-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿ ನಡೆದ ಹೆರಿಟೇಜ್ ಮಾಡೆಲ್ ಆಫ್ ಕರ್ನಾಟಕ ಫ್ಯಾಷನ್ ಪೇಜೆಂಟ್‌ನಲ್ಲಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿತ್ತು. ಕ್ರೀಮ್ ಬಿಸ್ಕೆಟ್ ಎಂಟರ್‌ಟೈನ್ಮೆಂಟ್ ಸಂಸ್ಥೆ ವತಿಯಿಂದ ಕೊಂಡಜ್ಜಿ ಬಸಪ್ಪ ಆಡಿಟೋರಿಯಂನಲ್ಲಿ ನಡೆದ ಐದನೇ ಆವೃತ್ತಿಯ ಲಿಟಲ್, ಮಿಸ್, ಮಿಸ್ಟರ್ ಹಾಗೂ ಮಿಸೆಸ್ ಹೆರಿಟೇಜ್ ಮಾಡೆಲ್ ಆಫ್ ಕರ್ನಾಟಕ ಫ್ಯಾಷನ್ ಪೇಜೆಂಟ್‌ನಲ್ಲಿ ಎಂದಿನಂತೆ ನಾನಾ ರೌಂಡ್‌ಗಳಲ್ಲಿ ಭಾವಿ ಮಾಡೆಲ್‌ಗಳು ಕ್ಯಾಟ್‌ವಾಕ್ ಮಾಡಿದರು.
ಟ್ರೆಡಿಷನಲ್ ರೌಂಡ್‌ಗೆ ಪ್ರಾಮುಖ್ಯತೆ
ಟ್ರೆಡಿಷನಲ್ ರೌಂಡ್‌ಗಳಲ್ಲಿ ಭಾಗವಹಿಸಿದ್ದ ಹೆಣ್ಣು ಮಕ್ಕಳು ಸೀರೆಗಳಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದರೇ, ಹುಡುಗರು ನಾನಾ ವೇಷದಲ್ಲಿ ಕಾಣಿಸಿಕೊಂಡರು. ನೋಡುಗರ ಮನಸೆಳೆಯಿತು. ಮಕ್ಕಳು ಕೂಡ ಮುದ್ದು ಮುದ್ದಾಗಿ ಕಾಣುತ್ತಿದ್ದರು. ವೆಸ್ಟರ್ನ್ ರೌಂಡ್‌ನಲ್ಲಿ ಕ್ಯಾಶುವಲ್, ವೆಸ್ಟರ್ನ್ ಔಟ್‌ಫಿಟ್ ಹಾಗೂ ಬಿಂದಾಸ್ ಸ್ಟೇಲ್‌ಸ್ಟೇಟ್‌ಮೆಂಟ್‌ಗಳಿಗೆ ಆದ್ಯತೆ ನೀಡಲಾಗಿತ್ತು. ಸ್ಟೈಲ್ ಸ್ಟೇಟ್‌ಮೆಂಟ್‌ಗೆ ತಕ್ಕಂತೆ ಭಾವಿ ಮಾಡೆಲ್‌ಗಳು ರ್ಯಾಂಪ್‌ನಲ್ಲಿ ವಾಕ್ ಮಾಡಿದರು. ಒಬ್ಬೊಬ್ಬರ ಲುಕ್ ಕೂಡ ವಿಭಿನ್ನವಾಗಿತ್ತು.
ಸಂಸ್ಕೃತಿ ಎತ್ತಿ ಹಿಡಿಯುವ ಫ್ಯಾಷನ್ ಶೋ
“ನಮ್ಮ ಫ್ಯಾಷನ್ ಪೇಜೆಂಟ್‌ನಲ್ಲಿ ಸಂಸ್ಕೃತಿ ಪರಂಪರೆ ಎತ್ತಿ ಹಿಡಿಯುವ ರೌಂಡ್‌ಗೆ ಹೆಚ್ಚು ಪ್ರಾದಾನ್ಯತೆ. ಇದು ಇಡೀ ಫ್ಯಾಷನ್ ಪೇಜೆಂಟ್‌ನ ಹೈಲೈಟ್. ಈ ರೌಂಡ್‌ನಲ್ಲಿ ಪ್ರತಿ ಭಾವಿ ಮಾಡೆಲ್ ಕೂಡ ನಮ್ಮ ಸಂಸ್ಕೃತಿ ಎತ್ತಿ ಹಿಡಿದ ವ್ಯಕ್ತಿಯನ್ನು ಪ್ರತಿನಿಧಿಸುತ್ತಾರೆ. ಇದು ಶೋನ ಹೈಲೈಟ್ ಎಂದರೂ ಅತಿಶಯೋಕ್ತಿಯಾಗದು” ಎಂದು ಸಂಸ್ಥೆಯ ಮುಖ್ಯಸ್ಥ ಅವಿನಾಶ್ ಹೇಳಿದರು.
ವಿಜೇತರ ಪಟ್ಟಿ
ಮಿಸ್ ಕೆಟಗರಿಯಲ್ಲಿ ನಂದಿನಿ ಶೆಟ್ಟಿ,ಮಿಸ್ಟರ್ ಕೆಟಗರಿಯಲ್ಲಿ ವಿನ್ನಿ, ಮಿಸೆಸ್ ಕೆಟಗರಿಯಲ್ಲಿ ಅನುಶಾ, ಕಿಡ್ಸ್ ಕೆಟಗರಿಯಲ್ಲಿ ಅನ್ವಿಕಾ ಹಾಗೂ ಸ್ನೇಹ ವಿಜೇತರಾದರು.
ಐದನೇ ಆವೃತ್ತಿಯ ಈ ಫ್ಯಾಷನ್ ಪೇಜೆಂಟ್‌ಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಾಲಿ ಡೇಸ್ ಸಿನಿಮಾ ಖ್ಯಾತಿಯ ನಟ ಪ್ರದೀಪ್, ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್, ಕಾಮಿಡಿ ಕಿಲಾಡಿ ಖ್ಯಾತಿಯ ಲೋಕೇಶ್, ನಟ ಕಂ ನಿರ್ದೇಶಕ ಚಕ್ರವರ್ತಿ, ನಟ ಬಾರ್ಗವ್ ರಾಜ್, ನಟಿ ಹರ್ಷಿತಾ ಮಹಾದೇವ್‌ಹಾಗೂ ಇನ್ನಿತರರು ಆಗಮಿಸಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)