Site icon Vistara News

Sankranti Celebration: ಸಂಕ್ರಾಂತಿ ಸಂಭ್ರಮಕ್ಕೆ ಬಂತು ಬಣ್ಣ ಬಣ್ಣದ ಗಾಳಿಪಟ!

Sankranti Celebration

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಕ್ರಾಂತಿ ಹಬ್ಬದ ಸಂಭ್ರಮ (Sankranti Celebration) ಹೆಚ್ಚಿಸಲು ಮಾರುಕಟ್ಟೆಯಲ್ಲಿ ನಾನಾ ಬಣ್ಣಬಣ್ಣದ ಡಿಸೈನ್‌ನ ಗಾಳಿಪಟಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವು ಮಕ್ಕಳನ್ನು ಸೆಳೆಯುತ್ತಿರುವುದು ಮಾತ್ರವಲ್ಲ, ಯಂಗ್‌ಸ್ಟರ್ಸ ಅನ್ನು ಕೂಡ ಸೆಳೆಯುತ್ತಿವೆ. ‘ಹಬ್ಬದ ಸಮಯದಲ್ಲಿ, ಮಾರುಕಟ್ಟೆಯಲ್ಲಿಸುಮ್ಮನೇ ಒಂದು ಸುತ್ತು ಹಾಕಿದರೆ ಸಾಕು, ಬಣ್ಣಬಣ್ಣದ ಗಾಳಿಪಟಗಳು ಸಂಕ್ರಾಂತಿ ಹತ್ತಿರ ಬಂದಿರುವುದನ್ನು ಸಾರಿ ಸಾರಿ ಹೇಳುತ್ತವೆ. ಗುಜರಾತ್‌ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿಈ ಸಂದರ್ಭದಲ್ಲಿ ಗಾಳಿಪಟದ ಸ್ಪರ್ಧೆಗಳೇ ನಡೆಯುತ್ತವೆ. ನಾನಾ ಕಡೆ ಕೈಟ್‌ ಫೆಸ್ಟಿವಲ್‌ಗಳೂ ಕೂಡ ನಡೆಯುತ್ತವೆ’ ಎನ್ನುತ್ತಾರೆ ಗಾಳಿಪಟ ಹಾರಿಸುವ ಧೀರಜ್‌ ಹಾಗೂ ಜಯಂತ್‌. ಇನ್ನು, ಬೆಂಗಳೂರಿನ ಗಾಂಧಿ ಬಜಾರ್‌, ಜಯನಗರ, ಮಲ್ಲೇಶ್ವರ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ಸೇರಿದಂತೆ ಸಾಕಷ್ಟು ಸ್ಟ್ರೀಟ್‌ ಶಾಪ್‌ಗಳಲ್ಲಿ ಹಾಗೂ ಸ್ಟೇಷನರಿ ಅಂಗಡಿಗಳಲ್ಲಿ ನಾನಾ ವಿನ್ಯಾಸದ ರೇಡಿಮೇಡ್‌ ಗಾಳಿಪಟಗಳು ದೊರೆಯುತ್ತವೆ.

ಗಾಳಿಪಟ ಯಾಕೆ ಹಾರಿಸುತ್ತಾರೆ?

ಈ ಸಂಕ್ರಾಂತಿ ಸೀಸನ್‌ನಲ್ಲಿ ಗಾಳಿಪಟ ಯಾಕಾಗಿ ಹಾರಿಸುತ್ತಾರೆ? ಹಬ್ಬಕ್ಕೂ ಇದಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಇದಕ್ಕೂ ಕಾರಣವಿದೆ. ಚಳಿಗಾಲದಲ್ಲಿ ಮೈಯ್ಯೆಲ್ಲ ಬಿರುಕು ಮೂಡಿ, ಶೀತ, ಕೆಮ್ಮು ಬರುವುದು ಸಾಮಾನ್ಯ. ಇನ್ನು ಈ ಸೀಸನ್‌ ಕೊನೆಯಾಗುತ್ತಾ ಬಂದಂತೆ, ವಸಂತ ಋುತುವಿನ ಆರಂಭವನ್ನು ನಿರೀಕ್ಷೆ ಮಾಡಲಾಗುತ್ತದೆ. ಹಾಗಾಗಿ ಸಂತಸದಿಂದ ಬರ ಮಾಡಿಕೊಳ್ಳುವ ಹಬ್ಬದ ದಿನದಿಂದ ಹಗಲು ಧೀರ್ಘವಾಗುತ್ತದೆ. ಈ ಸಂದರ್ಭದಲ್ಲಿ ಗಾಳಿಪಟ ಹಾರಿಸುವ ನೆಪದಲ್ಲಿ , ಬಿಸಿಲಿಗೊಡ್ಡುವುದು ಸಾಮಾನ್ಯವಾಗುತ್ತದೆ ಎನ್ನುತ್ತಾರೆ ಹಿರಿಯರು.

ಉತ್ತಮ ಭಾಂದವ್ಯಗೆ ನಾಂದಿ

ಇನ್ನು, ಈ ಸಂದರ್ಭದಲ್ಲಿ ನಮಗೇ ಗೊತ್ತಿಲ್ಲದೆ ಉತ್ತರಾಯಣದ ಆರೋಗ್ಯಕರ ಸೂರ್ಯನ ಬಿಸಿಲು ನಮ್ಮ ದೇಹದ ಹಲವು ಇನೆಫೆಕ್ಷನ್‌ಗಳ ವಿರುದ್ಧ ಹೋರಾಡುತ್ತದೆ. ಇದರಿಂದ ಶೀತ ಕೆಮ್ಮು ಇತರೆ ಕಿರಿಕಿರಿಗಳು ದೂರಾಗುತ್ತವೆ. ಕಣ್ಣು ಹಾಗೂ ಚರ್ಮದ ಆರೋಗ್ಯಕ್ಕೆ ಒಳ್ಳೆಯದೆನಿಸಿದ ವಿಟಮಿನ್‌ ಡಿ ದೇಹಕ್ಕೆ ಸಿಗುತ್ತದೆ. ಎಲ್ಲರೂ ಒಟ್ಟಾಗಿ ಆಡುವುದರಿಂದ ಸಮುದಾಯದ ನಡುವೆ ಬಾಂಧವ್ಯವೂ ಬೆಳೆಯುತ್ತದೆ ಎನ್ನುತ್ತಾರೆ ಎಕ್ಸ್‌ಪಟ್ರ್ಸ್.

ಎಚ್ಚರವಹಿಸಿ

ಗಾಳಿಪಟದ ಆಟ ಕೆಲವೊಮ್ಮೆ ಪಕ್ಷಿಗಳಿಗೆ ಸಜೆಯಾಗುವುದು ಇದೆ. ಗಾಳಿಪಟದ ದಾರ ಹಲವು ಬಾರಿ ಹಕ್ಕಿಗಳ ರೆಕ್ಕೆ ಕತ್ತರಿಸಿವೆ. ಅಲ್ಲದೇ, ಮಕ್ಕಳು ಗಾಳಿಪಟವನ್ನು ಹಾರಿಸುವಾಗ ಆದಷ್ಟೂ ದೊಡ್ಡವರ ಸಹಕಾರ ಪಡೆದುಕೊಳ್ಳುವುದು ಮುಖ್ಯ. ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ ಎನ್ನುತ್ತಾರೆ ಗಾಳಿಪಟ ಹಾರಿಸಲು ಇಷ್ಟಪಡುವ ನಟಿ ರಚನಾ.

ಗಾಳಿಪಟದ ಆಯ್ಕೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sankranti Fashion 2024: ಸಂಕ್ರಾಂತಿ ಸೆಲೆಬ್ರೇಷನ್‌ಗೆ ಬಂತು ಬಿಗ್‌ ಬಾರ್ಡರ್‌ ರೇಷ್ಮೆ ಲಂಗ-ದಾವಣಿ

Exit mobile version