ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಫೆಸ್ಟೀವ್ ಸೀಸನ್‌ನಲ್ಲಿ ನಾನಾ ಬಗೆಯ ಕ್ರಿಸ್ಮಸ್ ಪಾರ್ಟಿ ಡ್ರೆಸ್‌ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಟಿನೇಜ್, ಕಾಲೇಜ್ ಹುಡುಗಿಯರಿಂದ ಹಿಡಿದು ಮಧ್ಯ ವಯಸ್ಕ ಮಹಿಳೆಯರಿಗೂ ಸೂಟ್ ಆಗುವಂತಹ ವೆರೈಟಿ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.
ನಾನಾ ವಿನ್ಯಾಸದ ಕ್ರಿಸ್ಮಸ್ ಪಾರ್ಟಿ ಡ್ರೆಸ್
ಸಿಕ್ವೀನ್ಸ್, ಶೈನಿಂಗ್ ಚಮಕಿ ಫ್ರಾಕ್‌ಗಳು, ಮ್ಯಾಕ್ಸಿ, ತ್ರೀ ಪೀಸ್‌ಡ್ರೆಸ್ ಸೇರಿದಂತೆ ನಾನಾ ಬಗೆಯ ಶೈನಿಂಗ್ ಉಡುಪುಗಳು ಈ ಕ್ರಿಸ್ಮಸ್ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಬಿಂದಾಸ್ ಲುಕ್ ನೀಡುವ ವೆಸ್ಟರ್ನ್ ಲುಕ್ ನೀಡುವ ಉಡುಪುಗಳು ಹೆಚ್ಚು ಚಾಲ್ತಿಯಲ್ಲಿವೆ. ಇವುಗಳಲ್ಲಿ ರಿಪ್ಡ್ ಜೀನ್ಸ್, ಬೋಹೋ ಡ್ರೆಸ್, ಲೆಗ್ ಪ್ಯಾಂಟ್ ರಾಂಪರ್, ಕ್ರ್ಯೂ ನೆಕ್ ಲ್ಯಾಂಟೆರ್ನ್ ಸ್ಲೀವ್ ಸ್ವೆಟರ್, ಲೇಸ್ ಕ್ರಾಪ್ ಡ್ರೆಸ್, ಬೆರ್ರಿ ಡ್ರೆಸ್, ಸಾಟೀನ್ ಔಟ್‌ಫಿಟ್‌ಗಳು ಸೇರಿವೆ.
ಕ್ರಿಸ್ಮಸ್ ಪಾರ್ಟಿಗೆ ಮಿಕ್ಸ್ ಮ್ಯಾಚ್ ಡ್ರೆಸ್
ಸ್ಕರ್ಟ್, ಶಾಟ್ರ್ಸ್, ಪ್ಲೋವಿ ಪ್ಯಾಂಟ್ಸ್, ಕಲರ್ ಪ್ಯಾಂಟ್ಸ್, ಮಿನಿ ಸಿಕ್ವೀನ್ ಸ್ಕರ್ಟ್, ವ್ರಾಪ್ ಸ್ಕರ್ಟ್, ಬೆಲ್ಟ್ ಸ್ಕರ್ಟ್‌ಗಳನ್ನು ಟ್ರೆಂಡಿ ಕಟೌಟ್ ಕ್ರಾಪ್ ಟಾಪ್, ಕ್ಯಾಮಿ ಟಾಪ್, ಟೈಯಿಂಗ್ ಟಾಪ್‌ಗಳೊಂದಿಗೆ ಮಿಕ್ಸ್ ಮ್ಯಾಚ್ ಮಾಡಬಹುದು. ಇನ್ನು ತ್ರೀ ಪೀಸ್‌ನಲ್ಲಿ ಬರುವ ಟಾಪ್, ಸ್ಕರ್ಟ್ ಹಾಗೂ ಟಾಪ್‌ಗಳಿಂದ ಲೇಯರ್ ಲುಕ್ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ಆಕರ್ಷಕ ಪಾರ್ಟಿ ಫ್ರಾಕ್ಸ್
ಇನ್ನು ಆಕರ್ಷಕ ಪಾರ್ಟಿ ಫ್ರಾಕ್‌ಗಳು ಪ್ರಚಲಿತದಲ್ಲಿವೆ. ಸ್ಟ್ರಾಪ್ ಫ್ರಾಕ್, ಬಾಡಿಕಾನ್, ಸ್ಲಿಪ್ ಫ್ರಾಕ್, ಸಿಂಗಲ್ ಶೋಲ್ಡರ್, ಶೋಲ್ಡರ್‌ಲೆಸ್ ಫ್ರಾಕ್‌ಗಳು ಕ್ರಿಸ್ಮಸ್‌ಗೆ ಸೂಟ್ ಆಗುವ ಹೊಸ ವಿನ್ಯಾಸದಲ್ಲಿ ಈ ಸೀಸನ್‌ನಲ್ಲಿ ಬಂದಿವೆ ಎನ್ನುತ್ತಾರೆ ಮಾರಾಟಗಾರರು.
ಪಾರ್ಟಿ ಡ್ರೆಸ್‌ಗಳಿಗೆ ಹೆಚ್ಚಿದೆ ಬೇಡಿಕೆ
ಕ್ರಿಸ್ಮಸ್ ಸೆಲೆಬ್ರೇಷನ್‌ನಲ್ಲಿ ಹೆಚ್ಚಾಗಿ ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚುಹೆಚ್ಚು ಪಾರ್ಟಿ ಲುಕ್ ಇರುವ ಉಡುಪುಗಳು ಬಿಕರಿಗೊಳ್ಳುತ್ತವೆ. ಟ್ರೆಡಿಷನಲ್ ಆಗಿ ಕಾಣಿಸುವ ಔಟ್‌ಫಿಟ್‌ಗಳು ಸೈಡಿಗೆ ಸರಿಯುತ್ತವೆ. ಮರೆಯಾಗುತ್ತವೆ. ಈ ಸೀಸನ್‌ನಲ್ಲಿ ಆದಷ್ಟೂ ಕ್ರಿಸ್ಮಸ್ ಮಾತ್ರವಲ್ಲ, ನ್ಯೂ ಯಿಯರ್‌ಗೂ ಸೂಟ್ ಆಗುವಂತವಕ್ಕೆ ಬೇಡಿಕೆ ಹೆಚ್ಚಾಗುತ್ತದೆ ಎನ್ನುತ್ತಾರೆ ಮಾರಾಟಗಾರರು.
ಪಾರ್ಟಿ ಡ್ರೆಸ್ ಪ್ರಿಯರ ಗಮನಕ್ಕೆ
ಪಾರ್ಟಿ ಡ್ರೆಸ್‌ಗಳಿಗೆ ಲೇಯರ್ ಲುಕ್ ನೀಡಬಹುದು.
ಆಕ್ಸೆಸರೀಸ್ ಸರಿಯಾಗಿ ಮ್ಯಾಚ್ ಮಾಡಬೇಕು.
ಚಂಕಿ ಬೂಟ್ಸ್ ಹಾಗೂ ಶೈನಿಂಗ್ ಫುಟ್‌ವೇರ್ ಧರಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion Show | ಮೈಸೂರಿನಲ್ಲಿ ಸೌತ್ ಇಂಡಿಯಾ-2022 ಫ್ಯಾಷನ್ ಶೋ, ಮೋಹಕ ನಡಿಗೆಯಿಂದ ಮನಗೆದ್ದ ಸುಂದರಿಯರು