Site icon Vistara News

Crazy Hairstyle: ಹೊಸ ಹೇರ್‌ಸ್ಟೈಲ್‌, ಇಲಿ ಬಾಲದಂತೆ ಕಾಣುವ ಜಡೆ! ನೀವೂ ಪ್ರಯತ್ನಿಸಿ!!

Crazy Hairstyle

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಲಿ ಬಾಲದಂತೆ ಕಾಣುವ ರ‍್ಯಾಟ್‌ ಟೇಲ್ ಹೇರ್‌ಸ್ಟೈಲ್‌ಗೂ (Crazy Hairstyle ) ಇದೀಗ ಹೈ ಫ್ಯಾಷನ್ ಟಚ್ ಸಿಕ್ಕಿದೆ. ಅರೆರೆ., ಈ ವಿಷಯ ನಗು ತರಿಸುತ್ತಿದೆಯಾ! ಯಾರದೇ ಹೇರ್‌ಸ್ಟೈಲ್‌ ನೋಡಿ, ನಿನ್ನ ಕೂದಲು ನೋಡಲು ಒಳ್ಳೆ ಇಲಿ ಬಾಲದಂತಿದೆಯಲ್ಲ! ಹ್ಹಹ್ಹಹ್ಹ… ಎಂದು ನೀವು ಇನ್ಮುಂದೆ ಹೇರ್‌ಸ್ಟೈಲ್‌ ಅನ್ನು ಅಣಕಿಸುವಂತಿಲ್ಲ! ಹೌದು, ಯಾಕೆಂದರೇ, ಈ ಅಣಕಿಸುವ ಈ ಹೇರ್‌ಸ್ಟೈಲ್‌ಗೂ ಇದೀಗ ಹೈ ಫ್ಯಾಷನ್‌ನ್ನಲ್ಲಿ ಸ್ಥಾನ ಸಿಕ್ಕಿದೆ. ಇದಕ್ಕೆ ಪೂರಕ ಎಂಬಂತೆ, ರ‍್ಯಾಂಪ್‌ನ ಮಾಡೆಲ್‌ಗಳು ಹಾಗೂ ಸೆಲೆಬ್ರೆಟಿಗಳು ಈ ಹೇರ್‌ಸ್ಟೈಲ್‌ ಪ್ರಯೋಗ ಮಾಡಿದ್ದಾರೆ. ಆದರೆ, ಎಲ್ಲಿಯೂ ಟ್ರೆಂಡ್ ಆಗಿಲ್ಲವಷ್ಟೇ! ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.

ಏನಿದು ಇಲಿ ಬಾಲದ ಹೇರ್‌ಸ್ಟೈಲ್‌?

ಇದು ನಾವು ನಮ್ಮ ಕನ್ನಡದಲ್ಲಿ ಆಡುಭಾಷೆಯಲ್ಲಿ ಬಳಸುವ ಪದ. ಮೊದಲೆಲ್ಲಾ ಯಾರಾದ್ದಾದರೂ ಕೂದಲು ತೆಳ್ಳಗೆ ಕೊನೆಯಲ್ಲೊ ಚೂಪಾಗಿ ಇರುತ್ತದೆಯೋ ಅಥವಾ ಹೆಣೆದಾಗ ಮೊನಚಾಗಿ ಕಾಣುತ್ತದೆಯೋ ಅಂತಹವರ ಹೇರ್‌ಸ್ಟೈಲ್‌ಗೆ ಈ ಪದ ಬಳಸುವುದು ಕಾಮನ್ ಆಗಿತ್ತು. ಉದಾಹರಣೆಗೆ., ಬಹಳ ದಿನಗಳವರೆಗೂ ಕತ್ತರಿಸದ ಕೂದಲು, ಕೆಲವೊಮ್ಮೆ ಕೊನೆಯಲ್ಲಿ ಚೂಪಾಗಿ ತೆಳ್ಳಗಾಗಿರುತ್ತದೆ. ಜಡೆ ಹೆಣೆದಾಗ ನೋಡಲು ಇಲಿ ಬಾಲದಂತೆ ಕಾಣುತ್ತದೆ. ಕೂದಲಿಗೆ ಎಣ್ಣೆ ಹಚ್ಚಿದಾಗ ಅಥವಾ ಮಸಾಜ್ ಮಾಡಿದಾಗ, ಈ ರೀತಿ ಸಾಕಷ್ಟು ಹುಡುಗಿಯರು ಕೂದಲನ್ನು ಹೆಣೆದುಕೊಳ್ಳುತ್ತಿದ್ದರು. ಔಟಿಂಗ್ ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್‌ಸ್ಟೈಲ್‌ ಯಾರೂ ಮಾಡುತ್ತಿರಲಿಲ್ಲ. ಆದರೆ, ಇದೀಗ ಅದೇ ಹೇರ್‌ಸ್ಟೈಲ್‌ ಹಾಲಿವುಡ್ ಹಾಗೂ ಅಂತರಾಷ್ಟ್ರೀಯ ಮಟ್ಟದ ಮಾಡೆಲ್‌ಗಳ ಮೂಲಕ ಹೈ ಫ್ಯಾಷನ್ ಹೇರ್‌ಸ್ಟೈಲ್‌ಗೆ ಎಂಟ್ರಿ ನೀಡಿದೆ. ಫೋಟೋಶೂಟ್‌ಗಳಲ್ಲಿ , ಕೆಲವು ಡಿಸೈನರ್‌ವೇರ್‌ ಜೊತೆ ಈ ಹೇರ್‌ಸ್ಟೈಲ್‌ ಬಳಸುವುದು ಹೆಚ್ಚಾಗಿದೆ. ಅಲ್ಲದೇ ಅಂತರಾಷ್ಟ್ರೀಯ ಮಟ್ಟದ ರ‍್ಯಾಂಪ್‌ ಶೋಗಳಲ್ಲಿ ಈ ರೀತಿಯ ಬ್ರೈಡ್ ಅಥವಾ ಜಡೆಯನ್ನು ಟೈಟಾಗಿ ಹೆಣೆದು ಬಿಡುವುದನ್ನು ಕಾಣಬಹುದು. ನಮ್ಮಲ್ಲಿ ಅಷ್ಟಾಗಿ ಈ ಹೇರ್‌ಸ್ಟೈಲ್‌ ಪಾಪ್ಯುಲರ್ ಅಲ್ಲ, ಆದರೂ, ಇದೀಗ ಹೇರ್‌ಸ್ಟೈಲಿಸ್ಟ್‌ಗಳು ಸೆಲೆಬ್ರೆಟಿಗಳ ವಿಭಿನ್ನ ಲುಕ್‌ಗಾಗಿ ಇವನ್ನು ಪ್ರಯೋಗ ಮಾಡತೊಡಗಿದ್ದಾರೆ ಎನ್ನುತ್ತಾರೆ ಹೇರ್ ಎಕ್ಸ್ಪಟ್ರ್ಸ್.

ಪ್ರಯೋಗಾತ್ಮಕ ಲುಕ್‌ಗಾಗಿ ಈ ಹೇರ್‌ಸ್ಟೈಲ್‌

ನೋಡಲು ಅತ್ಯಾಕರ್ಷಕ ಲುಕ್‌ಗಾಗಿ ಅಲ್ಲ! ಬದಲಿಗೆ ಪ್ರಯೋಗಾತ್ಮಕ ಲುಕ್‌ಗಾಗಿ ಈ ವಿನ್ಯಾಸವನ್ನು ಮಾಡಲಾಗುತ್ತದೆ. ಟ್ರೆಂಡಿಯಾಗಿರದಿದ್ದರೂ, ಹೈ ಫ್ಯಾಷನ್ ಹೇರ್‌ಸ್ಟೈಲ್‌ನಲ್ಲಿ ಇದು ಸೇರಿದೆ. ಆದರೆ, ಸಾಮಾನ್ಯ ಜನರನ್ನು ತಲುಪಿಲ್ಲ! ಯಾರಿಗೂ ಇಷ್ಟವಾಗಿಯೂ ಇಲ್ಲ! ಇದು ಹಿಂದೆಲ್ಲಾ ಮನೆ ಹೇರ್‌ಸ್ಟೈಲ್‌ ಆಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಹಲವು ಮಹಿಳೆಯರು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಒಟ್ಟಿನಲ್ಲಿ, ಇಂತಹ ಕ್ರೇಝಿ ಹೇರ್‌ಸ್ಟೈಲ್‌ಗಳು ಕೇವಲ ಫೋಟೋಶೂಟ್ ಹಾಗೂ ಪ್ರಯೋಗಗಳಿಗೆ ಮಾತ್ರ ಸೀಮಿತವಾಗಿ ಉಳಿದುಬಿಡುತ್ತವೆ ಎನ್ನುತ್ತಾರೆ ಮಾಡೆಲ್‌ಗಳಾದ ದೀಪ್ತಿ, ರಾಶಿ ಹಾಗೂ ರಿಯಾ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Funky Pant Suit Fashion: ಮೆನ್ಸ್ ಕ್ಲಾಸಿ ಪ್ಯಾಂಟ್‌ ಸೂಟ್‌ಗೂ ಸಿಕ್ತು ಫ್ಯಾನ್ಸಿ ಫಂಕಿ ಲುಕ್‌!

Exit mobile version