸದಾ ಧರಿಸುವ ಫುಟ್‌ವೇರ್‌ ಸೈಡಿಗಿರಿಸಿ. ಧರಿಸುವ ಡ್ರೆಸ್‌ಗೆ ತಕ್ಕಂತೆ ಫುಟ್‌ವೇರ್‌ ಮ್ಯಾಚ್‌ ಮಾಡಿ. ಜೀಬ್ರಾ ಪ್ರಿಂಟ್ಸ್‌, ಬೂಟ್ಸ್‌, ಹೈ ಹೀಲ್ಸ್‌, ಪ್ಲಿಫ್‌ ಫ್ಲಾಪ್‌ನಲ್ಲೂ ಹೊಸ ಬಗೆಯವು ಬಂದಿವೆ. ಅವುಗಳನ್ನು ಆಯ್ಕೆ ಮಾಡಿ. ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಬದಲಾವಣೆ ಕಾಣುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: New Year Party Sarees Fashion: ಹೊಸ ವರ್ಷದ ಹರ್ಷಕ್ಕೆ ಬಂತು ಗ್ಲಾಮರಸ್‌ ಪಾರ್ಟಿವೇರ್‌ ಸೀರೆಗಳು

Exit mobile version