ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಗು ರಂಗಾದ ವೈಬ್ರೆಂಟ್ ಶೇಡ್ಸ್‌ನ ಟೈ ಡೈ ಶರ್ಟ್ ಕೋ ಆರ್ಡ್ ಸೆಟ್‌ಗಳು ಈ ಬಾರಿಯ ವಿಂಟರ್ ಸೀಸನ್‌ನ್ನಲ್ಲಿ (Winter Fashion) ಯುವತಿಯರನ್ನು ರಂಗೇರಿಸುತ್ತಿವೆ. ಒಂದಕ್ಕಿಂತ ಹೆಚ್ಚು ವೈಬ್ರೆಂಟ್ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ. ಸೀಸನ್ ಕಲರ್ಫುಲ್ ಫ್ಯಾಷನ್ ಸ್ಟೇಟ್ಮೆಂಟ್‌ಗೆ ಸೇರಿವೆ.
ವಿಂಟರ್‌ಗೆ ವೈಬ್ರೆಂಟ್ ಶೇಡ್ಸ್
“ಕೋ ಆರ್ಡ್ ಸೆಟ್ ಕಳೆದ ಸೀಸನ್‌ನ್ನಿಂದಲೂ ಚಾಲ್ತಿಯಲ್ಲಿವೆ. ವಿಶೇಷವೆಂದರೇ, ಈ ಸೀಸನ್‌ಗೆ ತಕ್ಕಂತೆ ವಿನ್ಯಾಸ ಬದಲಿಸಿಕೊಂಡಿವೆ. ಶರ್ಟ್ ಶೈಲಿಯಲ್ಲಿಯೂ ಬಿಡುಗಡೆಗೊಂಡಿವೆ. ಅದಕ್ಕಿಂತ ಹೆಚ್ಚಾಗಿ ವಿಂಟರ್ ಮೂಡ್ ಫ್ರೆಶ್ ಆಗಿಸುವ ಎದ್ದು ಕಾಣುವಂತಹ ವೈಬ್ರೆಂಟ್ ಕಲರ್ಸ್‌ನಲ್ಲಿ ಬಿಡುಗಡೆಗೊಂಡಿವೆ. ನೋಡಲು ಆಕರ್ಷಕವಾಗಿ ಬಿಂಬಿಸುತ್ತಿವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ. ಅವರ ಪ್ರಕಾರ, ಸೀಸನ್‌ಗೆ ತಕ್ಕಂತಿರುವ ವಿನ್ಯಾಸದ ಕೋ ಆರ್ಡ್ ಸೆಟ್‌ಗಳು ನಮ್ಮನ್ನು ಟ್ರೆಂಡಿಯಾಗಿಸುತ್ತವೆ. ಹಾಗಾಗಿ, ಸೂಕ್ತ ಆಯ್ಕೆ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ.
ಇತ್ತೀಚೆಗೆ ಬಾಲಿವುಡ್ ನಟಿಯರಾದ ಅನುಷ್ಕಾ ಸೇನ್, ರಿಯಾ ಸೇನ್, ಅಕಾಂಕ್ಷಾ ಸೇರಿದಂತೆ ನಾನಾ ಸೆಲೆಬ್ರೆಟಿಗಳು ಧರಿಸಿದ ಟೈ ಡೈ ಕೋ ಆರ್ಡ್ ಸೆಟ್‌ಗಳು ಟ್ರೆಂಡಿಯಾಗಿವೆ. ಬೇಡಿಕೆ ಮೊದಲಿಗಿಂತ ಹೆಚ್ಚಿಸಿಕೊಂಡಿವೆ.
ಶರ್ಟ್ ಸ್ಟೈಲ್ ಟೈ ಡೈ ಕೋ ಆರ್ಡ್ ಸೆಟ್
ಶರ್ಟ್ ಸ್ಟೈಲ್‌ನ ಕೋ ಆರ್ಡ್ ಸೆಟ್ ಟೈ ಡೈ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿವೆ. ಇವು ನ್ಯಾಚುರಲ್ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿರುವುದರಿಂದ ಬೆಲೆ ಕೂಡ ಹೆಚ್ಚು. ಇದರ ರಿಪ್ಲಿಕಾ ಔಟ್ಫಿಟ್‌ಗಳು ಲಭ್ಯ. ಆದರೆ, ಆನ್‌ಲೈನ್‌ನ್ನಲ್ಲಿ ಟೈ ಡೈ ಕೋ ಆರ್ಡ್ ಸೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇವುಗಳಲ್ಲಿ ಪರಿಸರ ಸ್ನೇಹಿ ಫ್ಯಾಬ್ರಿಕ್‌ನಲ್ಲೂ ದೊರಕುತ್ತಿದ್ದು, ಸಾಕಷ್ಟು ಫ್ಯಾಷನ್ ಪ್ರಿಯರು ಹಾಗೂ ಸೆಲೆಬ್ರೆಟಿಗಳು ಧರಿಸುತ್ತಿರುವುದು ಕಂಡು ಬರುತ್ತಿದೆ.
ವೀಕೆಂಡ್ ಔಟಿಂಗ್‌ಗೂ ಸೂಕ್ತ
ಅತಿ ಹೆಚ್ಚು ಯುವತಿಯರು ತಮ್ಮ ಔಟಿಂಗ್ ಅಥವಾ ಹಾಲಿಡೇ ರಿಲ್ಯಾಕ್ಸೆಷನ್ ಸಮಯದಲ್ಲಿ ಇವನ್ನು ಹೆಚ್ಚಾಗಿ ಧರಿಸುತ್ತಿದ್ದಾರೆ. ಫೋಟೋ ಶೂಟ್‌ನಲ್ಲಿ ಇವು ಕಲರ್ಫುಲ್ ಆಗಿ ಕಾಣುತ್ತವೆ ಎಂಬುದು ಇದಕ್ಕೆ ಕಾರಣ ಎನ್ನುತ್ತಾರೆ ಫ್ಯಾಷನ್ ಪ್ರಿಯರು.
ಶರ್ಟ್ ಕೋ ಆರ್ಡ್ ಸೆಟ್ ಪ್ರಿಯರಿಗಾಗಿ
- ಕಲರ್ಫುಲ್ ಫಂಕಿ ಆಕ್ಸೆಸರೀಸ್ ಧರಿಸಬಹುದು.
- ಫಂಕಿ ಲುಕ್ ಕೂಡ ಓಕೆ.
- ಟ್ರೆಡಿಷನಲ್ ಹೇರ್ಸ್ಟೈಲ್ ಬೇಡ.
- ಓವರ್ ಮೇಕಪ್ ಬೇಡ.
- ಸನ್ಗ್ಲಾಸಸ್ ಧರಿಸಿದಲ್ಲಿ ಆಕರ್ಷಕವಾಗಿ ಕಾಣುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್ ಔಟ್‌ಫಿಟ್ ಆಯ್ಕೆಗೆ ಇಲ್ಲಿದೆ 5 ಸಿಂಪಲ್ ಸೂತ್ರ